ಗುರುವಾರ , ಏಪ್ರಿಲ್ 15, 2021
23 °C

ಜ್ಞಾನದಿಂದ ಜೀವನ ಸಂತೃಪ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗೋಕಾಕ: ಅನ್ನದಿಂದ ಕ್ಷಣಿಕ ತೃಪ್ತಿ. ಜ್ಞಾನದಿಂದ ಇಡೀ ಜೀವನ ಸಂತೃಪ್ತಿ ಲಭಿಸುವುದು ಎಂದು ಶೂನ್ಯ ಸಂಪಾದನಮಠದ ಶ್ರೀ ಮುರುಘರಾಜೇಂದ್ರ ಸ್ವಾಮೀಜಿ ನುಡಿದರು.ಗುರುವಾರ ನಗರದ ವಿವೇಕಾನಂದ ನಗರ ಬಡಾವಣೆಯ ಶ್ರೀ ಶಿವಲಿಂಗೇಶ್ವರ ವಿಕಾಸ ಸಮಿತಿ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಶ್ರೀ ಶಿವಲಿಂಗೇಶ್ವರ ಜಾತ್ರಾ ಮಹೋತ್ಸವದಲ್ಲಿ ದಾನಿಗಳ ಸತ್ಕಾರ ಹಾಗೂ ಬಹುಮಾನ ವಿತರಣಾ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಶ್ರೀಗಳು, ಉಪವಾಸ ಎಂದರೆ ಕೇವಲ ದೈಹಿಕ ಉಪವಾಸವಾಗಿರದೇ ಭಗವಂತನ ಬಳಿ ನಮ್ಮನ್ನು ನಾವು ಕೊಂಡೊಯ್ಯುವುದು ಎಂದು ಅರ್ಥೈಸಿದರು.ಅಧ್ಯಕ್ಷತೆ ವಹಿಸಿದ್ದ ಜಾತ್ರಾಮಹೋತ್ಸವ ಸಮಿತಿ ಅಧ್ಯಕ್ಷ ಬಿ.ಬಿ. ಕಾಪಶಿ, ದೇವಸ್ಥಾನದ ಶ್ರೇಯೋಭಿವೃದ್ಧಿಗೆ ಭಕ್ತರು ತನು-ಮನ-ಧನದಿಂದ ನೆರವು ನೀಡುವಂತೆ ಅರಿಕೆ ಮಾಡಿದರು.ಇದೇ ಸಂದರ್ಭದಲ್ಲಿ ದೇವಾಲಯದ ಅಭಿವೃದ್ಧಿ ಕೆಲಸ-ಕಾರ್ಯಗಳಿಗೆ ಉದಾರ ದೇಣಿಗೆ ನೀಡಿದ ಮಹನೀಯರನ್ನು ಸಮಿತಿಯ ಪರವಾಗಿ ಗೌರವಿಸಲಾಯಿತು.ವೇದಿಕೆಯಲ್ಲಿ ನಗರಸಭೆ ಅಧ್ಯಕ್ಷೆ ಸಾವಿತ್ರಿ ಕಂಬಳಿ, ಜಿ.ಪಂ. ಸದಸ್ಯೆ ಪಾರ್ವತಿ ಕಾಗಲ, ವಲಯ ಅರಣ್ಯಾಧಿಕಾರಿ ಶಿವಾನಂದ ಪಾಟೀಲ, ಜಿ.ಪಂ. ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಎಂ.ಎಸ್. ವಾಲಿ ಮತ್ತಿತರರು ಉಪಸ್ಥಿತರಿದ್ದರು.ಅಬಕಾರಿ ಹಾಗೂ ಲಾಟರಿ ನಿಷೇಧ ದಳದ ಇನ್‌ಸ್ಪೆಕ್ಟರ್ ಅಡಿವೆಪ್ಪ ಬೂದಿಗೊಪ್ಪ, ಆಹಾರ ನಿರೀಕ್ಷಕ ಜಟ್ಟೆಪ್ಪ ಭೋಸಗಾ, ಗುತ್ತಿಗೆದಾರ ಐ.ಎಸ್. ಗುಂಡೇವಾಡಿ, ಪ್ರಗತಿಪರ ಕೃಷಿಕ ಆರ್.ಕೆ. ಗೋಣಿ, ಸಮಿತಿ ಉಪಾಧ್ಯಕ್ಷ ಜೀವಪ್ಪ ಬಡಿಗೇರ, ಕಾರ್ಯದರ್ಶಿ ಲಕ್ಕಪ್ಪ ಕೊತ್ತಲ, ಖಜಾಂಚಿ ವೀರಭದ್ರಪ್ಪ ಶೇಬಣ್ಣವರ, ಅಶೋಕ ಗೋಣಿ, ಶಿಕ್ಷಕರ ಸಂಘದ ಕಾರ್ಯದರ್ಶಿ ಎಂ.ಜಿ. ಹಿರೇಮಠ ಮತ್ತಿತರರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.ಪ್ರಾಚಾರ್ಯ ಎ.ಎ. ಬಿಜ್ಜಡ ಸ್ವಾಗತಿಸಿದರು. ಶಿಕ್ಷಕ ಎಸ್.ಕೆ. ಮಠದ ನಿರೂಪಿಸಿದರು. ಪ್ರಧಾನ ಗುರು ಎಸ್.ಆರ್. ದಾಸಪ್ಪನವರ ವಂದಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.