ಜ್ಞಾನ ದೇಗುಲ ಮೇಳ

6

ಜ್ಞಾನ ದೇಗುಲ ಮೇಳ

Published:
Updated:
ಜ್ಞಾನ ದೇಗುಲ ಮೇಳ

ವಿವಿಧ ಭಾಗಗಳ 49 ವಿದ್ಯಾ ಸಂಸ್ಥೆಗಳು, ಬ್ಯಾಂಕುಗಳು ಮತ್ತಿತರ ಸಂಘಟನೆಗಳ ಸಹಯೋಗದಲ್ಲಿ `ಡೆಕ್ಕನ್ ಹೆರಾಲ್ಡ್~ ಮತ್ತು `ಪ್ರಜಾವಾಣಿ~ ಪತ್ರಿಕಾ ಸಮೂಹವು ಶನಿವಾರ ಮತ್ತು ಭಾನುವಾರ (ಮೇ26, 27) `ಜ್ಞಾನ ದೇಗುಲ~-2012 ಶೈಕ್ಷಣಿಕ ಮೇಳವನ್ನು ಆಯೋಜಿಸಿದೆ.ಎಲ್ಲಾ ಕ್ಷೇತ್ರಗಳ ವಿದ್ಯಾರ್ಥಿಗಳಿಗೆ, ಶಿಕ್ಷಕರಿಗೆ, ಪಾಲಕರಿಗೆ, ಸಂಶೋಧಕರಿಗೆ, ವಿದ್ವಾಂಸರಿಗೆ ವಿಭಿನ್ನ ಅನುಭವ ಕಟ್ಟಿಕೊಡುವ ಜೊತೆಗೆ ಹಲವು ಅವಕಾಶಗಳನ್ನು ಈ  ಮೇಳ ಕಲ್ಪಿಸಿದೆ.ಪ್ರತಿಷ್ಠಿತ ವಿದ್ಯಾಸಂಸ್ಥೆಗಳಲ್ಲಿನ ವೃತ್ತಿಪರ ತರಬೇತಿಗಳ ಬಗ್ಗೆ ತಿಳಿದುಕೊಳ್ಳಲು ಒಂದು ವೇದಿಕೆ. ಶಿಕ್ಷಣ ಕ್ಷೇತ್ರದ ಎಲ್ಲರನ್ನೂ ಆಕರ್ಷಿಸುವ ಮೇಳ ಇದಾಗಿದ್ದು, ಈ ಕ್ಷೇತ್ರದ ಪರಿಣತರೊಂದಿಗೆ ಚರ್ಚಿಸುವ ಮತ್ತು ವೃತ್ತಿ ಭವಿಷ್ಯದ ಬಗ್ಗೆ ಸಂವಾದ ನಡೆಸುವ ಅವಕಾಶ ಇಲ್ಲಿದೆ.ಶನಿವಾರ (ಮೇ 26) ಹೆಸರಾಂತ ವಿಜ್ಞಾನಿ ಪ್ರೊ. ಸಿ.ಎನ್.ಆರ್. ರಾವ್ `ವಿಜ್ಞಾನದ ಸಂಭ್ರಮ~ ಕುರಿತು ಪ್ರಧಾನ ಭಾಷಣ ಮಾಡಲಿದ್ದಾರೆ. ನಂತರ 11.30ಕ್ಕೆ ಎಂಜಿನಿಯರಿಂಗ್ ಸಮಾವೇಶ. `ಇಂಟೆಲೆಕ್ಚುವಲ್ ವೆಂಚರ್ಸ್ ಇಂಡಿಯಾ~ ಅಧ್ಯಕ್ಷ ಡಾ.ಅಶೋಕ್ ಮಿಶ್ರಾ (ವಿಷಯ: ಉನ್ನತ ತಾಂತ್ರಿಕ ಶಿಕ್ಷಣದಲ್ಲಿ ಸಂಶೋಧನೆ, ಅನ್ವೇಷಣೆಯನ್ನು ಉತ್ತೇಜಿಸುವುದು), `ಮೈಸೂರಿನ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಎಂಜಿನಿಯರಿಂಗ್~ನ ಪ್ರಾಚಾರ್ಯ ಪ್ರೊ.ಜಿ.ಎಲ್. ಶೇಖರ್ (ಎಂಜಿನಿಯರ್‌ಗಳಿಗೆ ವೃತ್ತಿ ಸವಾಲೊಡ್ಡುವ ಭವಿಷ್ಯದ ತಂತ್ರಜ್ಞಾನ), ಎಂ.ಎಸ್. ರಾಮಯ್ಯ ವೈದ್ಯಕೀಯ ಕಾಲೇಜಿನ ಡಾ. ನಂದಕಿಶೋರ್ ಆಳ್ವಾ (ಕಾಮೆಡ್ ಕೆ ಕುರಿತ ಪೂರ್ವ ಸಲಹೆ) ಉಪನ್ಯಾಸ ನೀಡಲಿದ್ದಾರೆ.ಭಾನುವಾರ (ಮೇ.27) ಬೆಳಿಗ್ಗೆ 10.30ರಿಂದ ನಡೆಯಲಿರುವ ಸಮಾವೇಶದಲ್ಲಿ ಶೇಷಾದ್ರಿಪುರಂ ಶಿಕ್ಷಣ ಸಮೂಹದ ಗೌರವ ಪ್ರಧಾನ ಕಾರ್ಯದರ್ಶಿ ಡಾ. ವೂಡೆ. ಪಿ.ಕೃಷ್ಣ (ಮ್ಯಾನೇಜ್‌ಮೆಂಟ್ ಶಿಕ್ಷಣದಲ್ಲಿ ಅವಕಾಶಗಳು), ವೈದ್ಯಕೀಯ ಲೇಖಕ ಡಾ. ಬಿ.ಎಂ. ಹೆಗ್ಡೆ (ವೃತ್ತಿ ಮಾರ್ಗದರ್ಶನ), ಪಿಯು ನಿರ್ದೇಶಕಿ ರಶ್ಮಿ (ಸಿಇಟಿ ನೀತಿ ನಿಯಮಗಳು), ಮೈಸೂರು ವಿವಿ ಮಾಹಿತಿ ವಿಜ್ಞಾನದ ಅಂತರರಾಷ್ಟ್ರೀಯ ಶಾಲೆ ನಿರ್ದೇಶಕಿ ಪ್ರೊ. ಶಾಲಿನಿ ಅರಸ್ (ವ್ಯಾವಹಾರಿಕ ಕ್ಷೇತ್ರದಲ್ಲಿ ಹೊಸ ಅವಕಾಶ), ಬೆಂಗಳೂರು ಅನಿಮೇಷನ್ ಉದ್ಯಮ ಸಂಘಗಳ ಉಪಾಧ್ಯಕ್ಷ ಎಂ.ಆರ್. ಬಾಲಕೃಷ್ಣ (ಅನಿಮೇಶನ್, ಗೇಮಿಂಗ್ ಕ್ಷೇತ್ರದಲ್ಲಿ ಅವಕಾಶಗಳು) ಮಾತನಾಡಲಿದ್ದಾರೆ.ಸ್ಥಳ: ತ್ರಿಪುರ ವಾಸಿನಿ, ಅರಮನೆ ಮೈದಾನ. 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry