ಬುಧವಾರ, ನವೆಂಬರ್ 13, 2019
25 °C

ಜೋಲಿಯ ತೆರೆದೆದೆಯ ಚಿತ್ರ ಈಗ ಹರಾಜಿಗೆ

Published:
Updated:

ಬಿಳಿ ಕುದುರೆಯ ಮುಂದೆ ಬೆತ್ತಲೆ ನಿಂತ ಹಾಲಿವುಡ್ ನಟಿ ಏಂಜಲೀನಾ ಜೋಲಿಯ ಛಾಯಾಚಿತ್ರವನ್ನು ಮುಂದಿನ ತಿಂಗಳು ಹರಾಜಿಗಿಡಲು ಲಂಡನ್ನಿನ `ಕ್ರಿಸ್ಟೀ ಆಕ್ಷನ್ ಹೌಸ್' ತಿರ್ಮಾನಿಸಿದೆ.`37 ವರ್ಷದ ನಟಿಯ ವರ್ಣರಂಜಿನ ಛಾಯಾಚಿತ್ರದಲ್ಲಿ ಜೋಲಿ ಹಿಂದಕ್ಕೆ ಬಾಗಿ ಕೈಯ್ಯಲ್ಲಿ ಕುದುರೆಯ ಲಗಾಮು ಹಿಡಿದಿದ್ದಾರೆ. ಕುದುರೆ ಆಕೆಯ ಎದೆಗೆ ಮುತ್ತಿಕ್ಕುತ್ತಿರುವಂತಿದೆ' ಎಂದು ಸನ್ ಆನ್‌ಲೈನ್ ಛಾಯಾಚಿತ್ರದ ಭಂಗಿಯನ್ನು ವಿವರಿಸಿದೆ.ಈ ಛಾಯಾಚಿತ್ರವನ್ನು ವನ್ಯಜೀವಿ ವಿಭಾಗದಲ್ಲಿ ಹರಾಜು ಮಾಡಲಿದ್ದು, ಡೆವಿಡ್ ಲಾಚಾಪೆಲ್ ಅವರು 2001ರಲ್ಲಿ ಈ ಚಿತ್ರವನ್ನು ತೆಗೆದಿದ್ದಾರೆ. ಈ ಛಾಯಾಚಿತ್ರ 25ರಿಂದ 35 ಸಾವಿರ ಪೌಂಡ್‌ಗೆ (20ರಿಂದ 30ಲಕ್ಷ ರೂಪಾಯಿ) ಹರಾಜಾಗುವ ನಿರೀಕ್ಷೆ ಇದೆ.ಜೂಲಿ ತಮ್ಮ ಎಡತೋಳಿನ ಮೇಲಿದ್ದ, ಮಾಜಿ ಪತಿ ಬಿಲ್ಲಿ ಬಾಬ್ ಅವರ ಹೆಸರನ್ನು ವಿಚ್ಛೇದನದ ನಂತರ ಅಳಿಸಿ ಹಾಕಿದ್ದರು. ಆದರೆ ಈ ಚಿತ್ರದಲ್ಲಿ ಅದನ್ನು ಕಾಣಬಹುದಾಗಿದೆ. ಇಷ್ಟೇ ಅಲ್ಲದೆ ಎರಡು ದೊಡ್ಡ ಟ್ಯಾಟೂಗಳು ಆಕೆಯ ಹೊಟ್ಟೆಯ ಬಳಿ ಇರುವುದನ್ನೂ ಗಮನಿಸಬಹುದು.ಇದೇ ಸಂದರ್ಭದಲ್ಲಿ ಜೋಲಿ ಹಾಗೂ ಆಕೆಯ ಈಗಿನ ಗೆಳೆಯ ಬ್ರಾಡ್ ಪಿಟ್ ಒಡನಾಟದ ಆರಂಭದ ದಿನಗಳ ಚಿತ್ರವನ್ನೂ ಹರಾಜಿನಲ್ಲಿ ಇಡಲಾಗಿದೆ.ಚಿತ್ರದಲ್ಲಿ ಜೂಲಿಯೊಂದಿಗೆ ಬ್ರಾಡ್ ಪಿಟ್ ಇದ್ದಾರೆ. ಜತೆಗೆ ಐವರು ಮಕ್ಕಳು ಊಟಕ್ಕೆ ಕುಳಿತು ಪ್ರಾರ್ಥನೆ ಸಲ್ಲಿಸುವ ಅಪರೂಪದ ಚಿತ್ರ ಇದಾಗಿದೆ.

ಪ್ರತಿಕ್ರಿಯಿಸಿ (+)