ಜೋಧ್‌ಪುರದಲ್ಲಿ ಕೊಡಗಿನ ಯೋಧ ಸಾವು

ಶನಿವಾರ, ಜೂಲೈ 20, 2019
22 °C

ಜೋಧ್‌ಪುರದಲ್ಲಿ ಕೊಡಗಿನ ಯೋಧ ಸಾವು

Published:
Updated:

ನಾಪೋಕ್ಲು: ಸಮೀಪದ ಪಾಲೂರು ಗ್ರಾಮದ ಯೋಧ ಹರೀಶ್ (27) ರಾಜಸ್ತಾನದ ಜೋಧ್‌ಪುರದಲ್ಲಿ ಶುಕ್ರವಾರ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ.ಪಾಲೂರು ಗ್ರಾಮದ ನಾರಾಯಣ ಮತ್ತು ಕುಸುಮ ದಂಪತಿಗಳ ಪ್ರಥಮ ಪುತ್ರ ಹರೀಶ್ ಕಳೆದ ಹನ್ನೆರಡು ವರ್ಷಗಳಿಂದ ಸೇನೆಯ ಎಂ.ಇ.ಜಿ.ಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು.ಇತ್ತೀಚೆಗಷ್ಟೇ ಹೊದ್ದೂರು ಪಾಲೇಮಾಡು ಗ್ರಾಮದ ಹರ್ಷಿತಾ ರೈ (ರೇಖಾ ರೈ) ಅವರನ್ನು ವಿವಾಹವಾಗಿದ್ದರು.

ಹರೀಶ್ ಎರಡು ತಿಂಗಳ ರಜೆ ಮುಗಿಸಿ ಜೂನ್ 5ರಂದು ಮರಳಿ ಸೇನಾ ಕರ್ತವ್ಯಕ್ಕೆ ತೆರಳಿದ್ದರು.ಶುಕ್ರವಾರ ಹೃದಯಾಘಾತದಿಂದ ಇಹಲೋಹ ತ್ಯಜಿಸಿದ್ದಾರೆ. ಹರೀಶ್ ಅವರ ಪಾರ್ಥಿವ ಶರೀರ ಶನಿವಾರ ರಾತ್ರಿ ಬೆಂಗಳೂರು ತಲುಪಲಿದ್ದು, ಭಾನುವಾರ ಬೆಳಿಗ್ಗೆ ಸ್ವಗ್ರಾಮ ತಲುಪಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry