ಮಂಗಳವಾರ, ಮಾರ್ಚ್ 9, 2021
31 °C

ಜೈನ ಧರ್ಮದ ಆದಿನಾಥರ ಪಂಚಲೋಹ ವಿಗ್ರಹ ಪತ್ತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜೈನ ಧರ್ಮದ ಆದಿನಾಥರ ಪಂಚಲೋಹ ವಿಗ್ರಹ ಪತ್ತೆ

ಬನಹಟ್ಟಿ:  ಜೈನ ಧರ್ಮದ ಪ್ರಥಮ ತೀರ್ಥಂಕರ ಭಗವಾನ್ ಆದಿನಾಥರ ಪಂಚಲೋಹದ ವಿಗ್ರಹ ಸಮೀಪದ ಹಳಿಂಗಳಿ ಗ್ರಾಮದ ಭದ್ರಗಿರಿ ಬೆಟ್ಟ ಪ್ರದೇಶದ ಬಳಿ ಮಂಗಳವಾರ ಬೆಳಗಿನ ಜಾವ ಪತ್ತೆಯಾಗಿದೆ.‘ಹಾಳು ಬಿದ್ದ ಕೋಟೆಯ ಈಶಾನ್ಯ ದಿಕ್ಕಿನ ಗೋಪುರ ಜೀರ್ಣೋದ್ಧಾರ ಸಂದರ್ಭದಲ್ಲಿ ಈ ವಿಗ್ರಹ ಪತ್ತೆಯಾಗಿದೆ. ಈ ಪ್ರದೇಶವು ಜೈನ ಧರ್ಮದ ಪ್ರಮುಖ ಕೇಂದ್ರವಾಗಿತ್ತು ಎಂಬುದಕ್ಕೆ ಇದು ಮತ್ತೊಂದು ಪುರಾವೆ’ ಎಂದು ಭದ್ರಗಿರಿ ಬೆಟ್ಟ ಪ್ರದೇಶದ 108 ಕುಲರತ್ನಭೂಷಣ ಮಹಾರಾಜರು ತಿಳಿಸಿದ್ದಾರೆ.‘ಕ್ರಿ.ಪೂ. 2 ನೇ ಶತಮಾನದಲ್ಲಿ ಉತ್ತರ ಭಾರತದ ಆಚಾರ್ಯ ಭದ್ರಬಾಹು ಮುನಿಗಳು ತಮ್ಮ ಶಿಷ್ಯರೊಂದಿಗೆ ದಕ್ಷಿಣ ಭಾರತದ ಶ್ರವಣಬೆಳಗೊಳಕ್ಕೆ ಹೋಗುವ ಮಾರ್ಗದಲ್ಲಿ ಹಳಿಂಗಳಿ, ತೇರದಾಳ ಹಾಗೂ ಸತ್ತ ಮುತ್ತಲಿನ ಭಾಗದಲ್ಲಿದ್ದು, ಚಾತುರ್ಮಾಸ ಕೈಗೊಂಡಿದ್ದರು. ಇವುಗಳಲ್ಲಿ ಹಳಿಂಗಳಿ ಬೆಟ್ಟದಲ್ಲಿ 603 ಗುಂಪಾಗಳನ್ನು ಪತ್ತೆ ಮಾಡಲಾಗಿದೆ’ ಎಂದು ಹೇಳಿದರು.‘ಈ ವಿಗ್ರಹವು  ಅಂದಾಜು 20 ಇಂಚು ಎತ್ತರ ಇದೆ. ಪೀಠದ ಕೆಳಗೆ ನಂದಿಯ ಲಾಂಛನವಿದೆ. ಆದ್ದರಿಂದ ಇದು ವೃಷಭನಾಥರ ವಿಗ್ರಹವಾಗಿದೆ’ ಎಂದು ಅವರು ವಿವರಿಸಿದರು.‘ವಿಗ್ರಹದ ಯಾವುದೇ ಭಾಗದಲ್ಲಿ ಯಾವುದೇ ತರಹದ ಲಿಪಿಗಳು ಕಂಡು ಬಂದಿಲ್ಲ. ಹೀಗಾಗಿ ಇದು ಯಾವ ಕಾಲದ್ದು ಎಂದು ಊಹಿಸುವುದು ಸಾಧ್ಯವಿಲ್ಲ. ಒಟ್ಟಿನಲ್ಲಿ ಇದು ಭಗವಾನ್ ವೃಷಭನಾಥರ ಅತ್ಯಂತ ವಿಶಿಷ್ಟ ವಿಗ್ರಹವಾಗಿದೆ’ ಎಂದು ಮಹಾರಾಜರು ತಿಳಿಸಿದ್ದಾರೆ.ವಿಗ್ರಹ ಪತ್ತೆಯಾದ ಸುದ್ದಿ ತಿಳಿಯುತ್ತಿದ್ದಂತೆಯೇ ಹಳಿಂಗಳಿ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಜೈನ ಬಾಂಧವರು ಭದ್ರಗಿರಿ ಬೆಟ್ಟಕ್ಕೆ ಬಂದು ವೀಕ್ಷಣೆ ಮಾಡಿ, ವಿಶೇಷ ಪೂಜೆ ಸಲ್ಲಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.