ಶನಿವಾರ, ಮೇ 15, 2021
24 °C

ಜ್ಞಾನಾಧಾರಿತ ಸಮಾಜ: ಭಾರತದ ಪಾತ್ರ ಮಹತ್ವದ್ದು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಜಾಪುರ: `ಜ್ಞಾನ ಆಧಾರಿತ ಸಮಾಜ ನಿರ್ಮಾಣದಲ್ಲಿ ಭಾರತ ಪ್ರಮುಖ ಪಾತ್ರವಹಿಸಿದೆ. ಈ ದಿಸೆಯಲ್ಲಿ ಜಗತ್ತಿನ ಉಳಿದ ಅಭಿವೃದ್ಧಿ ಹೊಂದುತ್ತಿ ರುವ ರಾಷ್ಟ್ರಗಳೊಂದಿಗೆ ನಮ್ಮ ದೇಶ ಸ್ಪರ್ಧೆಗೆ ಇಳಿದಿದೆ~ ಎಂದು ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಬಿ.ಆರ್.ಅನಂತನ್ ಹೇಳಿದರು.ಇಲ್ಲಿಯ ಬಿ.ಎಲ್.ಡಿ.ಇ. ಸಂಸ್ಥೆ ಸಹಯೋಗದಲ್ಲಿ ವಚನ ಪಿತಾಮಹ ಡಾ.ಫ.ಗು.ಹಳಕಟ್ಟಿ ಎಂಜಿನಿ ಯರಿಂಗ್ ಕಾಲೇಜಿನಲ್ಲಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ವ್ಯಾಪ್ತಿಯ ಕಾಲೇಜುಗಳ ಗ್ರಂಥ ಪಾಲಕರಿಗೆ ಹಮ್ಮಿಕೊಂಡಿರುವ ಕಾರ್ಯಾಗಾರವನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದರು.`ಬೆಳಗಾವಿಯ ಚನ್ನಮ್ಮ ವಿಶ್ವವಿದ್ಯಾಲಯದ ವ್ಯಾಪ್ತಿ ಪುಟ್ಟದಾಗಿದ್ದರೂ ಬೆಳಗಾವಿಯ ಕೆ.ಎಲ್.ಇ., ವಿಜಾಪುರದ ಬಿ.ಎಲ್.ಡಿ.ಇ. ಮತ್ತು ಬಾಗಲಕೋಟೆಯ ಬಸವೇಶ್ವರ ವಿದ್ಯಾವರ್ಧಕ ಸಂಘ ಗಳ ಕಾಲೇಜುಗಳು ನಮ್ಮ ವಿವಿ ವ್ಯಾಪ್ತಿಗೆ ಬಂದಿರುವು ದರಿಂದ ನಮ್ಮ ಗಾತ್ರ ಹಿರಿದಾಗಿದೆ~ ಎಂದರು.`ನ್ಯಾಕ್ ಮತ್ತು ಯು.ಜಿ.ಸಿ. ನಿಯಮಾವಳಿಗಳ ಅನುಸಾರ ಕಾಲೇಜುಗಳ ಗ್ರಂಥಾಲಯಗಳನ್ನು ಸುಸಜ್ಜಿತಗೊಳಿಸಬೇಕಾಗಿದೆ~ ಎಂದೂ ಹೇಳಿದರು.ಅಧ್ಯಕ್ಷತೆ ವಹಿಸಿದ್ದ ಬಿ.ಎಲ್.ಡಿ.ಇ. ಡೀಮ್ಡ ವಿಶ್ವವಿದ್ಯಾಲಯದ ಕುಲಪತಿ ಡಾ.ಬಿ.ಜಿ. ಮೂಲಿಮನಿ, `ಗ್ರಂಥಪಾಲಕರು ಉನ್ನತ ಶಿಕ್ಷಣದ ಸಂವಾಹಕರು. ಗ್ರಂಥ ಭಂಡಾರವನ್ನು ವಿದ್ಯಾರ್ಥಿಗಳಿಗೆ ತಲುಪಿಸುವ ಕಾರ್ಯದಲ್ಲಿ ಅವರು ಸಹ ನಿರತರಾಗಿರುತ್ತಾರೆ~ ಎಂದರು.ಎಂಜಿನಿಯರಿಂಗ್ ಕಾಲೇಜಿನ ಪ್ರಾಚಾರ್ಯ ಡಾ.ವಿ.ಪಿ.ಹುಗ್ಗಿ ಇತರರು ವೇದಿಕೆಯಲ್ಲಿದ್ದರು.

ಡಾ.ಪಿ.ವಿ.ಕೊಣ್ಣೂರ ಸ್ವಾಗತಿಸಿದರು. ಡಾ.ಕಿರಣ್ ಸವಣೂರ ಕಾರ್ಯಕ್ರಮ ನಿರೂಪಿಸಿದರು. ಆಡಳಿತ ಅಧಿಕಾರಿ ಎಸ್.ಎಚ್.ಲಗಳಿ ವಂದಿಸಿದರು. ಎಸ್.ಎ.ಪಾಟೀಲ, ರಾಮನಗೌಡ ಚಟ್ಟರಕಿ, ಎಸ್.ಜೆ. ಗೌಡರ, ಪ್ರಾಚಾರ್ಯ ಕಲ್ಯಾಣಿ, ವಿವಿಧ ಕಾಲೇಜುಗಳ ಗ್ರಂಥಪಾಲಕರು ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.