ಸೋಮವಾರ, ಜೂನ್ 21, 2021
30 °C
ಹಿಂಡಲಗಾ ಕೇಂದ್ರ ಕಾರಾಗೃಹದಲ್ಲಿ ಘಟನೆ

ಜೈಲಿನಲ್ಲಿ ಕೈದಿ ಆತ್ಮಹತ್ಯೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ಇಲ್ಲಿನ ಹಿಂಡಲಗಾ ಕೇಂದ್ರ ಕಾರಾಗೃಹದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ ಕೈದಿಯೊಬ್ಬ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿ­ರುವ ಘಟನೆ ಮಂಗಳವಾರ ನಡೆದಿದೆ. ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನ ಕೊಪ್ಪದ ಮುನಿಯಪ್ಪ ಹುಚ್ಚಯ್ಯ (29) ಆತ್ಮಹತ್ಯೆ ಮಾಡಿಕೊಂಡ ಕೈದಿ.ಬೆಳಿಗ್ಗೆ 11 ಗಂಟೆಗೆ ಕೈದಿಗಳನ್ನು ಊಟಕ್ಕೆ ಬಿಡಲಾಗಿತ್ತು. ಆದರೆ ಮಧ್ಯದಲ್ಲಿಯೇ ಶೌಚಾಲಯಕ್ಕೆ ಹೋಗಿ ಬರುವುದಾಗಿ ಬ್ಯಾರಕ್‌ಗೆ ಹೋಗಿದ್ದ. ಬೆಡ್‌ಶೀಟ್‌ ಕತ್ತರಿಸಿ ಹಗ್ಗದಂತೆ ಮಾಡಿಕೊಂಡು ಶೌಚಾಲಯದ ಛಾವಣಿಯ ಕಂಬಕ್ಕೆ ನೇಣು ಬಿಗಿದುಕೊಂಡಿದ್ದಾನೆ. ಈತ  ವಾಪಸ್ಸಾಗದ ಕಾರಣ ಕೈದಿಗಳು ಹುಡುಕಾಡಿದ್ದಾರೆ.ಶೌಚಾಲಯದಲ್ಲಿ ಈತ ನೇಣು ಹಾಕಿಕೊಂಡಿದ್ದನ್ನು ಕಂಡ ತಕ್ಷಣವೇ ಜೈಲಿನ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ನಾಡಿಮಿಡಿತ ಕ್ಷೀಣಿಸಿದ್ದರಿಂದ ತಕ್ಷಣವೇ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ, ದಾರಿ ಮಧ್ಯದಲ್ಲೇ ಕೊನೆಯುಸಿರೆಳೆದ ಎಂದು ಜೈಲಿನ ಮೂಲಗಳು ತಿಳಿಸಿವೆ. ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತುಮಕೂರು ಸೆಷನ್ಸ್‌ ನ್ಯಾಯಾಲಯ ಮುನಿಯಪ್ಪನಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು. ಈತನನ್ನು 2013ರ ನವೆಂಬರ್‌ 1ರಂದು ಹಿಂಡಲಗಾ ಕಾರಾಗೃಹಕ್ಕೆ ತರಲಾಗಿತ್ತು.‘ಮುನಿಯಪ್ಪ ಆತ್ಮಹತ್ಯೆ ಕುರಿತು ತನಿಖೆ ನಡೆಸಲಾಗುತ್ತಿದೆ. ಯಾವ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂಬುದು ಇನ್ನೂ ತಿಳಿದು ಬಂದಿಲ್ಲ’ ಎಂದು ಬಂದೀಖಾನೆ ಇಲಾಖೆಯ ಉತ್ತರ ವಲಯದ ಡಿಐಜಿ ಸಿ. ವೀರಭದ್ರಸ್ವಾಮಿ ‘ಪ್ರಜಾವಾಣಿ’ಗೆ ತಿಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.