ಜೈವಿಕ ಅರಣ್ಯ: ಘೋಷಣೆ ಬೇಡ

7

ಜೈವಿಕ ಅರಣ್ಯ: ಘೋಷಣೆ ಬೇಡ

Published:
Updated:

ಶಿವಮೊಗ್ಗ: ಸಾಗರ ತಾಲ್ಲೂಕಿನ ಕರೂರು ಹೋಬಳಿಯ ಅಂಬಾರಗುಡ್ಡ ಅರಣ್ಯ ಪ್ರದೇಶವನ್ನು ಜೈವಿಕ ಅರಣ್ಯ ಎಂದು ಘೋಷಿಸದಂತೆ ಸರ್ಕಾರದ ಮೇಲೆ ಒತ್ತಡ ಹೇರಬೇಕು ಎಂದು ಶುಕ್ರವಾರ  ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಜಿಲ್ಲಾ ಜೆಡಿಎಸ್ ಪದಾಧಿಕಾರಿಗಳು ಮನವಿ ಸಲ್ಲಿಸಿದರು.ಸುಮಾರು 3,820 ಎಕರೆ ಅರಣ್ಯ ಪ್ರದೇಶವನ್ನು ಜೈವಿಕ ಅರಣ್ಯ ಪ್ರದೇಶ ಎಂದು ಘೋಷಿಸಲು ಸರ್ಕಾರ ಮುಂದಾಗಿದೆ. ಇದರಿಂದ 500ಕ್ಕೂ ಹೆಚ್ಚು ಬಡ ಕುಟುಂಬಗಳು ನಿರ್ಗತಿಕರಾಗುತ್ತಾರೆ ಎಂದು ಜಿಲ್ಲಾ ಜೆಡಿಎಸ್ ಘಟಕದ ಅಧ್ಯಕ್ಷ ಎಂ. ಶ್ರಿಕಾಂತ್ ಮನವಿ ಸಲ್ಲಿಸಿದರು.ಸಾಗರ ತಾಲ್ಲೂಕು ಜೆಡಿಎಸ್ ಘಟಕದ ಅಧ್ಯಕ್ಷ ಕೆ. ಅರುಣ್ ಪ್ರಸಾದ್ ಮತ್ತು ಸಾಗರ ನಗರ ಜೆಡಿಎಸ್ ಘಟಕದ ಅಧ್ಯಕ್ಷ ಮಂಜುನಾಥ್ ಉಪಸ್ಥಿತರಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry