ಜೈಲಂ: ನೀರು ಉಳಿತಾಯ ತಂತ್ರಜ್ಞಾನ

7

ಜೈಲಂ: ನೀರು ಉಳಿತಾಯ ತಂತ್ರಜ್ಞಾನ

Published:
Updated:

ಬೆಂಗಳೂರು:  ಜೈಲಂ ಇಂಡಿಯಾ ದೇಶದಲ್ಲಿ ನೀರು ಪೂರೈಕೆ, ನಿಯಂತ್ರಣ ಉದ್ದಿಮೆಯಲ್ಲಿ ಎರಡು ಹೊಸ ಸೌಲಭ್ಯಗಳನ್ನು ಪರಿಚಯಿಸಿದೆ ಎಂದು ಜೈಲಂ ಇಂಡಿಯಾದ ಅಧ್ಯಕ್ಷ ಸ್ಯಾಮ್ ಯಮದಗ್ನಿ ಗುರುವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.`ಜೈಲಂನ ಹೊಸ ಎಚ್‌ವಿಎಸಿ (ಹೀಟಿಂಗ್, ವೆಂಟಿಂಗ್ ಮತ್ತು ಏರ್ ಕಂಡೀಷನ್) ಮತ್ತು ಬೆಂಕಿ ನಿರೋಧಕ ಸೌಲಭ್ಯಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಇವು ವಿದ್ಯುತ್ ಬಳಕೆಗೆ ಮಿತಿ ವಿಧಿಸಲಿದ್ದು, ಅತಿ ಹೆಚ್ಚು ದಿನ ಬಾಳಿಕೆ  ಬರುವಂತೆ ವಿಶ್ವಾಸಾರ್ಹತೆಯನ್ನು ಹೆಚ್ಚಿಸಲಿವೆ~ ಎಂದರು.`ಎಚ್‌ವಿಎಸಿ ಮತ್ತು ಬೆಂಕಿ ನಿರೋಧಕ ವ್ಯವಸ್ಥೆಯಲ್ಲಿ ಅಳವಡಿಸಿರುವ ತಂತ್ರಜ್ಞಾನವು ಶೇ 25 ರಿಂದ ಶೇ 30 ರಷ್ಟು ವಿದ್ಯುತ್ ಉಳಿತಾಯಕ್ಕೆ ನೆರವಾಗಲಿವೆ. ಈ ಉಳಿತಾಯದ ಜತೆಗೆ ನೀರಿನ ಕೊಳವೆಗಳ ಅಳವಡಿಕೆ, ಸಿವಿಲ್ ಎಂಜಿನಿಯರಿಂಗ್ ಮತ್ತು ಅಳವಡಿಕೆ ವೆಚ್ಚದಲ್ಲಿಯೂ ಗಮನಾರ್ಹ ಉಳಿತಾಯವಾಗಲಿದೆ~ ಎಂದು ಹೇಳಿದರು.`ಇವುಗಳು ಪರಿಸರ ಸ್ನೇಹಿ ಕಟ್ಟಡಗಳ ನಿರ್ಮಾಣಕ್ಕೂ ನೆರವಾಗಲಿವೆ. ಬೆಲ್ ಮತ್ತು ಗಾಸ್ಸೆಟ್ ಎಚ್‌ವಿಎಸಿ ನಿರೋಧಕ ಸೌಲಭ್ಯವನ್ನು ವಾಣಿಜ್ಯ ಕಟ್ಟಡಗಳ ನೀರು ತಂಪುಗೊಳಿಸುವ ವ್ಯವಸ್ಥೆಗೆಂದೇ ವಿಶೇಷವಾಗಿ ರೂಪಿಸಲಾಗಿದೆ. ಅಳವಡಿಕೆ ಸಮಯ, ಸರಕುಗಳ ವೆಚ್ಚ ಮತ್ತು ಜೋಡಣೆಯ ಗುಣಮಟ್ಟ ಸುಧಾರಣೆಗೂ ಈ ಎಚ್‌ವಿಎಸಿ ಉತ್ಪನ್ನಗಳು ಸಹಾಯಕವಾಗಲಿವೆ~ ಎಂದು ವಿವರಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry