`ಜೈವಿಕ ಇಂಧನ ಉತ್ಪಾದನೆಗೆ ಒತ್ತು ನೀಡಿ'

7

`ಜೈವಿಕ ಇಂಧನ ಉತ್ಪಾದನೆಗೆ ಒತ್ತು ನೀಡಿ'

Published:
Updated:

ಬೆಳಗಾವಿ: `ಮಾನವನ ಬದುಕಿನ ಅವಿಭಾಜ್ಯ ಅಂಗವಾಗಿರುವ ಪೆಟ್ರೋಲಿಯಂ ಉತ್ಪನ್ನಗಳ ಲಭ್ಯತೆ ಇನ್ನು ಕೇವಲ 10 ವರ್ಷಗಳಿಗೆ ಸಾಕಾಗುವಷ್ಟು ಮಾತ್ರ ಇದೆ. ಹೀಗಾಗಿ ಪರ್ಯಾಯ ಇಂಧನವಾದ ಜೈವಿಕ ಇಂಧನ ಉತ್ಪಾದನೆಗೆ ಮುಂದಾಗಬೇಕು' ಎಂದು ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿ ಕಾರ್ಯಾಧ್ಯಕ್ಷ ವೈ.ಬಿ. ರಾಮಕೃಷ್ಣ ಹೇಳಿದರು.ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಹಾಗೂ ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿ ಸಹಯೋಗದಲ್ಲಿ ಜ್ಞಾನ ಸಂಗಮ ಆವರಣದಲ್ಲಿ ನಿರ್ಮಿಸಿರುವ ಜೈವಿಕ ಇಂಧನ ಮಾಹಿತಿ ಹಾಗೂ ಪ್ರಾತ್ಯಕ್ಷಿಕೆ ಕೇಂದ್ರವನ್ನು ಸೋಮವಾರ ಉದ್ಘಾಟಿಸಿ ಅವರು ಮಾತನಾಡಿದರು.`ಭಾರತದಲ್ಲಿ 6 ಸಾವಿರ ವರ್ಷಗಳಿಂದ ರೈತರು ಬೇಸಾಯವನ್ನು ಮಾಡುತ್ತಿದ್ದಾರೆ. ಇತ್ತೀಚೆಗೆ ರೈತರಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವ ಮನೋಭಾವನೆ ಬೆಳೆದಿದೆ. ರಾಸಾಯನಿಕ ಹಾಗೂ ಕೀಟನಾಶಕಗಳನ್ನು ಅತಿಯಾಗಿ ಬಳಸುವುದು ಹಾಗೂ ಅಂತರ್ಜಲದ ಕುಸಿತವೇ ಇದಕ್ಕೆ ಕಾಣವಾಗಿದೆ. ಇದಕ್ಕೆ ಪರಿಹಾರವಾಗಿ ರೈತರಲ್ಲಿ ಜೈವಿಕ ಇಂಧನ ಸಸ್ಯಗಳನ್ನು ಬೆಳೆಸುವಂತೆ ಪ್ರೇರೆಪಿಸಬೇಕಾಗಿದೆ' ಎಂದು ಅವರು ಅಭಿಪ್ರಾಯಪಟ್ಟರು.`ಸಕ್ಕರೆ ಕಾರ್ಖಾನೆಗಳಲ್ಲಿ ಲಭ್ಯವಾಗುವ ಎಥನಾಲ್‌ಅನ್ನು ನಾವು ಇಂಧನವಾಗಿ ಉಪಯೋಗಿಸಬಹುದಾಗಿದೆ. ನಮ್ಮ ರಾಜ್ಯವು ದೇಶದಲ್ಲಿ ಎಥನಾಲ್ ಉತ್ಪಾದನೆಯಲ್ಲಿ ಮೂರನೇ ಸ್ಥಾನದಲ್ಲಿದೆ. ಪ್ರತಿ ವರ್ಷ 135 ಮಿಲಿಯನ್ ಲೀಟರ್ ಎಥನಾಲ್ ನಮ್ಮ ರಾಜ್ಯದಲ್ಲಿ ಉತ್ಪಾದನೆತಾಯಾಗಿತ್ತಿದೆ' ಎಂದು ಹೇಳಿದರು.`ಕರ್ನಾಟಕದಲ್ಲಿ ಈಗಾಗಲೇ ಇಂತಹ 30 ಮಾಹಿತಿ ಕೇಂದ್ರಗಳನ್ನು ಸ್ಥಾಪಿಸಲಾ ಗಿದೆ. ಇಂದು 31ನೇ ಕೇಂದ್ರವನ್ನು ವಿಟಿಯು ಕ್ಯಾಂಪಸ್‌ನಲ್ಲಿ ಸ್ಥಾಪಿಸಲಾಯಿತು' ಎಂದರು.ಅಧ್ಯಕ್ಷತೆ ವಹಿಸಿದ್ದ ವಿಟಿಯು ಕುಲಪತಿ ಡಾ. ಎಚ್. ಮಹೇಶಪ್ಪ, ಜೈವಿಕ ಇಂಧನ ಕ್ಷೇತ್ರದ ಅಭಿವೃದ್ಧಿ ಹಾಗೂ ಅವರ ಉಪಯೋಗಗಳ ಬಗ್ಗೆ ರೈತರಿಗೆ, ಸಂಶೋಧಕರಿಗೆ ಹಾಗೂ ಉದ್ಯಮಗಳಿಗೆ ಮಾಹಿತಿಯನ್ನು ನೀಡು ವುದಕ್ಕಾಗಿ ವಿಟಿಯು ಆವರಣದಲ್ಲಿ ಜೈವಿಕ ಇಂಧನ ಮಾಹಿತಿ ಹಾಗೂ ಪ್ರತ್ಯಕ್ಷಿಕೆ ಕೇಂದ್ರವನ್ನು ಸ್ಥಾಪಿಸಲಾಗಿದೆ' ಎಂದರು.`ಜೈವಿಕ ಇಂಧನ ಅಭಿವೃದ್ಧಿ ಹಾಗೂ ಸಂಶೋಧನಾ ಚಟುವಟಿಕೆಗಳಿಗೆ ಅಗತ್ಯ ಸಂಪನ್ಮೂಲಗಳನ್ನು ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ, ಪೆಟ್ರೋಲಿ ಯಮ್ ಹಾಗೂ ಜೈವಿಕ- ತಂತ್ರಜ್ಞಾನ ಸಚಿವಾಲಯಗಳಿಂದ ಪಡೆಯಲಾಗು ವುದು' ಎಂದು ಡಾ. ಮಹೇಶಪ್ಪ ವಿವರಿಸಿದರು.ವಿಟಿಯು ಕುಲಸಚಿವ ಡಾ. ಎಸ್.ಎ. ಕೋರಿ, ಪರಿಸರ ಪ್ರೇಮಿ ಶಿವಾಜಿ ಕಗ್ನಿಕರ, ಮಾಜಿ ಸಚಿವ ಆರ್.ಎನ್. ಪಾಟೀಲ, ಉಪ ಅರಣ್ಯ ಸಂರಕ್ಷಣಾಧಿ ಕಾರಿ ಜೆ.ಎನ್. ಪಾಟೀಲ, ಕೃಷಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಪ್ರೊ. ಎಸ್.ಜೆ. ಪಾಟೀಲ ಹಾಜರಿದ್ದರು. ಸಮಾರಂಭದಲ್ಲಿ ಸುಮಾರು 500 ರೈತರು ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry