ಜೈಶಂಕರ್ ಪರಾರಿ: ಪೊಲೀಸರಿಂದ ಪರಿಶೀಲನೆ

7

ಜೈಶಂಕರ್ ಪರಾರಿ: ಪೊಲೀಸರಿಂದ ಪರಿಶೀಲನೆ

Published:
Updated:

ಬೆಂಗಳೂರು: ಕೈದಿ ಜೈಶಂಕರ್ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಿಂದ ತಪ್ಪಿಸಿಕೊಂಡಿರುವ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಗರ ಪೊಲೀಸರು ಬುಧವಾರ ಕಾರಾಗೃಹಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಜೈಶಂಕರ್‌ನನ್ನು ಇರಿಸಿದ್ದ ಬ್ಯಾರಕ್‌ನ ಪಕ್ಕದ ಕೊಠಡಿಗಳಲ್ಲಿರುವ ಕೈದಿಗಳು ಮತ್ತು ಬ್ಯಾರಕ್‌ನ ಬಳಿ ಕಾವಲಿಗೆ ನೇಮಿಸಿದ್ದ ವಾರ್ಡನ್‌ಗಳನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದರು. ಅಲ್ಲದೇ, ಘಟನೆಯ ದಿನ ಕರ್ತವ್ಯದಲ್ಲಿದ್ದ ಸಿಬ್ಬಂದಿಯ ವಿಚಾರಣೆ ನಡೆಸಿದರು. ಜೈಲಿನ ಸಂದರ್ಶಕರ ಪುಸ್ತಕ ಹಾಗೂ ಸಿ.ಸಿ ಟಿ.ವಿ ಕ್ಯಾಮೆರಾಗಳನ್ನು ಪರಿಶೀಲಿಸಿದರು.`ಸಾರ್ವಜನಿಕರು ಅನುಮಾನಾಸ್ಪದ ವ್ಯಕ್ತಿಗಳನ್ನು ಜೈಶಂಕರ್‌ನೆಂದು ಭಾವಿಸಿ ಪೊಲೀಸ್ ನಿಯಂತ್ರಣ ಕೊಠಡಿಗೆ ಹಾಗೂ ವಿವಿಧ ಠಾಣೆಗಳಿಗೆ ಕರೆ ಮಾಡಿ ಮಾಹಿತಿ ನೀಡುತ್ತಿದ್ದಾರೆ. ಸಾರ್ವಜನಿಕರಿಂದ ಬರುವ ಪ್ರತಿ ಕರೆಯನ್ನು ನಿರ್ಲಕ್ಷಿಸದೆ ಪರಿಶೀಲನೆ ಮಾಡಲಾಗುತ್ತಿದೆ. ಆದರೆ, ಆತನ ಬಗ್ಗೆ ಯಾವುದೇ ಸುಳಿವು ಸಿಕ್ಕಿಲ್ಲ. ಪ್ರಕರಣ ಸಂಬಂಧ ತಮಿಳುನಾಡು, ಆಂಧ್ರಪ್ರದೇಶ, ಕೇರಳ ಸೇರಿದಂತೆ ಅಕ್ಕಪಕ್ಕದ ರಾಜ್ಯಗಳ ಪೊಲೀಸರೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇವೆ' ಎಂದು ನಗರ ಪೊಲೀಸ್ ಕಮಿಷನರ್ ರಾಘವೇಂದ್ರ ಔರಾದಕರ್ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry