ಜೋತಿಷ್ಯ-ವಾಸ್ತು

7

ಜೋತಿಷ್ಯ-ವಾಸ್ತು

Published:
Updated:

ಎನ್.ವಿದ್ಯಾರಾಣಿ, ರಾಯಚೂರು: ಜನನ 22-3-1990, ಸಮಯ 1-38 ಮಧ್ಯಾಹ್ನ.

ಪ್ರಶ್ನೆ: ಮುಂದಿನ ವಿದ್ಯಾಭ್ಯಾಸ ಮತ್ತು ಜೀವನದ ಬಗ್ಗೆ ತಿಳಿಸಿ.

ಉತ್ತರ: ಇವರದು ಮಿಥುನಲಗ್ನ, ಉತ್ತರಾಷಾಢ ನಕ್ಷತ್ರ ಮಕರ ರಾಶಿ. ಇವರ ಲಗ್ನದಲ್ಲಿ ಯಾವ ಗ್ರಹರೂ ಇಲ್ಲ. ಬೇರಾವ ಸಂಬಂಧವೂ ಇಲ್ಲ. ಲಗ್ನಾಧಿಪತಿ ಬುಧರು ನೀಚರಾಗಿ, ವೈರಿ ಕ್ಷೇತ್ರದಲ್ಲಿ ದಗ್ಧರಾಶಿಯಲ್ಲಿ, ಶನಿ ನಕ್ಷತ್ರ ಸ್ಥಿತರಿದ್ದರೂ ಯೋಗಿಯಾಗಿದ್ದಾರೆ. ಆದರೆ ರವಿಯೊಡನೆ ಭಾಗ್ಯಸ್ಥಿತರಿದ್ದು ಅಸ್ತರಾಗಿದ್ದಾರೆ. ಇವರನ್ನು ಪಾಪಿ ಕೇತು ವೀಕ್ಷಿಸುತ್ತಾರೆ.ಇದರಿಂದ ಲಗ್ನ ಮತ್ತು ಲಗ್ನಾಧಿಪರು ಪೀಡಿತರಾಗಿದ್ದಾರೆ. ರಾಹು ಅಷ್ಟಮದಿಂದ ವೀಕ್ಷಿಸುತ್ತಾರೆ. ಇದರಿಂದ ಈ ಸ್ಥಾನವು ಸಾಕಷ್ಟು ಪೀಡಿತವಾಗಿದೆ.ಇವರ ವಿದ್ಯಾ ಬುದ್ಧಿಸ್ಥಾನ, ಪೂರ್ವಪುಣ್ಯಸ್ಥಾನ ಪಂಚಮವು ತುಲಾರಾಶಿಯಾಗಿದ್ದು ಇಲ್ಲೂ ಯಾವ ಗ್ರಹರೂ ಇಲ್ಲ. ಈ ಸ್ಥಾನವನ್ನು ಗುರು ವ್ಯಯದಿಂದ ಮತ್ತು ಶನಿ ಸಪ್ತಮದಿಂದ ವೀಕ್ಷಿಸುತ್ತಾರೆ. ಪಂಚಮಾಧಿಪತಿ ಶುಕ್ರರು ರಾಹು ಗ್ರಸ್ತರಾಗಿ ಅಷ್ಟಮ ಸ್ಥಿತರಿದ್ದಾರೆ.ಲಗ್ನಾಧಿಪತಿ ಚಂದ್ರರು ಅಷ್ಟಮದಲ್ಲಿ ಗುರು ಒಡನೆ ಸ್ಥಿತರಿದ್ದಾರೆ. ಹೆಚ್ಚಿನ ಗ್ರಹರು ದುಃಸ್ಥಾನ ಸ್ಥಿತರಿದ್ದಾರೆ. ಇವು ಯಾವುವು ಇವರ ಉನ್ನತ ವಿದ್ಯೆಗೆ ಪೂರಕವಲ್ಲ. ಆದ್ದರಿಂದ ಇವರು ಹೆಚ್ಚಿನ ಪರಿಶ್ರಮದಿಂದ ಡಿಪ್ಲೋಮಾ ಆಥವ ಡಿಗ್ರಿಗಳಿಸಬಲ್ಲರು.ಇವರ ಕುಟುಂಬ, ಸುಖ, ಪೂರ್ವಪುಣ್ಯ, ಭಾಗ್ಯ ಸ್ಥಾನಗಳೂ ಅವುಗಳ ಅಧಿಪತಿಗಳೂ ಸಾಕಷ್ಟು ಪೀಡಿತರೂ ಬಲಹೀನರೂ ಆಗಿರುವುದರಿಂದ ಸ್ವಪರಿಶ್ರಮದಿಂದ, ಹೊಂದಾಣಿಕೆಯ ಜೀವನಕ್ಕೆ ಒಗ್ಗಿಕೊಂಡು, ಪ್ರೀತಿ ಪ್ರೇಮಗಳ ಸುಳಿಗೆ ಸಿಲುಕದೇ ಇದ್ದರೆ,  ಉತ್ತಮ ಜೀವನ  ಸಾಗಿಸಬಲ್ಲರು. ಇವರಿಗೆ ಈಗ ರಾಹುದಶಾ ಗುರು ಭುಕ್ತಿ. ಗೋಚಾರದಲ್ಲಿ ಭಾಗ್ಯಶನಿ, ತೃತೀಯ ಗುರು ಇದ್ದಾರೆ. ಇವು ಶುಭಕರವಲ್ಲ. ಆದರೆ ತಾತ್ಕಾಲಿಕ ಹಿನ್ನೆಡೆಗೆ ಎದೆಗುಂದದೆ ಪ್ರಯತ್ನಿಸಿ, ಯಶಸ್ಸು ಇವರ ದಾಗುವುದು.

ಪರಿಹಾರ: ಪಚ್ಛೆಹರಳು, ನೀಲಮಣಿ  ಧರಿಸಿ. ದೇವೀಮಹಾತ್ಮೆ ಓದಿ. ಚಾಮುಂಡಿ ತ್ರಿಶತಿ ಓದಿ. ಗಣಪತಿಯನ್ನು ಪೂಜಿಸಿ.ಕೆ. ಸುಂದರ, ಕುಂಬ್ರ ಪುತ್ತೂರು: ಜನನ 1-8-1984, ಸಮಯ 5-40 ಬೆಳಿಗ್ಗೆ.

ಪ್ರಶ್ನೆ: ಉದ್ಯೋಗವಿದೆ, ಸಂಪಾದನೆ ಇಲ್ಲ. ಇಚ್ಛಿಸಿದ ಹುಡುಗಿಯೊಡನೆ ಮದುವೆ ಸಾಧ್ಯವೆ?

ಉತ್ತರ: ಇವರದು ಕರ್ಕಾಟಕ ಲಗ್ನ, ಉತ್ತರಾಫಾಲ್ಗುಣಿ ನಕ್ಷತ್ರ ಕನ್ಯಾರಾಶಿ. ಇವರ ಲಗ್ನದಲ್ಲಿ ರವಿ  ಸ್ಥಿತರಿದ್ದು ಕೇತು ಮತ್ತು ಶನಿ ವೀಕ್ಷಿತರಾಗಿದ್ದಾರೆ. ಬೇರಾವ ಶುಭ ಸಂಬಂಧವೂ ಇಲ್ಲ. ಲಗ್ನಾಧಿಪತಿ ಚಂದ್ರರು ತೃತೀಯದಲ್ಲಿ ದಗ್ಧರಾಶಿಯಲ್ಲಿ ರವಿ ನಕ್ಷತ್ರ ಸ್ಥಿತರಿದ್ದಾರೆ. ಇವರನ್ನು ರಾಹು ಬಾಧಕಸ್ಥಾನದಿಂದ ವೀಕ್ಷಿಸುತ್ತಾರೆ. ಬೇರಾವ ಶುಭ ಸಂಬಂಧವೂ ಇಲ್ಲ. ಇವು ಇವರ ವೃಥಾಚಿಂತೆಗೆ ಕಾರಣವಾಗಿದೆ. ಇವರ ಉದ್ಯೋಗದ ಬಗ್ಗೆ ಹೇಳುವಾಗ ಇವರ ವಿದ್ಯೆ ತಿಳಿಸಿದ್ದರೆ ಉತ್ತಮ. ದಶಮದಲ್ಲಿ ಯಾವ ಗ್ರಹರೂ ಇಲ್ಲ. ದಶಮಾಧಿಪತಿ ಕುಜರು ಬುಧನವಾಂಶ ಸ್ಥಿತರಿದ್ದಾರೆ.ಇವರ ಉದ್ಯೋಗ ಸೂಚಕ ಅಂಶ ಕುಂಡಲಿಯ ಲಗ್ನವು ವೃಷಭವಾಗಿದ್ದು ಲಾಭಾಂಶದಲ್ಲಿಎ. ಲಗ್ನಾಧಿಪತಿ ಶುಕ್ರರು ಅಷ್ಟಮದದಲ್ಲಿ ಬುಧರೊಡನೆ ಸ್ಥಿತರಿದ್ದಾರೆ. ಹೆಚ್ಚಿನ ಗ್ರಹರು ಶುಭಾಶುಭ ಸ್ಥಿತರಿದ್ದಾರೆ. ಇದರಿಂದ ನೀವು ಹೆಚ್ಚಿನ ಪ್ರಯತ್ನ ಪಟ್ಟರೆ ಉತ್ತಮ ಉದ್ಯೋಗ ದೊರಕಿಸಿ ಕೊಳ್ಳಬಲ್ಲಿರಿ.ರಾಶ್ಯಾಧಿಪತಿ ಶನಿ ಉಚ್ಛರಾಗಿ ಸುಖಸ್ಥಾನ ಸ್ಥಿತರಿದ್ದಾರೆ. ಕಳತ್ರಕಾರಕ ಶುಕ್ರರು ಕುಟುಂಬಸ್ಥಾನ ಸ್ಥಿತರಿದ್ದಾರೆ. ಇವರ ದಾಂಪತ್ಯ ಸೂಚಕ ನವಾಂಶ ಕುಂಡಲಿಯ ಲಗ್ನವು ಸಿಂಹವಾಗಿದ್ದು ಧನಾಂಶದಲ್ಲಿದೆ. ಹೆಚ್ಚಿನ ಗ್ರಹರು ಶುಭಾಶುಭ ಸ್ಥಿತರಿದ್ದು ಸಾಮಾನ್ಯ ಉತ್ತಮ ದಾಂಪತ್ಯ ಇವರದಾಗುವುದು.ಇವರಿಗೆ ಈಗ ರಾಹುದಶಾ ಶನಿ ಭುಕ್ತಿ. ಗೋಚಾರದಲ್ಲಿ ಸಾಡೆಸಾತಿ, ಸಪ್ತಮಗುರು ಇದ್ದಾರೆ. ಇದರಿಂದ ಈಗ ಇವರ ಮದುವೆ ನೆರವೇರುವುದಾದರೂ ಉತ್ತಮ ಉದ್ಯೋಗ ಮುಂದಿನ ಬುಧ ಭುಕ್ತಿ ಯಲ್ಲಿ ಸಿಗುವ ಸಾಧ್ಯತೆ ಇದೆ.

ಪರಿಹಾರ: ಕನಕ ಪುಷ್ಯರಾಗ ಧರಿಸಿ. ಗಣಪತಿಯನ್ನು ಪೂಜಿಸಿ ರುದ್ರಾಭಿಷೇಕಮಾಡಿಸಿ. ಹನುಮಾನ್ ಚಾಲೀಸ ಪಠಿಸಿ.ರವಿ. ಪಿ.ಪತ್ತಾರ, ಜಮಖಂಡಿ: ಜನನ 25-3-1979, ಸಮಯ 7-42 ಸಂಜೆ.

ಪ್ರಶ್ನೆ: ಬಿಎಸ್ಸಿ ಕಂಪ್ಯೂಟರ ಓದಿದ್ದೇನೆ. ಸ್ಪರ್ಧಾತ್ಮಕ ಪರೀಕ್ಷೆ ಬರೆಯುತ್ತಿದ್ದೇನೆ. ಸರಕಾರಿ ಉದ್ಯೋಗದ ಬಗ್ಗೆ ತಿಳಿಸಿ.

ಉತ್ತರ: ಇವರದು ಕನ್ಯಾಲಗ್ನ, ಧನಿಷ್ಠಾ ನಕ್ಷತ್ರ ಕುಂಭರಾಶಿ. ಇವರ ಲಗ್ನಾಧಿಪತಿ ಬುಧರು ನೀಚರಾಗಿ, ವಕ್ರೀ ಆಗಿ ರವಿಯೊಡನೆ ಸ್ಥಿತರಿದ್ದು ಅಸ್ತರಾಗಿ, ಷಷ್ಟದಲ್ಲಿ ಪುಷ್ಕರ ನವಾಂಶದಲ್ಲಿ ಶನಿ ನಕ್ಷತ್ರ ಸ್ಥಿತರಿದ್ದಾರೆ. ಇವರನ್ನು ವಕ್ರೀ, ಅವಯೋಗಿ, ಉಚ್ಛ ಗುರು ಲಾಭದಿಂದ ವೀಕ್ಷಿಸುತ್ತಾರೆ. ಲಗ್ನವನ್ನು ಕುಜರು ಷಷ್ಟದಿಂದ ವೀಕ್ಷಿಸುತ್ತಾರೆ. ಇದರಿಂದ ಲಗ್ನ ಮತ್ತು ಲಗ್ನಾಧಿಪರು ಪೀಡಿತರಾಗಿದ್ದಾರೆ.ಇವರ ಸ್ಪರ್ಧಾತ್ಮ ಪರೀಕ್ಷೆಗಳ ಸೂಚಕ ಷಷ್ಟವು ಕುಂಭರಾಶಿಯಾಗಿದ್ದು, ಇಲ್ಲಿ ವಕ್ರೀ ಬುಧ, ವ್ಯಯಾಧಿಪತಿ ರವಿ, ಪಾಪಿ ಕೇತು, ಅಷ್ಟಮಾಧಿಪತಿ ಕುಜರು ಸ್ಥಿತರಿದ್ದಾರೆ. ಷಷ್ಟಾಧಿಪತಿ ಶನಿ ವಕ್ರೀ ಆಗಿ ರಾಹು ಒಡನೆ ವ್ಯಯದಲ್ಲಿ ದಗ್ಧರಾಶಿ ಸ್ಥಿತರಿದ್ದಾರೆ. ಇವು ಶುಭಕರವಲ್ಲ.ಇವರ ಉನ್ನತ ವಿದ್ಯಾ ಸೂಚಕ ಭಾಗ್ಯಸ್ಥಾನವು ವೃಷಭವಾಗಿದ್ದು ದಗ್ಧರಾಶಿಯಾಗಿದೆ. ರಾಶ್ಯಾಧಿಪತಿ ಶುಕ್ರರು ಯೋಗಿಯಾಗಿ ವೈರಿ ಚಂದ್ರರೊಡನೆ ಪಂಚಮ ಸ್ಥಿತರಿದ್ದಾರೆ. ಇವರಿಗೆ ಯಾವ ಶುಭ ಸಂಬಂಧವೂ ಇಲ್ಲ. ಹೆಚ್ಚಿನ ಗ್ರಹರು ದುಃಸ್ಥಾನ ಸ್ಥಿತರಿದ್ದಾರೆ. ಇವು ಇವರ ಉನ್ನತ ವಿದ್ಯೆಗೂ, ಸ್ಪರ್ಧಾತ್ಮಕ ಪರೀಕ್ಷೆಗೂ ಸಹಾಯಕವಲ್ಲ.ಇವರ ಉದ್ಯೋಗ ಸೂಚಕ ದಶಮವು ಮಿಥುನವಾಗಿದ್ದು ಇಲ್ಲಿ ಅವಯೋಗಿ ವಕ್ರೀ ಗುರು ಸ್ಥಿತರಿದ್ದಾರೆ. ಸರಕಾರಿ ಉದ್ಯೋಗ ಸೂಚಕ ರವಿ ವೈರಿ ಶನಿ ನಕ್ಷತ್ರದಲ್ಲಿ ಷಷ್ಟದಲ್ಲಿ ಕುಜ ಮತ್ತು ಕೇತು ಒಡನೆ ಸ್ಥಿತರಿದ್ದು ಪೀಡಿತರಾಗಿದ್ದಾರೆ.ಉದ್ಯೋಗ ಸೂಚಕ ಅಂಶ ಕುಂಡಲಿಯ ಲಗ್ನವು ಮಕರ ವಾಗಿದ್ದು ಪುಣ್ಯಾಂಶದಲ್ಲಿದೆ. ಲಗ್ನದಲ್ಲಿ ಲಗ್ನಾಧಿಪತಿ ಶನಿ ಮತ್ತು ಬುಧ ಸ್ಥಿತರಿದ್ದಾರೆ. ಆದ್ದರಿಂದ ಸೂಕ್ತ ಸಮಯದಲ್ಲಿ ಹೆಚ್ಚಿನ ಖರ್ಚುವೆಚ್ಚ ಮತ್ತು ಪ್ರಯತ್ನದಿಂದ ಸರಕಾರಿ ಉದ್ಯೋಗ ಸಿಗುವ ಸಾಧ್ಯತೆ ಇದೆ.ಇವರಿಗೆ ಈಗ ಅವಯೋಗಿ ಗುರುದಶಾ ಕುಜ ಭುಕ್ತಿ ನಡೆಯುತ್ತಿದ್ದು, ಗೋಚಾರದಲ್ಲಿ ಅಷ್ಟಮಶನಿ ದ್ವಿತೀಯಗುರು ಇದ್ದಾರೆ. ಇವು ಶುಭಕರವಲ್ಲ. 2013 ರಲ್ಲಿ ಶನಿದಶಾದಲ್ಲಿ ್ಲಇವರಿಗೆ ಸರಕಾರಿ ಉದ್ಯೋಗ ಸಿಗುವ ಸಾಧ್ಯತೆ ಇದೆ.

ಪರಿಹಾರ: ಪಚ್ಛೆಹರಳು, ನೀಲಮಣಿ ಧರಿಸಿ. ಲಲಿತಾತ್ರಿಶತಿ ಪಠಿಸಿ. ರುದ್ರಾಭಿಷೇಕಮಾಡಿಸಿ.ಸಿ. ಎಂ. ಮಹಾಲಿಂಗಯ್ಯ, ತುರುವೆಕೆರೆ

ಮನೆಯ ನಕ್ಷೆ ಕಳಿಸಿದ್ದೇನೆ. ವಾಸ್ತು ದೋಷವಿದ್ದರೆ ತಿಳಿಸಿ.

ಉತ್ತರ: ಇವರು ಕಳಿಸಿದ ನಕ್ಷೆಯಂತೆ ಹೆಚ್ಚಿನ ನಿರ್ಮಾಣಗಳೆಲ್ಲವೂ  ವಾಸ್ತು ಪ್ರಕಾರ ಸರಿಯಾಗಿದ್ದರೂ ಶೌಚಾಲಯ  ಉತ್ತರಕ್ಕಿದ್ದು ಅದರ ಬಾಗಿಲೂ ಉತ್ತಕ್ಕಿರುವುದು ತಪ್ಪು. ಸ್ನಾನದ ಮನೆಯಲ್ಲಿ ಸ್ವಲ್ಪ ಬದಲಾವಣೆ ಮಾಡಿ ಶೌಚಾಲಯ ಪಶ್ಚಿಮದಲ್ಲಿ ಇರುವಂತೆ ನೋಡಿಕೊಳ್ಳಿ. ಮನೆಗೆ ಕಿಡಕಿ ಬಾಗಿಲು ಸರಿಯಾಗಿ ತೋರಿಸಿಲ್ಲ. ಇವು ಸಮಸಂಖ್ಯೆಯಲ್ಲಿ ಇರುವಂತೆ ನೋಡಿಕೊಳ್ಳಿ. ಪೂಜಾರೂಮ್ ನ ಹಿಂಭಾಗ ಶೌಚಾಲಯ ಇರುವುದರಿಂ ಅಲ್ಲಿ ಅಖಂಡ ಜ್ಯೋತಿ ಬೆಳಗಿಸಿ.ಉಳಿದಂತೆ ನಿಮ್ಮ ನಕ್ಷೆಯಲ್ಲಿ ತೋರಿಸಿರುವ ವಿವರಗಳು ಸರಿಯಾಗಿವೆ.ನಾಗಲಕ್ಷ್ಮಿ. ಎಂ .ಆರ್. ಬೆಂಗಳೂರು

ನಿವೇಶನದ ನಕ್ಷೆ ಕಳಿಸಿದ್ದೇನೆ. ಮನೆಕಟ್ಟಲು ಸಲಹೆ ನೀಡಿ.

ಉತ್ತರ: ನಿಮ್ಮದು ಪೂರ್ವ ನಿವೇಶನ. ನಿವೇಶನ ಸುತ್ತ, ದೇವಸ್ಥಾನ, ಮರಗಳು, ಇಲೆಕ್ಟ್ರಿಕ್ ಟ್ರಾನ್ಫಾರ್ಮರ್, ಚರಂಡಿ ಇತ್ಯಾದಿ ಇವೆಯೋ ತಿಳಿಸಿಲ್ಲ. ಇವೆಲ್ಲ ಇಲ್ಲಂವೆದು ತಿಳಿದು ಉತ್ತರಿಸಲಾಗುತ್ತಿದೆ.  ಮನೆಯ ಮುಖ್ಯ ಬಾಗಿಲು ನಿಮ್ಮ ರಾಶಿಗೆ ದಕ್ಷಿಣ ದಿಕ್ಕು  ಉತ್ತಮ ಆದರೂ ಪೂರ್ವದಿಕ್ಕಿನಲೂ ಇಡಬಹುದು. ದಕ್ಷಿಣದಲ್ಲಿ ಪೂರ್ವದ ಕಡೆ ಮತ್ತು ಪೂರ್ವದಲ್ಲಾದರೆ ಈಶಾನ್ಯದ ಕಡೆ ಬಾಗಿಲು ಇಡಬೇಕು. ನೀರಿನ ಸಂಪು ಈಶಾನ್ಯದಲ್ಲಿ ಅಥವಾ ಪೂರ್ವದಲ್ಲಿ ಇಡಿ.ಅಡುಗೆ ಮನೆ ಆಗ್ನೇಯದಲ್ಲಿ ಯಜಮಾನರ ಕೋಣೆ ನೈರುತ್ಯದಲ್ಲಿ ಇಡಿ. ಪೂಜಾಕೋಣೆ ಈಶಾನ್ಯದಲ್ಲಿ ಇರಲಿ. ಮೆಟ್ಟಿಲು ಪ್ರದಕ್ಷಿಣಾಕಾರವಾಗಿ ದಕ್ಷಿಣದಲ್ಲಿರಲಿ.  10 ಬಿಟ್ಟು ಸಮಸಂಖ್ಯೆಯ ಕಿಡಕಿ ಬಾಗಿಲು ಇರಲಿ. ಸ್ನಾನ ಗೃಹ, ಶೌಚಾಲಯ ಪಶ್ಚಿಮ ಅಥವಾ ದಕ್ಷಿಣಕ್ಕಿರಲಿ. ಓವರ್ ಹೆಡ್ ಟ್ಯಾಂಕ ನೈರುತ್ಯದಲ್ಲಿರಲಿ. ಮನೆಯ ಸುತ್ತ ಖಾಲಿ ಸ್ಥಳವಿದ್ದು, ಪೂರ್ವ ಮತ್ತು ಉತ್ತರಕ್ಕೆ ಹೆಚ್ಚು ಇರಲಿ. ಇವು ಸಾಮಾನ್ಯ ನಿಯಮಗಳು. ಹೆಚ್ಚಿನ ವಿವರ ಗಳಿಗೆ ವಾಸ್ತು ತಜ್ಞರನ್ನು ಸಂಪರ್ಕಿಸುವುದು ಸೂಕ್ತ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry