ಜೋಶಿ ವಿರುದ್ಧ ಸ್ಪರ್ಧಿಸದಂತೆ ಮುತಾಲಿಕ್‌ಗೆ ಜೀವಬೆದರಿಕೆ

7

ಜೋಶಿ ವಿರುದ್ಧ ಸ್ಪರ್ಧಿಸದಂತೆ ಮುತಾಲಿಕ್‌ಗೆ ಜೀವಬೆದರಿಕೆ

Published:
Updated:

ಹುಬ್ಬಳ್ಳಿ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸಂಸದ ಪ್ರಹ್ಲಾದ ಜೋಶಿ ವಿರುದ್ಧ ಕಣಕ್ಕಿಳಿಯದಂತೆ ಅನಾ­ಮಧೇಯ ಪತ್ರ ಬರೆದು ಜೀವಬೆದರಿಕೆ ಒಡ್ಡಲಾಗಿದೆ ಎಂದು ವಿದ್ಯಾನಗರ ಪೊಲೀಸ್‌ ಠಾಣೆಯಲ್ಲಿ ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ ಮುತಾಲಿಕ್‌ ದೂರು ನೀಡಿದ್ದಾರೆ.ಎರಡು ದಿನಗಳ ಹಿಂದೆ ಬೆಳಗಾವಿಯ ಉದಯ ಪಿ.ಎಂ. ಎಂಬಾತನ ಹೆಸರಿನಲ್ಲಿ ಹುಬ್ಬಳ್ಳಿಯ ಶ್ರೀರಾಮಸೇನಾ ವಿಳಾಸಕ, ಮುತಾಲಿಕ್‌ ಅವರ ಹೆಸರಿಗೆ ಕೊರಿಯರ್‌ ಮೂಲಕ ಜೀವಬೆದರಿಕೆ ಪತ್ರ ಬಂದಿತ್ತು. ‘ಪ್ರಹ್ಲಾದ ಜೋಶಿ ವಿರುದ್ಧ ಸ್ಪರ್ಧಿಸಿದರೆ ಹುಷಾರ್‌, ಪರಿಣಾಮ ನೆಟ್ಟಗಿರುವುದಿಲ್ಲ. ನಿಮ್ಮ ವಿರುದ್ಧ ಸಿ.ಡಿಗಳನ್ನು ಹೊರತರಬೇಕಾಗುತ್ತದೆ’ ಎಂದು ಪತ್ರದಲ್ಲಿ ಬೆದರಿಕೆ ಒಡ್ಡಲಾಗಿದೆ. ಪ್ರಕರಣ ದಾಖ­ಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.ಪತ್ನಿ ಕೊಲೆ: ಪತಿಗೆ ಜೀವಾವಧಿ ಶಿಕ್ಷೆ

ಹುಬ್ಬಳ್ಳಿ:
ಶೀಲ ಶಂಕಿಸಿ ಪತ್ನಿಯನ್ನು ಅಮಾನುಷವಾಗಿ ಕೊಲೆ ಮಾಡಿದ್ದ ಪತಿಗೆ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್‌್ಸ ನ್ಯಾಯಾಲಯ ಜೀವಾವಧಿ ಶಿಕ್ಷೆ ಮತ್ತು ₨ 10 ಸಾವಿರ ದಂಡ ವಿಧಿಸಿದೆ.ಬಸಪ್ಪ ಮರಕುಂಬಿ (45) ಶಿಕ್ಷೆಗೊಳಗಾದವನು. ಕೇಶ್ವಾಪುರದ ಮನೋಜ ಪಾರ್ಕ್‌ನಲ್ಲಿ ಶೆಡ್‌ ಒಂದರಲ್ಲಿ ನೆಲೆಸಿದ್ದ ಬಸಪ್ಪ, 2011ರ ಸೆ. 29ರಂದು ಬೆಳಗಿನ ಜಾವ 2 ಗಂಟೆ ಸುಮಾರಿಗೆ ಪತ್ನಿ ಕೆಂಚವ್ವಳನ್ನು (32) 25ಕ್ಕೂ ಹೆಚ್ಚು ಬಾರಿ ಬರ್ಬರವಾಗಿ ಇರಿದು ಕೊಲೆ ಮಾಡಿದ್ದ ಆರೋಪ ಎದುರಿಸುತ್ತಿದ್ದ.ಪ್ರಕರಣವನ್ನು ದಾಖಲಿಸಿಕೊಂಡಿದ್ದ ಕೇಶ್ವಾಪುರ ಠಾಣೆಯ ಇನ್‌ಸ್ಪೆಕ್ಟರ್‌ ಪ್ರಭು ಗೌಡ, ಪತ್ನಿಯ ಹೊಟ್ಟೆ, ಬೆನ್ನು, ಎದೆ, ಕುತ್ತಿಗೆ ಸಹಿತ ಅತಿ ಸೂಕ್ಷ್ಮ ಭಾಗಗಳಿಗೆ ಆರೋಪಿ ಬಸಪ್ಪ ಇರಿದು ಕೊಲೆ ಮಾಡಿದ ಬಗ್ಗೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. 16 ಮಂದಿ ಸಾಕ್ಷಿಗಳನ್ನು ವಿಚಾರಣೆ ನಡೆಸಿದ್ದು, ಮೃತಳ ತಾಯಿ ಮತ್ತು ಪುತ್ರ ನೀಡಿದ ಬಲವಾದ ಸಾಕ್ಷ್ಯ ಆರೋಪ ಸಾಬೀತು ಪಡಿಸುವಲ್ಲಿ ಪ್ರಮುಖ ಮಾತ್ರ ವಹಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry