ಗುರುವಾರ , ಏಪ್ರಿಲ್ 15, 2021
23 °C

ಜೋಡೆತ್ತು ಬದಲು ಮನುಷ್ಯರ ಬಳಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಿಂಗಸುಗೂರ: ರಾಯಚೂರು ಜಿಲ್ಲೆಯ ಲಿಂಗಸುಗೂರ ತಾಲ್ಲೂಕಿನ ಖೈರವಾಡಗಿ ತಾಂಡಾದ ಜಮೀನೊಂದರಲ್ಲಿ ಪುಟ್ಟ ಮನೆಯೊಂದರಲ್ಲಿ ಐದು ಮಕ್ಕಳೊಂದಿಗೆ ಸಂಕಷ್ಟದ ಬದುಕು ನಡೆಸುತ್ತಿರುವ ಈಶಪ್ಪ ಖೇಮಪ್ಪ ಚವ್ಹಾಣ ಕುಟುಂಬ ತುತ್ತಿನ ಚೀಲ ತುಂಬಿಕೊಳ್ಳಲು ಹೆಣಗಾಡುತ್ತಿದೆ. ಎರಡು ಎಕರೆ ಜಮೀನು ಹೊಂದಿದ್ದು, ಕುಟುಂಬ ನಿರ್ವಹಣೆ ಸಾಧ್ಯವಾಗದೆ ಪಕ್ಕದ 2 ಎಕರೆ ಜಮೀನು ಲೀಸ್ ಪಡೆದು ಯಂತ್ರೋಪಕರಣ, ಜಾನುವಾರು ಬಳಕೆಯಿಲ್ಲದೆ ಬಿತ್ತನೆ ಮಾಡುತ್ತಿದೆ. 4 ವರ್ಷದಿಂದ ಇವರ ಪತ್ನಿ ಗೋಗಿಬಾಯಿ, ಪುತ್ರಿ ಸುಮಿತ್ರಾ ಎತ್ತಿನ ಬದಲಾಗಿ ಉಳುಮೆಗೆ ಸಹಕರಿಸುತ್ತಿದ್ದಾರೆ.ಈಶಪ್ಪ ಚವ್ಹಾಣರು ಗೋಗಿಬಾಯಿ, ಪುತ್ರಿಯರಾದ ಸುಮಿತ್ರಾ, ಮೀನಾಕ್ಷಿ ಹಾಗೂ ಎರಡು ಗಂಡು ಮಕ್ಕಳೊಂದಿಗೆ ಸ್ವಯಂಕೃಷಿ ಚಟುವಟಿಕೆ ಮಾಡಿಕೊಂಡಿದ್ದಾರೆ. ಈ ಪೈಕಿ ಗಂಡು ಮಕ್ಕಳು ಚಿಕ್ಕವರಾಗಿದ್ದರೂ ವಾಹನ ಚಾಲನೆ ಮಾಡುವುದನ್ನು ಕಲಿಯಲು ಹೋಗುತ್ತಾರೆ. ಶಿಕ್ಷಣ ಕಲಿಸಲು ಆಗಲಿಲ್ಲ. ಯಂತ್ರ ಅಥವಾ ಜಾನುವಾರು ಬಳಸಿ ಕೃಷಿ ಮಾಡಲು ಹಣಕಾಸಿನ ತೊಂದರೆ ಇದೆ. ಎಲ್ಲ ಕೆಲಸಗಳನ್ನು ಕುಟುಂಬದವರೆ ಮಾಡಿಕೊಂಡು ಬಂದಿದ್ದೇವೆ ಎಂದು ಕಣ್ಣಂಚಿನಲ್ಲಿ ನೀರು ತುಂಬಿಕೊಂಡು ಗೋಗಿಬಾಯಿ ವಿವರಿಸಿದರು.ಮುಂಚೆ ಟ್ರ್ಯಾಕ್ಟರ್ ಚಾಲಕನಾಗಿ ಕೆಲಸಕ್ಕೆ ಹೋಗುತ್ತಿದ್ದೆ. ಅದರಿಂದ ಬದುಕು ನಿರ್ವಹಣೆ ಮತ್ತಷ್ಟು ಕಷ್ಟವಾಯ್ತು. ಸರ್ಕಾರದ ಯಾವೊಂದು ಯೋಜನೆಗಳು ನೆರವಿಗೆ ಬಂದಿಲ್ಲ. ತಾಂಡಾಗಳಲ್ಲಿ ಕೂಲಿ ಕೆಲಸ ಸಿಗಲಿಲ್ಲ. ನಂತರ ಜಮೀನಿನಲ್ಲಿ ಕೊಳವೆಬಾವಿ ಕೊರೆದು ಸಣ್ಣ ಪುಟ್ಟ ಬೆಳೆ ಬೆಳೆಯುತ್ತಿರುವೆ. ಜಾನುವಾರುಗಳಿಲ್ಲದೆ ಕೆಲಸ ಮಾಡುವುದು ಕಷ್ಟವಾಗಿದೆ. ಅನಿವಾರ್ಯ ಆರ್ಥಿಕ ಸಂಕಷ್ಟಕ್ಕೆ ಸಿಲುಕದೆ ಸಾಧ್ಯವಾದಷ್ಟು ಮಕ್ಕಳು, ಪತ್ನಿ ಸಮೇತ ಸ್ವಾಭಿಮಾನಿ ಬದುಕು ಕಟ್ಟಿಕೊಳ್ಳೋದು ಸಾಕಾಗಿ ಹೋಗೈತ್ರಿ ಯಪ್ಪ ಎಂದು ಈಶಪ್ಪ ಚವ್ಹಾಣ ನೋವಿನಿಂದ ನುಡಿದರು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.