ಜೈಲಿಗೆ ಬಿಗಿ ಭದ್ರತೆ ನೀಡಲು ಸೂಚನೆ

7

ಜೈಲಿಗೆ ಬಿಗಿ ಭದ್ರತೆ ನೀಡಲು ಸೂಚನೆ

Published:
Updated:

ನವದೆಹಲಿ: ‘ನಕ್ಸಲೀಯರು ಇರುವ ಕಾರಾಗೃಹಗಳಿಗೆ ಬಿಗಿ ಭದ್ರತೆ ಒದಗಿಸಬೇಕು’ ಎಂದು ನಕ್ಸಲ್‌ಪೀಡಿತ 9 ರಾಜ್ಯಗಳಿಗೆ ಕೇಂದ್ರವು ಎಚ್ಚರಿಕೆ ನೀಡಿದೆ.

ಛತ್ತೀಸಗಡ, ಜಾರ್ಖಂಡ್‌್, ಬಿಹಾರ, ಒಡಿಶಾ, ಪಶ್ಚಿಮ­ಬಂಗಾಳ, ಆಂಧ್ರಪ್ರದೇಶ, ಮಹಾರಾಷ್ಟ್ರ, ಉತ್ತರ­ಪ್ರದೇಶ ಹಾಗೂ ಮಧ್ಯ­ಪ್ರದೇಶ ರಾಜ್ಯಗಳಿಗೆ ಈ ಸಂಬಂಧ ಗೃಹ ಕಾರ್ಯದರ್ಶಿ ಪತ್ರಗಳನ್ನು ಬರೆದಿದ್ದಾರೆ.ಜೈಲಿನಲ್ಲಿರುವ ತಮ್ಮ ಸದಸ್ಯರನ್ನು ಬಿಡಿಸಿ­ಕೊಳ್ಳಲು ನಕ್ಸಲ್‌ ಮುಖಂಡರು ಹೊಂಚು ಹಾಕು­ತ್ತಿದ್ದಾರೆ ಎಂಬ ಮಾಹಿತಿ ಬಂದಿರು­ವುದಾಗಿಯೂ ಪತ್ರದಲ್ಲಿ ಉಲ್ಲೇಖಿಸಲಾಗಿದೆ. ನಕ್ಸಲ್‌ ಮುಖಂಡರು ಇರುವ ಜೈಲಿನ ಒಳಗೆ ಹಾಗೂ ಹೊರಗೆ ಬಿಗಿ ಭದ್ರತೆ ಒದಗಿಸಿ.ಕಾರಾಗೃಹಗಳ ಮೇಲೆ ನಡೆಯಬಹುದಾದ ನಕ್ಸಲ್ ದಾಳಿ ಪ್ರಯತ್ನವನ್ನು ವಿಫಲಗೊಳಿಸಲು ಬೇಹುಗಾರಿಕೆ ಜಾಲವನ್ನು ಬಲಪಡಿಸುವ ಅಗತ್ಯವಿದೆ ಎಂದೂ ಹೇಳಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry