ಶುಕ್ರವಾರ, ಮೇ 14, 2021
32 °C

ಜೈಲು ಸೇರುವ ಮುಂದಿನ ಸರದಿ ಸಿ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಹಮದಾಬಾದ್/ನವದೆಹಲಿ, (ಪಿಟಿಐ): ಭ್ರಷ್ಟಾಚಾರ ಆರೋಪದ ಅಡಿ ಈಗಾಗಲೇ `ಎ~ ಮತ್ತು `ಬಿ~ ಜೈಲು ಸೇರಾಗಿದೆ. ಇನ್ನೇನಿದ್ದರೂ ಮುಂದಿನ ಸರದಿ `ಸಿ~...!2ಜಿ ತರಂಗಾಂತರ ಹಗರಣ ಮತ್ತು ಜೈಲು ಸೇರುತ್ತಿರುವ ಯುಪಿಎ ಸರ್ಕಾರದ ಗಣ್ಯರ ಹೆಸರನ್ನು ಪ್ರಸ್ತಾಪಿಸದೆ ಆ ಕುರಿತು ಸೂಚ್ಯವಾಗಿ ತಮ್ಮದೇ ಹಾಸ್ಯಭರಿತ ಶೈಲಿಯಲ್ಲಿ ಹೀಗೆ ವಿಶ್ಲೇಷಿಸಿದ್ದು ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ.ಇಲ್ಲಿ `ಎ~ ಎಂದರೆ ಮಾಜಿ ಸಚಿವ ಎ. ರಾಜಾ ಮತ್ತು `ಬಿ~ಎಂದರೆ ಕನಿಮೋಳಿ ಹಾಗೂ ಇತರರು. ಇನ್ನೂ `ಸಿ~ ಎಂದು ಅವರು ಸೂಚ್ಯವಾಗಿ ಕರೆದದ್ದು ಕೇಂದ್ರ ಗೃಹ ಸಚಿವ ಪಿ.ಚಿದಂಬರಂ ಅವರನ್ನು.ಎಲೆಕ್ಟ್ರಾನಿಕ್ಸ್ ಮತ್ತು ದೂರಸಂಪರ್ಕ ಎಂಜಿನಿಯರ್ ಸಂಸ್ಥೆಯ 54ನೇ ವಾರ್ಷಿಕ ತಾಂತ್ರಿಕ ಸಮಾವೇಶದಲ್ಲಿ ಮಾತನಾಡಿದ ಅವರು, ಭ್ರಷ್ಟಾಚಾರದಿಂದ ಇಡೀ ದೇಶ ಹೈರಾಣಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

`ಚಿದಂಬರಂ ಜೈಲಿನಲ್ಲಿರಬೇಕು~: 2ಜಿ ಹಗರಣದಲ್ಲಿ ಭಾಗಿಯಾಗಿರುವ ಗೃಹ ಸಚಿವ ಪಿ. ಚಿದಂಬರಂ ಅವರು ಜೈಲಿನಲ್ಲಿರಬೇಕು ಎಂದು ಬಿಜೆಪಿ ತಿಳಿಸಿದೆ.ಹಗರಣದಲ್ಲಿ ಚಿದಂಬರಂ ಭಾಗಿಯಾಗಿದ್ದಾರೆ ಎನ್ನುವುದಕ್ಕೆ ಸಾಕಷ್ಟು ಸಾಕ್ಷ್ಯಾಧಾರಗಳು ಇರುವುದರಿಂದ ಅವರನ್ನು ಎ. ರಾಜಾ ಜತೆ ಜೈಲಿನಲ್ಲಿ ಇಡಬೇಕು ಎಂದು ಬಿಜೆಪಿಯ ಹಿರಿಯ ಮುಖಂಡ ಯಶವಂತ್ ಸಿನ್ಹಾ ಆಗ್ರಹಪಡಿಸಿದ್ದಾರೆ. ದಿಗ್ವಿಜಯ್ ಸಮರ್ಥನೆ: 2ಜಿ ತರಂಗಾಂತರ ಹಂಚಿಕೆಗೆ ಸಂಬಂಧಿಸಿದಂತೆ ಹಣಕಾಸು ಸಚಿವಾಲಯದ ಟಿಪ್ಪಣೆಯಿಂದ ವಿವಾದಕ್ಕೆ ಸಿಲುಕಿರುವ ಗೃಹ ಸಚಿವ ಪಿ. ಚಿದಂಬರಂ ಅವರನ್ನು ಕಾಂಗ್ರೆಸ್‌ನ ಹಿರಿಯ ಮುಖಂಡ ದಿಗ್ವಿಜಯ್ ಸಿಂಗ್  ಬಲವಾಗಿ ಸಮರ್ಥಿಸಿಕೊಂಡಿದ್ದಾರೆ.ಅಣ್ಣಾ ಹಜಾರೆ ಆಗ್ರಹ

ಮುಂಬೈ: 2 ಜಿ ಹಗರಣದಲ್ಲಿ ಕೇಂದ್ರ ಗೃಹ ಸಚಿವ ಪಿ.ಚಿದಂಬರಂ ಅವರನ್ನು ವಿಚಾರಣೆಗೊಳಪಡಿಸಬೇಕೆಂದು ಭ್ರಷ್ಟಾಚಾರ ವಿರೋಧಿ ಆಂದೋಲನದ ರೂವಾರಿ ಅಣ್ಣಾ ಹಜಾರೆ ಶನಿವಾರ ಆಗ್ರಹಿಸಿದ್ದಾರೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.