ಗುರುವಾರ , ನವೆಂಬರ್ 14, 2019
22 °C

ಜೊಕೊವಿಚ್ ಮುಡಿಗೆ ಕಿರೀಟ

Published:
Updated:
ಜೊಕೊವಿಚ್ ಮುಡಿಗೆ ಕಿರೀಟ

ಮಾಂಟೆ ಕಾರ್ಲೋ (ರಾಯಿಟರ್ಸ್‌): ವಿಶ್ವದ ಅಗ್ರ ಶ್ರೇಯಾಂಕದ ಆಟಗಾರ ಸರ್ಬಿಯಾದ ನೊವಾಕ್ ಜೊಕೊವಿಚ್ ಇಲ್ಲಿ ನಡೆದ ಮಾಂಟೆ ಕಾರ್ಲೋ  ಮಾಸ್ಟರ್ಸ್ ಟೆನಿಸ್ ಟೂರ್ನಿಯ ಸಿಂಗಲ್ಸ್‌ನ ಫೈನಲ್ ಹಣಾಹಣಿಯಲ್ಲಿ 6-2, 7-6ರ ನೇರ ಸೆಟ್‌ಗಳಿಂದ ರಫೆಲ್ ನಡಾಲ್ ಅವರನ್ನು ಸೋಲಿಸುವ ಮೂಲಕ ಅಪ್ರತಿಮ ಸಾಧನೆಯೊಂದಕ್ಕೆ ಕಾರಣರಾದರು.ಎಂಟು ವರ್ಷಗಳ ಅವಧಿಯಲ್ಲಿ ಈ ಟೂರ್ನಿಯಲ್ಲಿ ನಡಾಲ್ ಪಂದ್ಯದಲ್ಲಿ ಸೋಲು ಕಂಡಿದ್ದು ಇದೇ ಮೊದಲು. ಹಿಂದಿನ ಒಟ್ಟು 46 ಪಂದ್ಯಗಳಲ್ಲಿಯೂ ಸ್ಪೇನ್‌ನ ಆಟಗಾರ ಸತತ ಗೆಲುವು ಪಡೆದಿದ್ದರು.

ಪ್ರತಿಕ್ರಿಯಿಸಿ (+)