ಜೈಲಿನೊಳಗೆ ಅಗ್ನಿ ಆಕಸ್ಮಿಕ: 350ಕ್ಕೂ ಹೆಚ್ಚು ಕೈದಿಗಳ ಸಾವು

7

ಜೈಲಿನೊಳಗೆ ಅಗ್ನಿ ಆಕಸ್ಮಿಕ: 350ಕ್ಕೂ ಹೆಚ್ಚು ಕೈದಿಗಳ ಸಾವು

Published:
Updated:

ತೆಗುಸಿಗಲ್ಪ, ಹೊಂಡುರಾಸ್ (ಎಪಿ):  ಹೊಂಡುರಾಸ್‌ನ ಜೈಲೊಂದರಲ್ಲಿ ಅಗ್ನಿ ಆಕಸ್ಮಿಕ ಸಂಭವಿಸಿದ್ದು, ಒಳಗೆ ಸಿಲುಕಿಕೊಂಡಿದ್ದವರಲ್ಲಿ ಸುಮಾರು 350ಕ್ಕೂ ಹೆಚ್ಚು ಕೈದಿಗಳು ಸಾವನ್ನಪ್ಪಿದ್ದಾರೆಂದು ಅಧಿಕೃತವಾಗಿ ತಿಳಿದು ಬಂದಿದೆ.ಜೈಲಿನೊಳಗೆ  852 ಕೈದಿಗಳಿದ್ದು, ಬಹುತೇಕ ಮಂದಿ ಸತ್ತಿದ್ದಾರೆಂದು ಶಂಕಿಸಲಾಗಿದೆ ಎಂದಿರುವ ವಿಧಿವಿಜ್ಞಾನ ವಿಭಾಗದ ಮುಖ್ಯಸ್ಥ ಲೂಸಿ ಮರ್ದಾರ್ `ಬದುಕುಳಿದವರಲ್ಲಿ ಹೆಚ್ಚು ಮಂದಿ ತೀವ್ರ ಸುಟ್ಟಗಾಯಗಳಿಂದಾಗಿ ಆಸ್ಪತ್ರೆಯಲ್ಲಿದ್ದಾರೆ~ ಎಂದಿದ್ದಾರೆ.ನೂರಕ್ಕೂ ಹೆಚ್ಚು ಮಂದಿ ತಾವಿರುವ ಸೆಲ್‌ನೊಳಗೇ ಸುಟ್ಟು ಕರಕಲಾಗಿದ್ದಾರೆ. ಜೈಲಿನೊಳಗೆ ಬೆಂಕಿ ಹರಡುತ್ತಿದ್ದಂತೆಯೇ ಸೆಲ್‌ನೊಳಗಿರುವವರನ್ನು ಹೊರಬಿಡಲು ಕೆಲವರು ಯತ್ನಿಸಿದರಾದರೂ,  ಸಂಬಂಧಪಟ್ಟ ಸಿಬ್ಬಂದಿ ವರ್ಗ ಜೀವ ಉಳಿಸಿಕೊಳ್ಳಲು ಹೊರಗೆ ಓಡಿದ್ದರಿಂದ ಸೆಲ್‌ಗಳ ಕೀಲಿಕೈ ಸಿಗಲೇ ಇಲ್ಲ ಎನ್ನಲಾಗಿದೆ.ಬೆಂಕಿ ಆಕಸ್ಮಿಕಕ್ಕೆ ಶಾರ್ಟ್ ಸರ್ಕೀಟ್ ಕಾರಣವಿರಬಹುದೇ ಅಥವಾ ದುಷ್ಕರ್ಮಿಗಳ ಕೃತ್ಯ ಇರಬಹುದೇ ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಜೈಲಿನ ಅಧಿಕಾರಿಗಳು ತಿಳಿಸಿದ್ದಾರೆ. ಜೈಲಿನ ಸುತ್ತಲೂ ಮತ್ತು ಸಮೀಪದ ಆಸ್ಪತ್ರೆಯ ಬಳಿ ಕೈದಿಗಳ ಸಾವಿರಾರು ಬಂಧುಗಳು ಕಿಕ್ಕಿರಿದು ಗೋಳಾಡುತ್ತಿದ್ದುದು ಮನಕಲಕುವಂತಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry