ಜೊಳ್ಳಾಗುತ್ತಿರುವ ಬತ್ತ

7

ಜೊಳ್ಳಾಗುತ್ತಿರುವ ಬತ್ತ

Published:
Updated:

ತ್ಯಾವಣಿಗೆ: ಕಾಳು ಬಲಿಯುವ ಹಂತದಲ್ಲಿರುವ ಬತ್ತದ ಹೊಲಗಳಿಗೆ ನೀರಿಲ್ಲದೆ ಸುಮಾರು ಸಾವಿರಾರು ಎಕರೆ ಬತ್ತದ ಬೆಳೆ ಒಣಗುತ್ತಿದೆ.

ಈಗಾಗಲೇ ಕಟಾವಿನ ಹಂತಕ್ಕೆ ಬರುತ್ತಿರುವ ಬತ್ತದ ಬೆಳೆಗೆ ಕೊನೆಯದಾಗಿ ಇನ್ನೊಂದು ಬಾರಿ ನೀರು ಹಾಯಿಸಬೇಕಾಗಿದ್ದು, ಭದ್ರಾ 2ನೇ ಉಪನಾಲೆಯ ಟ್ಯೂಬ್‌ನಲ್ಲಿ 20-25ದಿನಗಳಿಂದ ಮರದ ತುಂಡು ಸಿಕ್ಕಿ ಹಾಕಿಕೊಂಡಿದ್ದು, ಗೇಟ್ ಎತ್ತಿದ್ದರೂ ನೀರು ಬರುತ್ತಿಲ್ಲವಾಗಿದ್ದು, ಈ 2ನೇ ಉಪನಾಲೆ ಕಾಲುವೆ ವ್ಯಾಪ್ತಿಯಲ್ಲಿ ಬರುವ ನವಿಲೇಹಾಳ್, ದೊಡ್ಡಘಟ್ಟ, ತ್ಯಾವಣಿಗೆ ಗ್ರಾಮಗಳ ರೈತರ ಸಾವಿರಾರು ಎಕರೆ ಜಮೀನುಗಳಲ್ಲಿ ನೀರಿಲ್ಲದೆ ಬತ್ತ ಒಣಗಿ ಜೊಳ್ಳಾಗುತ್ತಿದ್ದು, ಅಧಿಕ ಹಣ ಖರ್ಚು ಮಾಡಿ ಬೆಳೆ ಬೆಳೆಯುತ್ತಿರುವ ರೈತರಿಗೆ ಬಹಳ ನಷ್ಟವಾಗುತ್ತಿದೆ.

ಈ ಬಗ್ಗೆ ಸಂಬಂಧಪಟ್ಟ ಇಲಾಖೆಯವರ ಗಮನಕ್ಕೆ ತಂದರೂ ಸಹ ಟ್ಯೂಬ್ ನಲ್ಲಿ ಸಿಕ್ಕಿಹಾಕಿಕೊಂಡಿರುವ ಮರದ ತುಂಡನ್ನು ತೆಗೆಸಿ, ನೀರು ಸರಾಗವಾಗಿ ಹರಿಯುವಂತೆ ಕ್ರಮಕೈಗೊಳ್ಳುತ್ತಿಲ್ಲ.  ಅಲ್ಲದೆ ಜನಪ್ರತಿನಿಧಿಗಳ ಗಮನಕ್ಕೂ ತಂದರೂ ಏನೂ ಪ್ರಯೋಜನವಾಗುತ್ತಿಲ್ಲ. ಈ ಪರಿಸ್ಥಿತಿ ಹೀಗೆಯೇ ಮುಂದುವರೆದರೆ ನಾವುಗಳು ಸಂಬಂಧಪಟ್ಟ ಇಲಾಖೆ ಮುಂದೆ ನೀರಿಗಾಗಿ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ರೈತರಾದ ದೊಡ್ಡಘಟ್ಟ ತೋಪಣ್ಣ, ರವಿ, ಹರೀಶ್, ಭೀಮೇಶ್, ಬೆನಕಪ್ಪ, ಸತ್ಯನಾರಾಯಣ ಕಬ್ಬಳ, ಹೊನ್ನೂರ್‌ಸಾಬ್ ನವಿಲೇಹಾಳ್, ರಫೀ ಎಚ್ಚರಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry