ಜ್ಞಾನದ ನಿಜವಾದ ಪರೀಕ್ಷೆ ಆಗಲಿ

7

ಜ್ಞಾನದ ನಿಜವಾದ ಪರೀಕ್ಷೆ ಆಗಲಿ

Published:
Updated:

ಸರ್ಕಾರಿ ಪದವಿ ಕಾಲೇಜುಗಳ 2,900ಕ್ಕೂ ಹೆಚ್ಚು ಹುದ್ದೆಗಳನ್ನು ಸಾಮಾನ್ಯ ಪ್ರವೇಶ ಪರೀಕ್ಷೆಯ ಮೂಲಕ ನೇಮಕ ಮಾಡಿಕೊಳ್ಳುವ ನಿರ್ಧಾರವನ್ನು ಉನ್ನತ ಶಿಕ್ಷಣ ಸಚಿವ ಆರ್.ವಿ.ದೇಶಪಾಂಡೆ ಅವರು ಪ್ರಕಟಿಸಿದ್ದಾರೆ. ಈ  ನಿರ್ಧಾರ ಅತ್ಯಂತ ಸ್ವಾಗತಾರ್ಹ. ಈ ನಿರ್ಧಾರದ ಮೂಲಕ, ಅಧ್ಯಾಪಕರ ನೇಮಕಾತಿ ಸಂದರ್ಭದಲ್ಲಿ ಎದುರಾಗುವ ಭ್ರಷ್ಟಾಚಾರದ ಜೊತೆಜೊತೆಗೆ ವಿಶ್ವವಿದ್ಯಾಲಯಗಳ ಅಂಕಗಳ ತರತಮಗಳ ರಾಜಕಾರಣಕ್ಕೂ ಕೊನೆ ಹೇಳಬಹುದಾಗಿದೆ.ಅದೇ ವೇಳೆಗೆ, ಈ ಸಾಮಾನ್ಯ ಪ್ರವೇಶ ಪರೀಕ್ಷೆಗಳು ಕೇವಲ ಯಾಂತ್ರಿಕ ನೆನಪಿನ ಆಧಾರದಲ್ಲಿ ಉತ್ತರಿಸಬಹುದಾದ ಒಂದು ಅಂಕದ ಪ್ರಶ್ನೆಗಳನ್ನು ಮಾತ್ರ ಒಳಗೊಳ್ಳದೆ, ವಿದ್ಯಾರ್ಥಿಗಳು ಆಯಾ ವಿಷಯದಲ್ಲಿ ಗಳಿಸಿರುವ ಜ್ಞಾನದ ನಿಜವಾದ ಪರೀಕ್ಷೆಯಾಗುವಂತಾಗಬೇಕು.ಈ ಪರೀಕ್ಷೆ ಸಾಮಾಜಿಕ ನ್ಯಾಯದ ಖಚಿತ ಅಳತೆಗೋಲನ್ನು ಒಳಗೊಂಡು ಪ್ರತಿಭೆಯನ್ನು ಗುರುತಿಸುವ ದಿಕ್ಕಿನಲ್ಲಿ ಪಾರದರ್ಶಕವಾಗಿ ನಡೆದರೆ, ಎಲ್ಲ ಜಾತಿ, ವರ್ಗಗಳ ನಿಜವಾದ ಪ್ರತಿಭಾವಂತರಿಗೆ ನ್ಯಾಯ ದೊರಕುತ್ತದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry