ಜೈನ ಮಂದಿರಗಳ

ಶುಕ್ರವಾರ, ಜೂಲೈ 19, 2019
22 °C

ಜೈನ ಮಂದಿರಗಳ

Published:
Updated:

ಮೂಡುಬಿದಿರೆ ಸಿದ್ಧಾಂತ ಮಂದಿರದಲ್ಲಿ ಪ್ರಾಚೀನ ಜಿನಬಿಂಬಗಳನ್ನು ಕಳ್ಳತನ ಮಾಡಿದ ಪ್ರಕರಣ ವರದಿಯಾಗಿದೆ. ಸ್ಥಳೀಯ ಶ್ರೀ ಜೈನಮಠದ ಆಡಳಿತಕ್ಕೊಳಪಟ್ಟ 18 ಜೈನಮಂದಿರಗಳ ರಕ್ಷಣೆಗೆ ಪೊಲೀಸ್ ಇಲಾಖೆಯಿಂದಲೂ ರಕ್ಷಣೆ ಒದಗಿಸಲು ಮುಖ್ಯಮಂತ್ರಿ, ಗೃಹ ಸಚಿವರು ತಕ್ಷಣ ನಿರ್ದೇಶಿಸ ಬೇಕಾಗಿದೆ.ವರ್ಷವೊಂದಕ್ಕೆ 5 ಲಕ್ಷ  ಯಾತ್ರಿಕರು ದೇಶ-ವಿದೇಶಗಳಿಂದ ಮೂಡುಬಿದಿರೆ ಹಾಗೂ ಹತ್ತಿರದ ವೇಣೂರು, ಕಾರ್ಕಳದ ಜೈನ ಮಂದಿರಗಳನ್ನು ವೀಕ್ಷಿಸಲು ಬರುತ್ತಾರೆ. ಹಾಗಾಗಿ  ಜೈನಮಠದ ಪೀಠಾಧಿಕಾರಿಗಳು, ಪೊಲೀಸ್ ಅಧಿಕಾರಿಗಳೊಂದಿಗೆ ಸಮಾಲೋಚಿಸಿ ತುರ್ತಾಗಿ ಭದ್ರತಾ ಕ್ರಮ ಅಳವಡಿಸಬೇಕು.

ಭದ್ರತೆಯ ಬಿಗಿ ಕ್ರಮಗಳನ್ನು ಅಳವಡಿಸಲು ಗೃಹ ಇಲಾಖೆ ಅಧಿಕಾರಿಗಳು ಆಗಾಗ ಈ ಸ್ಥಳಗಳಿಗೆ ಭೇಟಿ ನೀಡಿ ಲೋಪದೋಷಗಳನ್ನು ಗುರುತಿಸಿ ಸೂಕ್ತ ಕ್ರಮ ಜರುಗಿಸಬೇಕು.

-ಸುಮಂತ ಎಂ., ಮೂಡುಬಿದಿರೆ .

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry