ಭಾನುವಾರ, ಡಿಸೆಂಬರ್ 8, 2019
25 °C

ಜೋಧ್‌ಪುರದಲ್ಲಿ ಬಾಪು ವಿಚಾರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜೋಧ್‌ಪುರದಲ್ಲಿ ಬಾಪು ವಿಚಾರಣೆ

ಜೈಪುರ (ಪಿಟಿಐ): ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪ ಎದುರಿಸುತ್ತಿರುವ ಸ್ವಯಂಘೋಷಿತ ದೇವಮಾನವ ಅಸಾರಾಮ್ ಬಾಪು ಅವರನ್ನು ವಿಚಾರಣೆಗಾಗಿ ರಾಜಸ್ತಾನ ಪೊಲೀಸರು ಜೋಧ್‌ಪುರಕ್ಕೆ ಭಾನುವಾರ ಕರೆತಂದಿದ್ದಾರೆ.

ಬಾಪು ಅವರನ್ನು ಭಾರೀ ಭದ್ರತೆಯೊಂದಿಗೆ ಇಲ್ಲಿಗೆ ಕರೆತರಲಾಯಿತು. ವಿಚಾರಣೆಗೆ ಅರ್ಹರಾಗಿದ್ದಾರೆ ಎಂದು ವೈದ್ಯಕೀಯ ವರದಿ ತಿಳಿಸಿದ ನಂತರ ಅವರನ್ನು ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. 

ಪೊಲೀಸ್ ಬಂಧನ ತಪ್ಪಿಸಿಕೊಳ್ಳಲು ಅಸಾರಾಮ್ ಶುಕ್ರವಾರ ಸಂಜೆಯಿಂದ ಭೂಗತವಾಗಿದ್ದಾರೆ ಎಂಬ ದಟ್ಟ ವದಂತಿ ಹಬ್ಬಿತ್ತು.  ಆದರೆ ಶನಿವಾರ ಬಾಪು ಅವರನ್ನು ಬಂಧಿಸಲಾಯಿತು. ಇಂದೋರ್ ನಿಂದ ವಿಮಾನ ಮೂಲಕ ಜೋಧ್ ಪುರಕ್ಕೆ ಇಂದು ಬೆಳಗ್ಗೆ ಕರೆತರಲಾಯಿತು. 

 

ಪ್ರತಿಕ್ರಿಯಿಸಿ (+)