ಜೈಲಿನಲ್ಲಿ ಹೊಡೆದಾಟ: 20 ಸಾವು

7

ಜೈಲಿನಲ್ಲಿ ಹೊಡೆದಾಟ: 20 ಸಾವು

Published:
Updated:

ಮೆಕ್ಸಿಕೋ ಸಿಟಿ(ಐಎಎನ್‌ಎಸ್/ಇಎಫ್‌ಇ): ಈಶಾನ್ಯ ಮೆಕ್ಸಿಕೋದ ಟಮೌಲಿಪಾಸ್‌ನ ಜೈಲಿನಲ್ಲಿ ಶನಿವಾರ ಕೈದಿಗಳ ನಡುವೆ ನಡೆದ ಹೊಡೆದಾಟದಲ್ಲಿ  20 ಮಂದಿ ಮೃತಪಟ್ಟಿದ್ದು 12  ಮಂದಿಗೆ ಗಾಯಗಳಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಶನಿವಾರ ಬೆಳಿಗ್ಗೆ ಇಬ್ಬರು ಕೈದಿಗಳ ನಡುವೆ ಜಗಳ ಆರಂಭವಾಗಿದ್ದು ನಂತರ ಇತರರು ಇದರಲ್ಲಿ ಭಾಗಿಯಾಗಿದ್ದು ಈ ಘಟನೆ ಸಂಭವಿಸಿದೆ ಎಂದು ಸಾರ್ವಜನಿಕ ರಕ್ಷಣಾ ಆಡಳಿತ ಕಚೇರಿ ಪ್ರಕಟಣೆ ತಿಳಿಸಿದೆ. ತಮ್ಮ ಎರಡು ಪ್ಯಾರಾದ ಪ್ರಕಟಣೆಯಲ್ಲಿ ಅಧಿಕಾರಿಗಳು ಹೆಚ್ಚಿನ ವಿವರಣೆ ನೀಡಿಲ್ಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry