ಜ್ಞಾನದಿಂದ ನಾಡು ಶ್ರೀಮಂತ: ಸಿದ್ಧೇಶ್ವರ ಶ್ರೀ

ಸೋಮವಾರ, ಜೂಲೈ 22, 2019
27 °C

ಜ್ಞಾನದಿಂದ ನಾಡು ಶ್ರೀಮಂತ: ಸಿದ್ಧೇಶ್ವರ ಶ್ರೀ

Published:
Updated:

ಇಂಡಿ: ಜ್ಞಾನವು ವ್ಯಕ್ತಿ ಮತ್ತು ನಾಡನ್ನು ಶ್ರೆಮಂತಗೊಳಿಸುತ್ತದೆ. ಆದ್ದರಿಂದ ಜನತೆಗೆ ಶಿಕ್ಷಣ ನೀಡಲು ಪ್ರಯತ್ನಿಸಬೇಕು ಎಂದು ವಿಜಾಪುರ ಜ್ಞಾನ ಯೋಗಾಶ್ರಮದ ಸಿದ್ಧೇಶ್ವರ ಸ್ವಾಮೀಜಿ ಹೇಳಿದರು.ತಾಲ್ಲೂಕಿನ ಚವಡಿಹಾಳ ಗ್ರಾಮದಲ್ಲಿ ಭಾನುವಾರ ಏರ್ಪಡಿಸಿದ್ದ ಬಸವೇಶ್ವರ ಗ್ರಾಮೀಣಾಭಿವೃದ್ಧಿ ಸಂಘ ನಿರ್ಮಿಸಿದ ಕಾಲೇಜಿನ ನೂತನ ಕಟ್ಟಡ ಉದ್ಘಾಟನಾ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಸಂಸ್ಥೆಯವರು ತಮ್ಮ ಸ್ವಂತ ದುಡ್ಡಿನಿಂದ ವ್ಯವಸ್ಥಿತವಾದ ಕಟ್ಟಡ ನಿರ್ಮಿಸಿದ್ದಾರೆ. ಗ್ರಾಮೀಣ ಮಕ್ಕಳಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ. ದೂರದ ಪ್ರದೇಶಗಳಲ್ಲಿ ಸಿಗುತ್ತಿದ್ದ ಪಿಯು ವಿಜ್ಞಾನದ ಜ್ಞಾನವನ್ನು ಇಲ್ಲಿಯೇ ನೀಡುತ್ತಿದ್ದಾರೆ. ಅದರ ಸದುಪಯೋಗ ಮಾಡಿಕೊಳ್ಳಬೇಕು ಎಂದು ಹೇಳಿದರು.ನಾಗನೂರ ರುದ್ರಾಕ್ಷಿಮಠದ ಸಿದ್ಧರಾಮೇಶ್ವರ ಸ್ವಾಮೀಜಿ ಕಟ್ಟಡದ ಉದ್ಘಾಟಿಸಿ ಮಾತನಾಡಿ, ಜೀವನದ ಸಮಸ್ಯೆಗಳನ್ನು ಪರಿಹರಿಸುವ ಶಕ್ತಿ ಶಿಕ್ಷಣಕ್ಕಿದೆ. ಇದಿಲ್ಲದಿದ್ದರೆ ಜೀವನ ಶೂನ್ಯ. ಗ್ರಾಮೀಣ ಮಕ್ಕಳು ವಿಜ್ಞಾನ ಶಿಕ್ಷಣದಿಂದ ವಂಚಿತರಾಗುವುದನ್ನು ತಪ್ಪಿಸುವ ಪ್ರಯತ್ನವನ್ನು ಎಂ.ಬಿ.ಬಿರಾದಾರ ಮಾಡಿದ್ದಾರೆ ಎಂದರು.

ಶಾಸಕ ಡಾ. ಸಾರ್ವಭೌಮ ಬಗಲಿ, ಪಿಯು ಶಿಕ್ಷಣ ಇಲಾಖೆ ಉಪನಿರ್ದೇಶಕಿ ಕೆ.ಎಂ. ಚೌರ ಮಾತನಾಡಿದರು. ಸಂಸ್ಥೆಯ ಅಧ್ಯಕ್ಷ ಎಂ.ಬಿ. ಬಿರಾದಾರ ಪ್ರಾಸ್ತಾವಿಕವಾಗಿ ಮಾತನಾಡಿದರು.ವಿಜಾಪುರ ಜಿಲ್ಲಾ ಕಾಂಗ್ರೆಸ್ ಧುರೀಣ ಯಶವಂತ್ರಾಯಗೌಡ ಪಾಟೀಲ, ಡಿ.ಎ. ಬಿರಾದಾರ, ಜಿಲ್ಲಾ ಪಂಚಾಯಿತಿ ಸದಸ್ಯೆ ಪದ್ಮಾವತಿ ಪಾಟೀಲ, ಡಿ.ಎ. ಬಿರಾದಾರ, ಎಂ.ಕೆ. ಜೀರ, ಎ.ಎಸ್. ಹತ್ತಳ್ಳಿ, ಎಂ.ಎ. ಪಾಟೀಲ, ಜಿ.ಎಸ್. ಕುಲಕರ್ಣಿ, ಎಸ್.ಎಂ. ಕರಜಗಿ, ಡಿ.ಎಸ್. ಜೋಶಿ, ರಾಜು ಅಳಂದಿಕರ ಉಪಸ್ಥಿತರಿದ್ದರು.

ನಿಲೇಶ ಮದರಖಂಡಿ ಪ್ರಾರ್ಥನೆ ಗೀತೆ ಹಾಡಿದರು. ಪ್ರಾಚಾರ್ಯ ಎ.ಎಸ್. ಪಾಟೀಲ ಸ್ವಾಗತಿಸಿದರು. ಪ್ರೊ. ಎಸ್.ಬಿ. ಬಿರಾದಾರ ವಂದಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry