ಜೈವಿಕ ಇಂಧನ ಪರಿಸರಕ್ಕೆ ಪೂರಕ

7

ಜೈವಿಕ ಇಂಧನ ಪರಿಸರಕ್ಕೆ ಪೂರಕ

Published:
Updated:
ಜೈವಿಕ ಇಂಧನ ಪರಿಸರಕ್ಕೆ ಪೂರಕ

ಶಿವಮೊಗ್ಗ: ಜೈವಿಕ ಇಂಧನ ಬಳಕೆ ಯಿಂದ ವಾಹನ ಹೆಚ್ಚು ಕಾಲ ಬಾಳಿಕೆ ಬರುತ್ತದೆ. ಹಾಗೆಯೇ ಹೆಚ್ಚು ಮೈಲೇಜ್ ನೀಡುವುದಲ್ಲದೆ ವಾತಾ ವರಣ ಕಲುಷಿತಗೊಳ್ಳುವುದೂ ತಪ್ಪು ತ್ತದೆ ಎಂದು ಜಿಲ್ಲಾ ಜೈವಿಕ ಇಂಧನ ಪ್ರಾತ್ಯಕ್ಷಿಕೆ ಹಾಗೂ ಮಾಹಿತಿ ಕೇಂದ್ರದ ಸಂಚಾಲಕ ಡಾ.ಎಲ್.ಕೆ. ಶ್ರೀಪತಿ ತಿಳಿಸಿದರು.ಗೋಪಿ ವೃತ್ತದಲ್ಲಿ ಬುಧ ವಾರ ಜವಾಹರ್‌ಲಾಲ್ ನೆಹರು ರಾಷ್ಟ್ರೀಯ ತಾಂತ್ರಿಕ ಮಹಾವಿದ್ಯಾಲಯ ಕಾಲೇ ಜಿನ ಜಿಲ್ಲಾ ಜೈವಿಕ ಇಂಧನ ಪ್ರಾತ್ಯಕ್ಷಿಕೆ ಹಾಗೂ ಮಾಹಿತಿ ಕೇಂದ್ರ, `ಜೈವಿಕ ಇಂಧನ ದಿನಾಚರಣೆ~ ಅಂಗವಾಗಿ ಏರ್ಪಡಿಸಿದ್ದ ಬೀದಿ ನಾಟಕ ಕಾರ್ಯ ಕ್ರಮದಲ್ಲಿ ಅವರು ಮಾತನಾಡಿದರು.ಪೆಟ್ರೋಲ್ ಬಳಕೆಯಿಂದ ವಾತಾ ವರಣಕ್ಕೆ ಕಾರ್ಬನ್ ಡೈಆಕ್ಷೈಡ್ ಹೆಚ್ಚು ಸೇರುತ್ತದೆ. ಆದರೆ ಜೈವಿಕ ಇಂಧನ ಬಳಕೆಯಿಂದ ಪರಿಸರಕ್ಕೆ ಯಾವುದೇ ಹಾನಿ ಆಗುವುದಿಲ್ಲ. ಜೈವಿಕ ಇಂಧನಕ್ಕೆ ಬೇಕಾದ ಹೊಂಗೆ ಮರ, ಬೇವಿನ ಮರ, ಸೀಮರೂಬಾ, ಹಿಪ್ಪೆ, ಜಟ್ರೋಪಾ ಮರಗಳನ್ನು ಬೆಳೆಯುವ ಮೂಲಕ ರೈತರು ಆರ್ಥಿಕವಾಗಿ ಸಬಲರಾಗ ಬಹುದು ಎಂದರು.ಸಂಸ್ಥೆ ಆವರಣದಲ್ಲಿ ಜೈವಿಕ ಇಂಧನ ಘಟಕ ಆರಂಭಿಸಲಾಗಿದ್ದು, ರೈತರು ಬೆಳೆದ ವಿವಿಧ ಬೀಜಗಳಿಗೆ ಉತ್ತಮ ಬೆಲೆ ನೀಡಿ ಖರೀದಿಸಲಾಗುವುದು. ಬೀಜದ ಹಿಂಡಿಯನ್ನು ರೈತರ ಬೆಳೆಗಳಿಗೆ ಹಾಗೂ ಗ್ಲಿಸರಿನ್ ಸೋಪ್ ತಯಾರಿಕೆಗೆ ಬಳಸಬಹುದು ಎಂದು ವಿವರಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry