ಜೈಲಿಗೆ ಬೆಂಕಿ ಹಚ್ಚಿ 200 ಕೈದಿಗಳು ಪರಾರಿ

ಮಂಗಳವಾರ, ಜೂಲೈ 23, 2019
25 °C

ಜೈಲಿಗೆ ಬೆಂಕಿ ಹಚ್ಚಿ 200 ಕೈದಿಗಳು ಪರಾರಿ

Published:
Updated:

ಮೆಡನ್ (ಇಂಡೋನೇಷ್ಯಾ) (ಎಎಫ್‌ಪಿ) : ಇಂಡೋನೇಷ್ಯಾದ ಜೈಲಿನಿಂದ  ಸುಮಾರು 200 ಕೈದಿಗಳು ಪರಾರಿಯಾದ ಘಟನೆ  ನಡೆದಿದೆ.13 ಜನ ಭಯೋತ್ಪಾದಕರು ಸೇರಿದಂತೆ ನೂರಾರು ಕೈದಿಗಳು ತಮ್ಮ ನಡುವೆಯೇ ಜಗಳ ಕಾದು ಜೈಲಿಗೆ ಬೆಂಕಿ ಹಚ್ಚಿ, ಭದ್ರತಾ ಸಿಬ್ಬಂದಿಯ ಮೇಲೆ ಬಾಟಲಿಗಳನ್ನು ಎಸೆದು ಪರಾರಿಯಾಗಿದ್ದಾರೆ.ಇಂಡೋನೇಷ್ಯಾದ ಮೆಡನ್ ನಗರದ ಸುಮಾತ್ರಾ ದ್ವೀಪದಲ್ಲಿರುವ ಜೈಲಿನಲ್ಲಿ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಜೈಲಿನಲ್ಲಿದ್ದ ಒಟ್ಟು 2,600 ಕೈದಿಗಳಿದ್ದರು. ಘಟನೆಯಲ್ಲಿ ಒಟ್ಟು 200 ಕೈದಿಗಳು ಪರಾರಿ ಯಾಗಿದ್ದಾರೆ. ಉಳಿದವರು ತಪ್ಪಿಸಿಕೊಳ್ಳದಂತೆ ಭದ್ರತೆ ಹೆಚ್ಚಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry