ಬುಧವಾರ, ಮೇ 12, 2021
19 °C

ಜೋಗ ಜಲಪಾತಕ್ಕೆ ಮತ್ತೆ ಕಳೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾರ್ಗಲ್: ಶರಾವತಿ ಕಣಿವೆಯಲ್ಲಿ ಪ್ರವೇಶವಾಗಿರುವ ಮುಂಗಾರು ಮಳೆಯಿಂದ ವಿಶ್ವವಿಖ್ಯಾತ ಜೋಗ ಜಲಪಾತದ ವೈಭವ ಮರುಕಳಿಸಿದೆ. ಜಲಪಾತ ಎರಡು ದಿನಗಳಿಂದ ಪ್ರವಾಸಿಗರನ್ನು ಸೆಳೆಯುತ್ತಿದೆ.ಮಳೆಯ ಅಭಾವದಿಂದ ಜಲಪಾತವು ಸಂಪೂರ್ಣ ಕಳೆಗುಂದಿ ಈಚಿನ ದಿನಗಳಲ್ಲಿ  ಬೋರ್‌ಬಂಡೆಗಳ ದರ್ಶನ ಮಾತ್ರ ಆಗುತ್ತಿತ್ತು. ಆದರೆ ಕಳೆದ 48 ಗಂಟೆಗಳಲ್ಲಿ ಕಣಿವೆ ಮತ್ತು ಲಿಂಗನಮಕ್ಕಿ ಜಲಾನಯನ ಪ್ರದೇಶದ ಸುತ್ತಮುತ್ತ 80 ಮಿ.ಮೀ. ಮಳೆಯಾಗಿದ್ದು ಜಲಪಾತದ ಟಿಸಿಲುಗಳಾದ ರಾಜಾ, ರೋರರ್, ರಾಕೆಟ್, ರಾಣಿ ನಿಧಾನವಾಗಿ ಮೈದುಂಬಿ ಹಾಲ್ನೊರೆಯನ್ನು ಚೆಲ್ಲುತ್ತಾ ಧುಮ್ಮಿಕ್ಕುವ ಸುಂದರ ದೃಶ್ಯವನ್ನು ಸ್ಥಳೀಯರು ಮತ್ತು  ಪ್ರವಾಸಿಗರು ಶನಿವಾರ ಸವಿಯುತ್ತಿರುವುದು ಕಂಡು ಬಂದಿದೆ.ಜಲಪಾತದ ಆಳದಿಂದ ಮೇಲೇಳುವ ಮಂಜು ಕಾರ್ಮೋಡಗಳೊಂದಿಗೆ ಬೆರೆತು ಆಕಾಶ- ಭೂಮಿ ಒಂದಾಗಿ ಬೆರೆತಂತೆ ಭಾಸವಾಗುವ ಸನ್ನಿವೇಶ ಸೃಷ್ಟಿಸಿತ್ತು. ಮಂಜು ಅಲ್ಲಲ್ಲಿ ತೇಲಿ ಮರೆಯಾಗಿ ಜಲಪಾತದ ಒಂದೊಂದು ಮಗ್ಗಲುಗಳು ವಿವಿಧ ಕೋನಗಳಲ್ಲಿ ಗೋಚರವಾಗುತ್ತಾ ಕಣ್ಣಾಮುಚ್ಚಾಲೆ ಆಡುತ್ತಿರುವ ದೃಶ್ಯ ಪ್ರವಾಸಿಗರಿಗೆ ಮುದ ನೀಡುತ್ತಿತ್ತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.