ಜೈವಿಕ ಇಂಧನ ಪರ್ಯಾಯ ಶಕ್ತಿ

ಭಾನುವಾರ, ಮೇ 26, 2019
32 °C

ಜೈವಿಕ ಇಂಧನ ಪರ್ಯಾಯ ಶಕ್ತಿ

Published:
Updated:

ನರಸಿಂಹರಾಜಪುರ: ಜೈವಿಕ ಇಂಧನವೇ ಪರ್ಯಾಯ ಶಕ್ತಿಯ ಮೂಲವಾಗಿದೆ ಎಂದು ಜ್ವಾಲಾಮಾಲಿನಿ ಬಾಲಿಕಾ ಪ್ರೌಢಶಾಲೆಯ ವಿಜ್ಞಾನ ಶಿಕ್ಷಕ ಕೆ.ಗಣಪತಿ ತಂತ್ರಿ ತಿಳಿಸಿದರು.

ಇಲ್ಲಿನ ಜ್ವಾಲಾಮಾಲಿನಿ ಬಾಲಿಕಾ ಪ್ರೌಢಶಾಲೆಯಲ್ಲಿ ಶುಕ್ರವಾರ ವಿಜ್ಞಾನ ಸಂಘ ಹಾಗೂ ಇಕೊ ಕ್ಲಬ್‌ವತಿಯಿಂದ ನಡೆದ ವಿಶ್ವಜೈವಿಕ ಇಂಧನ ದಿನಾ ಚರಣೆಯಲ್ಲಿ ಜೈವಿಕ ಇಂಧನದ ಮಹ ತ್ವದ ಬಗ್ಗೆ ಉಪನ್ಯಾಸ ನೀಡಿದರು. ಪೆಟ್ರೋಲಿಯಂ ಮತ್ತು ಕಲ್ಲಿದ್ದಲು ಮಿತ ಪ್ರಮಾಣದಲ್ಲಿ ಮಾತ್ರ ಉಳಿದುಕೊಂಡಿದೆ ಎಂದರು.

ಶಾಲಾ ಮುಖ್ಯೋಪಾಧ್ಯಾಯ ಕೆ.ಎನ್.ಲೋಕರಾಜ್ ಅಧ್ಯಕ್ಷತೆ  ವಹಿಸಿ ಮಾತನಾಡಿದರು.ಶಿಕ್ಷಕರಾದ ಪಿ.ಎಸ್.ವಿದ್ಯಾನಂದ ಕುಮಾರ್, ಪವನಂಜಯ, ಇಕೊ ಕ್ಲಬ್ ಸಂಚಾಲಕ ಜಿನರಾಜೇಂದ್ರ, ಸಹನಾ ಇದ್ದರು. ಜೈವಿಕ ಇಂಧನದ ಕುರಿತು ಪ್ರಬಂಧ ಸ್ಪರ್ಧೆ, ಚಿತ್ರಕಲಾ ಸ್ಪರ್ಧೆ ಹಾಗೂ ಭಾಷಣ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿದರು. ಇದೇ ಸಂದರ್ಭದಲ್ಲಿ ಇನ್‌ಸ್ಪೈಯರ್ ಪ್ರಶಸ್ತಿ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿನಿ ಸೌಜನ್ಯ ಜೈನ್ ಹಾಗೂ ಇನ್‌ಸ್ಪೈಯರ್ ವಿದ್ಯಾ ರ್ಥಿಗಳಾದ ಆಶ್ರಿತಾ ಜೈನ್, ನಿಷ್ಮಾ ಜೈನ್ ಅವರನ್ನು ಅಭಿನಂದಿ ಸಲಾಯಿತು.

ಸುಂಕ ಹೆಚ್ಚಳಕ್ಕೆ ಮನವಿ

ಚಿಕ್ಕಮಗಳೂರು: ಕಡಿಮೆ ಇರುವ ಅಡಿಕೆ ಮೇಲಿನ ಆಮದು ಸುಂಕ ಹೆಚ್ಚಿಸುವಂತೆ ಕೇಂದ್ರದ ವಾಣಿಜ್ಯ ಸಚಿವ ಆನಂದ್ ಶರ್ಮಾ ಅವರಿಗೆ ಸಂಸದ ಕೆ.ಜಯ ಪ್ರಕಾಶ್ ಹೆಗ್ಡೆ ಮನವಿ ಮಾಡಿದ್ದಾರೆ.

ದೆಹಲಿಯಲ್ಲಿ ಸಚಿವರನ್ನು ಭೇಟಿ ಮಾಡಿದ ಸಂಸದರು, ಸುಂಕ ಹೆಚ್ಚು ಮಾಡುವಂತೆ ಮನವಿ ಮಾಡಿದ್ದು, ಇದರಿಂದ  ಪ್ರಸ್ತುತ ಸಂಕಷ್ಟದಲ್ಲಿರುವ ಅಡಿಕೆ ಬೆಳೆಗಾರರಿಗೆ ಅನುಕೂಲ ಮಾಡಿ ದಂತಾಗುತ್ತದೆ. ಸಚಿವರು ಇದಕ್ಕೆ  ಸ್ಪಂ ದಿಸಿದ್ದಾರೆ ಎಂದು ಸಂಸದರು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry