ಜೈ ಜವಾನ್

ಶನಿವಾರ, ಜೂಲೈ 20, 2019
27 °C

ಜೈ ಜವಾನ್

Published:
Updated:

ಉತ್ತರಾಖಂಡದ `ಹಿಮಾಲಯ ಸುನಾಮಿ' ಯ ಪರಿಣಾಮದ ಪ್ರವಾಹ, ಭೂಕುಸಿತ, ಆಸ್ತಿಪಾಸ್ತಿ ಹಾಗೂ ಪ್ರಾಣಹಾನಿಯ ಭೀಕರ ಅವಘಡದಲ್ಲಿ 15 ದಿನಗಳ ಕಾಲ ಪರಿಹಾರ ಕಾರ್ಯವನ್ನು ಕೈಗೊಂಡ ಭಾರತೀಯ ಸೇನೆಯ ಕಾರ್ಯ ಅತ್ಯಂತ ಪ್ರಶಂಸನೀಯ.ಗುಡ್ಡ-ಬೆಟ್ಟ, ನದಿ-ಕಂದರ, ಗಿರಿಕಣಿವೆಗಳು ಹಾಗೂ ಪವಿತ್ರ ಯಾತ್ರಾ ಸ್ಥಳಗಳಿಂದ ತುಂಬಿರುವ ಆ ರಾಜ್ಯದಲ್ಲಿ ತೊಂದರೆಗೊಳಗಾದ ಜಿಲ್ಲೆಗಳಲ್ಲಿನ ಸಂತ್ರಸ್ತರು ಮತ್ತು ಯಾತ್ರಾರ್ಥಿಗಳನ್ನು ಸುರಕ್ಷಿತ ಸ್ಥಳಕ್ಕೆ ಸಾಗಿಸಿದ ಸಾಹಸಭರಿತ ಕೆಲಸ ಸೇನೆಯ ಮೂರೂ ವಿಭಾಗಗಳಿಂದ ನಡೆದಿದೆ.ಪರಿಹಾರ ಕಾರ್ಯದಲ್ಲಿ ತೊಡಗಿದ್ದ ಹೆಲಿಕಾಪ್ಟರ್ ಒಂದು ಅಪಘಾತಕ್ಕೀಡಾಯಿತು. ಸೇನೆಯ ಕರ್ತವ್ಯಬದ್ಧತೆ ಶ್ಲಾಘನೀಯ. ಭಾರತೀಯ ಸೇನೆಗೆ ದೇಶವಾಸಿಗಳ ಹೃದಯಪೂರ್ವಕ ಅಭಿನಂದನೆಗಳು, ಜೈ ಜವಾನ್.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry