ಜೋಶಿ ಹೈದರಾಬಾದ್ ರಣಜಿ ತಂಡದ ಕೋಚ್

7

ಜೋಶಿ ಹೈದರಾಬಾದ್ ರಣಜಿ ತಂಡದ ಕೋಚ್

Published:
Updated:

ಬೆಂಗಳೂರು: ಕರ್ನಾಟಕದ ಅನುಭವಿ ಆಟಗಾರ ಸುನಿಲ್ ಜೋಶಿ ಹೈದರಾಬಾದ್ ರಣಜಿ ಕ್ರಿಕೆಟ್ ತಂಡದ ಕೋಚ್ ಆಗಿ ನೇಮಕಗೊಂಡಿದ್ದಾರೆ.ಅವರು ಒಂದು ವರ್ಷದ ಅವಧಿಗೆ (2011-12ರ ಋತು) ಹೈದರಾಬಾದ್ ಕ್ರಿಕೆಟ್ ಸಂಸ್ಥೆ (ಎಚ್‌ಸಿಎ) ಜೊತೆ ಒಪ್ಪಂದ ಮಾಡಿಕೊಂಡಿದ್ದಾರೆ. ಈ ಕಾರಣ ಕರ್ನಾಟಕ ರಣಜಿ ತಂಡದ ಆಟಗಾರನಾಗಿ ಅವರ ವೃತ್ತಿಜೀವನಕ್ಕೆ ತೆರೆಬಿದ್ದಿದೆ.ಜೋಶಿ ಹೈದರಾಬಾದ್ ತಂಡದ ಕೋಚ್ ಹುದ್ದೆ ಅಲಂಕರಿಸುವರು ಎಂಬ ಸುದ್ದಿ ರಹಸ್ಯವಾಗಿ ಉಳಿದಿರಲಿಲ್ಲ. ರಣಜಿ ತಂಡದ ಕೋಚ್ ಆಗುವರು ಎಂಬುದನ್ನು ಎಚ್‌ಸಿಎ ಈ ಹಿಂದೆಯೇ ಖಚಿತಪಡಿಸಿತ್ತು. `ಪ್ರಜಾವಾಣಿ~ ಈ ಕುರಿತು ವರದಿ ಪ್ರಕಟಿಸಿತ್ತು. ಮಾತ್ರವಲ್ಲ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಸಿಎ) ಕೆಲ ದಿನಗಳ ಹಿಂದೆ ಪ್ರಕಟಿಸಿದ ರಣಜಿ ಸಂಭವನೀಯ ಆಟಗಾರರ ಪಟ್ಟಿಯಲ್ಲಿ ಜೋಶಿ ಅವರ ಹೆಸರು ಇರಲಿಲ್ಲ.ಜೋಶಿ ತಮ್ಮ ನಿರ್ಧಾರವನ್ನು ಕೆಎಸ್‌ಸಿಎಗೆ ತಿಳಿಸಿದ್ದಾರೆ. ಹೈದರಾಬಾದ್ ತಂಡ ಇದೀಗ ರಣಜಿಯಲ್ಲಿ `ಪ್ಲೇಟ್ ವಿಭಾಗ~ ದಲ್ಲಿ ಆಡುತ್ತಿದೆ. ಈ ತಂಡವನ್ನು ಸೂಪರ್ ಲೀಗ್ ಹಂತಕ್ಕೆ ಕೊಂಡೊಯ್ಯುವ ಜವಾಬ್ದಾರಿ ಜೋಶಿ ಮುಂದಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry