ಗುರುವಾರ , ಮೇ 26, 2022
31 °C

ಜೋಗಿಹಳ್ಳಿ ಜನತೆಗೆ ಕಾಡುತ್ತಿರುವ ಪತ್ತೆಯಾಗದ ರೋಗ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಿರೇಕೆರೂರ: ತಾಲ್ಲೂಕಿನ ಜೋಗಿಹಳ್ಳಿ ಗ್ರಾಮದಲ್ಲಿ ಬಹಳಷ್ಟು ಜನರು ಹಲವು ರೀತಿಯ ಸಂದು ನೋವುಗಳಿಂದ ಬಳಲುತ್ತಿದ್ದು, ಇದಕ್ಕೆ ಕಾರಣ ಹಾಗೂ ಪರಿಹಾರ ತಿಳಿಯದೇ ಪರಿತಪಿಸು ತ್ತಿದ್ದಾರೆ. ಈ ಬಗ್ಗೆ ತಾಲ್ಲೂಕು ಆಡಳಿತ ಹಾಗೂ ಆರೋಗ್ಯ ಇಲಾಖೆ ನಿರ್ಲಕ್ಷ್ಯ ವಹಿಸಿದೆ ಎಂಬುದು ಸ್ಥಳೀಯರ ಆರೋಪವಾಗಿದೆ.ಗ್ರಾಮದ ಅರ್ಧದಷ್ಟು ಜನರು ಒಂದಿಲ್ಲೊಂದು ನೋವು ಅನುಭವಿಸು ತ್ತಿದ್ದಾರೆ. ಬೆನ್ನು ನೋವು, ಕಾಲು ನೋವು, ಮಂಡಿ ನೋವು, ಮೊಣಕಾಲು ನೋವು, ಪಾದನೋವು, ಡೊಂಕುಕಾಲು ಹಾಗೂ ಕಿಡ್ನಿಯಲ್ಲಿ ಕಲ್ಲು ಮುಂತಾದ ನೋವುಗಳಿಂದ ಬಳಲುತ್ತಿದ್ದಾರೆ. 15ರ ಬಾಲಕರಿಂದ ಹಿಡಿದು 70ರ ವೃದ್ಧರವರೆಗೆ ನೋವುಗಳು ಸಾಮಾನ್ಯ ಎನ್ನುವಂತಾಗಿದೆ. ಬೆಂಗಳೂರು, ದಾವಣ ಗೆರೆ, ಹುಬ್ಬಳ್ಳಿ, ಮಣಿಪಾಲ ಮುಂತಾದ ಪ್ರತಿಷ್ಠಿತ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದರೂ ನೋವು ಗುಣಮುಖ ವಾಗದೇ ನರಳುತ್ತ್ದ್ದಿದು, ದೂರದ ಊರುಗಳಿಗೆ ಆಸ್ಪತ್ರೆಗೆ ಗುಂಪುಗುಂಪಾಗಿ ತೆರಳು ತ್ತಿದ್ದಾರೆ.ಫ್ಲೋರೈಡ್‌ಯುಕ್ತ ನೀರು ಈ ಎಲ್ಲ ನೋವುಗಳಿಗೆ ಕಾರಣ ಎಂದು ಸ್ಥಳೀ ಯರು ನಂಬಿದ್ದಾರೆ. ಇದಕ್ಕೆ ಪೂರಕವಾಗಿ ಗ್ರಾಮಕ್ಕೆ ಕುಡಿಯುವ ನೀರು ಪೂರೈಕೆ ಮಾಡುವ ಕೊಳವೆ ಬಾವಿ ಗಳ ನೀರನ್ನು ತಪಾಸಣೆ ಮಾಡಿಸಿದ್ದು, ಒಂದು ಕೊಳವೆ ಬಾವಿಯಲ್ಲಿ ಸ್ವಲ್ಪ ಪ್ರಮಾಣದ ಫ್ಲೋರೈಡ್ ಅಂಶ ಇದೆ ಎಂದು ತಿಳಿದು ಬಂದಿದೆ ಎನ್ನುತ್ತಾರೆ ಸ್ಥಳೀಯ ಗ್ರಾ.ಪಂ. ಸದಸ್ಯ ಸುರೇಶ ಹುಲ್ಲತ್ತಿ.ಗ್ರಾಮದಲ್ಲಿ ಈಚೆಗೆ ಡೆಂಗೆ ಜ್ವರ ಸಹ ಕಾಣಿಸಿಕೊಂಡಿದ್ದು, ಮಹಿಳೆಯೊಬ್ಬಳು ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖವಾಗಿದ್ದಾರೆ. ಇದು ಜನತೆ ಯಲ್ಲಿ ಆತಂಕ ಉಂಟು ಮಾಡಿದೆ. ಹಿಂದೊಮ್ಮೆ ಚಿಕೂನ್‌ಗುನ್ಯಾ ರೋಗ ಕೂಡ ಸಾಕಷ್ಟು ತೊಂದರೆ ನೀಡಿದೆ.ಸಂಬಂಧಪಟ್ಟವರು ಈಗಲಾದರೂ ಜನತೆಯ ದೇಹದ ನೋವುಗಳ ಬಗ್ಗೆ ಕೂಲಂಕುಷವಾಗಿ ಪರಿಶೀಲನೆ ನಡೆಸಿ, ಜನತೆ ಅನುಭವಿಸುವ ನೋವುಗಳಿಗೆ ಕಾರಣವನ್ನು ಕಂಡು ಹಿಡಿದು ಸೂಕ್ತ ಪರಿಹಾರವನ್ನು ತಿಳಿಸಿ ನೋವಿನಿಂದ ಮುಕ್ತಗೊಳಿಸಬೇಕು ಎಂದು ಸ್ವತಃ ಬಗೆಬಗೆಯ ನೋವಿನಿಂದ ಬಳಲುತ್ತಿ ರುವ ಗ್ರಾಮದ ನಾಗಪ್ಪ ಚಪ್ಪರದಳ್ಳಿ, ಹೇಮಪ್ಪ ಶಿವಪ್ಪಳವರ, ಮಲ್ಲೇಶಪ್ಪ ತಾವರಗಿ, ಪರಮೇಶಪ್ಪ ದೀವಿಗಿಹಳ್ಳಿ, ಕಲ್ಲಪ್ಪ ಚಪ್ಪರದಳ್ಳಿ, ಮಲ್ಲಪ್ಪ ಶಿವಪ್ಪಳ ವರ, ನಾಗವ್ವ ಮರಿಗೌಡ್ರ, ದಾನಪ್ಪ ಮರಿಗೌಡ್ರ, ಗೌರಕ್ಕ ಕಾಯಕದ, ಲೋಕಪ್ಪ ಬಣಕಾರ, ಮಂಜವ್ವ ಮರಿ ಗೌಡ್ರ, ಈರನಗೌಡ ಹೊಸಮನಿ, ರತ್ನವ್ವ ಮರಿಗೌಡ್ರ, ದ್ರಾಕ್ಷಾಯಣಿ ಮರಿಗೌಡ್ರ, ತಿರಕವ್ವ ದೀವಿಗಿಹಳ್ಳಿ, ಕಲ್ಲಪ್ಪ ತಳವಾರ, ವೀರನಗೌಡ ಮರಿಗೌಡ್ರ, ಮಲ್ಲನಗೌಡ ಪಾಟೀಲ ಮನವಿ      ಮಾಡಿ ಕೊಂಡಿದ್ದಾರೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.