ಬುಧವಾರ, ಜೂನ್ 23, 2021
22 °C

ಜೈಲಿನಿಂದ ಜೈಲಿಗೆ ನಾಟಕೋತ್ಸವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಜ್ಯದ ಹಲವು ಕಾರಾಗೃಹಗಳಲ್ಲಿ ರಂಗಚಟುವಟಿಕೆಗಳನ್ನು ಹಮ್ಮಿಕೊಳ್ಳುವ ಮೂಲಕ ಕೈದಿಗಳ ಕ್ರೀಯಾಶೀಲತೆ ಮತ್ತು ಪ್ರತಿಭೆ ಅನಾವರಣಗೊಳಿಸುವ ಕಾರ್ಯವನ್ನು `ಸಂಕಲ್ಪ~ ತಂಡ ಮಾಡಿಕೊಂಡು ಬರುತ್ತಿದೆ. ಈ ನಿಟ್ಟಿನಲ್ಲಿ ಮಾ.10ರವರೆಗೆ `ಜೈಲಿನಿಂದ ಜೈಲಿಗೆ ನಾಟಕೋತ್ಸವ~ ಎಂಬ ನಾಲ್ಕು ದಿನಗಳ ಕಾರ್ಯಕ್ರಮ ಹಮ್ಮಿಕೊಂಡಿದೆ.

ರಾಜ್ಯದ ವಿವಿಧ ಕಾರಾಗೃಹಗಳಲ್ಲಿನ ಕೈದಿಗಳೇ ಈ ನಾಟಕಗಳ ಪಾತ್ರಧಾರಿಗಳು. ಹಾಗಾಗಿ ಇದೊಂದು ವಿಶಿಷ್ಟ ರಂಗ ಪ್ರಯೋಗವಾಗಿದೆ. ಸಂಕಲ್ಪ ಸಂಸ್ಥೆಯು ಕಾರಾಗೃಹಗಳಲ್ಲಿ ಶಿಬಿರ ಆಯೋಜಿಸುವ ಮೂಲಕ ಕೈದಿಗಳನ್ನು ರಂಗ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಂತೆ ಪ್ರೇರೇಪಿಸುತ್ತಿದೆ. ಈ ಮೂಲಕ ಮನಃ ಪರಿವರ್ತನೆ ಮಾಡುವುದು, ಸಮಾಜದ ಮುಖ್ಯವಾಹಿನಿಗೆ ತಂದು ಆತ್ಮವಿಶ್ವಾಸದಿಂದ ಜೀವನ ಸಾಗಿಸುವಂತೆ ಮಾಡುವುದು ಈ ನಾಟಕೋತ್ಸವದ ಉದ್ದೇಶವಾಗಿದೆ. ಸಂಸ್ಥೆ ಅಧ್ಯಕ್ಷರಾಗಿರುವ ಹುಲುಗಪ್ಪ ಕಟ್ಟೀಮನಿ ಅವರು ಈ ವಿಶಿಷ್ಟ ಕಾರ್ಯಕ್ರಮದ ರೂವಾರಿಯಾಗಿದ್ದಾರೆ. ಮೈಸೂರಿನ ರಂಗಾಯಣದ ನಾಟರಾಗಿ ಸೇವೆ ಸಲ್ಲಸಿರುವ ಕಟ್ಟೀಮನಿ ಅವರು ಧಾರವಾಡ ರಂಗಾಯಣ ರೆಪರ್ಟರಿ ಮುಖ್ಯಸ್ಥರಾಗಿಯೂ ಸೇವೆ ಸಲ್ಲಿಸಿದ್ದಾರೆ.

ಗುರುವಾರ (ಮಾ.8) ಬೆಂಗಳೂರು ಕೇಂದ್ರ ಕಾರಾಗೃಹದ ಕೈದಿಗಳಿಂದ `ಕತ್ತಲೆ ದಾರಿ ದೂರ~ (ವಾರ್ಡ್ ನಂ6) ನಾಟಕ ಪ್ರದರ್ಶನ.  ರಚನೆ: ಡಿ.ಆರ್. ನಾಗರಾಜ್.

ಶುಕ್ರವಾರ (ಮಾ.9) ಬೆಳಗಾವಿ ಕೇಂದ್ರ ಕಾರಾಗೃಹದ ಕೈದಿಗಳಿಂದ `ಶಿವರಾತ್ರಿ~ (ರಚನೆ: ಚಂದ್ರಶೇಖರ ಕಂಬಾರ) ನಾಟಕ ಪ್ರದರ್ಶನ. ಶನಿವಾರ (ಮಾ.10) ಧಾರವಾಡ ಕೇಂದ್ರ ಕಾರಾಗೃಹದ ಕೈದಿಗಳಿಂದ `ಗೋಕರ್ಣದ ಗೌಡಶಾನಿ~ (ರಚನೆ: ಪ್ರೊ.ಚಂದ್ರಶೇಖರ ಪಾಟೀಲ. ) ನಾಟಕ ಪ್ರದರ್ಶನ. ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ.ರಸ್ತೆ. ಪ್ರತಿ ದಿನ ಸಂಜೆ 6.30

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.