ಜೊತೆಗೂಡಿ ಆಡಲು ಒತ್ತಾಯಿಸಬೇಡಿ

7

ಜೊತೆಗೂಡಿ ಆಡಲು ಒತ್ತಾಯಿಸಬೇಡಿ

Published:
Updated:
ಜೊತೆಗೂಡಿ ಆಡಲು ಒತ್ತಾಯಿಸಬೇಡಿ

ನವದೆಹಲಿ (ಪಿಟಿಐ): ಉಭಯ ಆಟಗಾರರಿಗೆ ಆಸಕ್ತಿ ಇಲ್ಲವೆಂದರೆ ಲಂಡನ್ ಒಲಿಂಪಿಕ್ಸ್‌ನಲ್ಲಿ ಜೊತೆಗೂಡಿ ಆಡಲು ಲಿಯಾಂಡರ್ ಪೇಸ್ ಹಾಗೂ ಮಹೇಶ್ ಭೂಪತಿ ಅವರನ್ನು ಒತ್ತಾಯಿಸಬೇಡಿ ಎಂದು ಟೆನಿಸ್ ದಂತಕತೆ ಅಮೃತ್‌ರಾಜ್ ಅಭಿಪ್ರಾಯಪಟ್ಟಿದ್ದಾರೆ.ಡಬಲ್ಸ್‌ನಲ್ಲಿ ಜೊತೆಗೂಡಿ ಆಡದಿರಲು 2011ರ ಅಂತ್ಯದಲ್ಲಿ ಪೇಸ್-ಭೂಪತಿ ತೀರ್ಮಾನಿಸಿದ್ದರು. ಹಾಗಾಗಿ ಅವರು ಈ ವರ್ಷ ಬೇರೆ ಆಟಗಾರರ ಜೊತೆಗೂಡಿ ಆಡುತ್ತಿದ್ದಾರೆ. ಭೂಪತಿ ತಮ್ಮ ದೇಶದವರೇ ಆದ ರೋಹನ್ ಬೋಪಣ್ಣ ಜೊತೆ ಹಾಗೂ ಪೇಸ್ ಜೆಕ್ ಗಣರಾಜ್ಯದ ರಾಡೆಕ್ ಸ್ಟೆಪಾನೆಕ್ ಅವರ ಜೊತೆಗೂಡಿ ಆಡುತ್ತಿದ್ದಾರೆ.`ಅವರೇಕೇ ಒಟ್ಟುಗೂಡಿ ಆಡಲು ಹಿಂಜರಿಯುತ್ತಿದ್ದಾರೆ ಎಂಬುದು ನನಗೆ ಗೊತ್ತಿಲ್ಲ. ಆದರೆ ಆಸಕ್ತಿ ಇಲ್ಲದಿದ್ದರೂ ಆಡಿ ಎಂದು ಒತ್ತಾಯ ಮಾಡುವುದು ಸರಿಯಲ್ಲ. ಹಾಗಾಗಿ ಈ ಸಂಬಂಧ ನಿರ್ಧಾರ ತೆಗೆದುಕೊಳ್ಳುವ ಅಧಿಕಾರವನ್ನು ಆ ಆಟಗಾರರಿಗೆ ಬಿಡಬೇಕು~ ಎಂದು ಅಮೃತ್‌ರಾಜ್ ಹೇಳಿದ್ದಾರೆ.ಭೂಪತಿ ಹಾಗೂ ಬೋಪಣ್ಣ ಜೋಡಿಯ ಬಗ್ಗೆ ಪ್ರತಿಕ್ರಿಯಿಸಿದ ಅವರು, `ಅವರು ಈಗಷ್ಟೆ ಜೊತೆಗೂಡಿ ಆಡಲು ಶುರು ಮಾಡಿದ್ದಾರೆ. ಹಾಗಾಗಿ ತಕ್ಷಣವೇ ಸಕಾರಾತ್ಮಕ ಫಲಿತಾಂಶ ಬರಬೇಕು ಎಂದು ನಿರೀಕ್ಷಿಸುವುದು ತಪ್ಪು. ಹೊಂದಿಕೊಳ್ಳಲು ಇನ್ನೂ ಸಮಯಬೇಕು. ಆದರೆ ಅವರು ಪ್ರತಿಭಾವಂತ ಆಟಗಾರರು~ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry