ಜೋಳದ ಜೊಳ್ಳು ಹಾರಿದೆ: ಅಶೋಕ

7

ಜೋಳದ ಜೊಳ್ಳು ಹಾರಿದೆ: ಅಶೋಕ

Published:
Updated:

ಗುಲ್ಬರ್ಗ: ಜೋಳದ ಜೊಳ್ಳು ಹಾರಿದೆ. ಬಿಜೆಪಿಯಲ್ಲಿ ಈಗ ಗಟ್ಟಿ ಕಾಳುಗಳು ಮಾತ್ರ ಉಳಿದಿವೆ. ಉಪಮುಖ್ಯಮಂತ್ರಿ ಆರ್.ಅಶೋಕ ಮಂಗಳವಾರ ಗುಲ್ಬರ್ಗ ಬಿಜೆಪಿ ಕಾರ್ಯಕರ್ತರ ಸಮಾವೇಶದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಟಾಂಗ್ ನೀಡಿದ್ದು ಹೀಗೆ. ಭಾಷಣದಲ್ಲಿ ಬಿಎಸ್‌ವೈ ಹೆಸರು ಪ್ರಸ್ತಾಪಿಸದ ಸಚಿವರು, ಆರಂಭದಿಂದ ಕೊನೆ ತನಕವೂ ಲೇವಡಿ ಮಾಡಿದರು.ದಿನನಿತ್ಯ ಸಮಸ್ಯೆ ಉಂಟು ಮಾಡುತ್ತಿದ್ದವರು ಈಗ ಹೊರ ಹೋಗಿದ್ದಾರೆ. ಬಿಜೆಪಿಯ ಎದುರಾಳಿ ಕಾಂಗ್ರೆಸ್ ಮಾತ್ರ. ಉಳಿದುವೆಲ್ಲ ನೀರ ಮೇಲಿನ ಗುಳ್ಳೆಗಳು ಎಂದರು.ಸಮಾಜದಲ್ಲಿನ ಅನ್ಯಾಯಕ್ಕೆ ಹೋರಾಡಿದರೆ ಜನತೆ ಬೆಂಬಲಿಸುತ್ತಾರೆ. ವೈಯಕ್ತಿಕ ಅನ್ಯಾಯ ಆಗಿದೆ ಎಂದರೆ ಕುಟುಂಬದವರು ಮಾತ್ರ ಹಿಂದೆ ಬರಲು ಸಾಧ್ಯ ಎಂದು ಲೇವಡಿ ಮಾಡಿದ ಅವರು, ಬಿಜೆಪಿಗಾಗಿ ದುಡಿದವರಿಗೆ ನ್ಯಾಯ ಒದಗಿಸಲು ಅವಕಾಶ ಬಂದಿದೆ ಎಂದರು.ಬಿಜೆಪಿ ವಿಚಾರಧಾರೆ ನೋಡಿ ಜನ ಮತ ಹಾಕಿದರೇ ಹೊರತು ವ್ಯಕ್ತಿ ನೋಡಿ ಅಲ್ಲ. ಎ.ಕೆ. ಸುಬ್ಬಯ್ಯ ರಾಜ್ಯ ಘಟಕದ ಅಧ್ಯಕ್ಷ ಆಗಿದ್ದಾಗ 18 ಸೀಟು, ಶೆಟ್ಟರ್ ಅವಧಿಯಲ್ಲಿ 45, ಅನಂತಕುಮಾರ್ ಅವಧಿಯಲ್ಲಿ 79 ಬಳಿಕ ಡಿ.ವಿ. ಸದಾನಂದ ಗೌಡ ಆಗಿದ್ದಾಗ 110 ಬಂತು. ಯಾರೇ ಹೋದರೂ-ಬಂದರೂ ಬಿಜೆಪಿ ಬೆಳೆಯುತ್ತಲೇ ಇದೆ ಎಂದು ವರ್ಣಿಸಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry