ಜೈವಿಕಇಂಧನ ಬಳಕೆಗೆ ಚಾಲನೆ

7

ಜೈವಿಕಇಂಧನ ಬಳಕೆಗೆ ಚಾಲನೆ

Published:
Updated:

ಬೆಂಗಳೂರು: ಇಂಧನ ದಕ್ಷತೆ ಹೆಚ್ಚಿಸಲು ಮತ್ತು ಪರಿಸರ ಮಾಲಿನ್ಯ ತಡೆಗಟ್ಟಲು ಮುಂದಾಗಿರುವ ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಲಿಮಿಟೆಡ್ (ಬಿಐಎಎಲ್) ತನ್ನ ವಾಹನಗಳಿಗೆ (ನಿಲ್ದಾಣದಲ್ಲಿ ವಿವಿಧ ಉದ್ದೇಶಗಳಿಗೆ ಬಳಸುವ ವಾಹನ) ಜೈವಿಕ ಇಂಧನ ಬಳಸಲಿದೆ.ಈ ನೂತನ ಯೋಜನೆಗೆ ಬಿಐಎಎಲ್ ಜತೆ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿ (ಕೆಎಸ್‌ಬಿಡಿಬಿ) ಸಹಭಾಗಿತ್ವ ವಹಿಸಿದೆ. ವಿಮಾನ ನಿಲ್ದಾಣದಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಜೈವಿಕ ಇಂಧನ ಬಳಕೆ ವಾಹನಗಳ ಬಳಕೆಗೆ ಚಾಲನೆ ನೀಡಲಾಯಿತು.`ಬಿಐಎಎಲ್ ವಿನೂತನ ಯೋಜನೆಗಳ ಮೂಲಕ ಹಲವು ಪ್ರಥಮಗಳನ್ನು ಸಾಧಿಸಿದೆ. ಜೈವಿಕ ಇಂಧನ ಬಳಕೆ ಇನ್ನೊಂದು ಹೆಜ್ಜೆಯಾಗಿದೆ. ಜೈವಿಕ ಇಂಧನ ಬಳಸುವ ದೇಶದ ಮೊದಲ ವಿಮಾನ ನಿಲ್ದಾಣ ಎಂಬ ಹೆಗ್ಗಳಿಕೆಗೆ ಬಿಐಎಎಲ್ ಪಾತ್ರವಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry