ಭಾನುವಾರ, ಮೇ 16, 2021
22 °C

ಜ್ಞಾನ ವಿಜ್ಞಾನ

- ಎನ್. ವಾಸುದೇವ್ Updated:

ಅಕ್ಷರ ಗಾತ್ರ : | |

1) ನಮ್ಮ ಸೌರವ್ಯೆಹದ ಬುಧಗ್ರಹವನ್ನು ಸನಿಹದಿಂದ ಸಂದರ್ಶಿಸಿದ ವ್ಯೋಮನೌಕೆ `ಮ್ಯಾರಿಸರ್' (ಚಿತ್ರ - 1) ರಲ್ಲಿದೆ. ಇದೇ ಬುಧಗ್ರಹದ ಅಧ್ಯಯನಕ್ಕೆಂದೇ ಕಳುಹಲಾಗಿರುವ ಅತ್ಯಂತ ಇತ್ತೀಚಿನ ವ್ಯೋಮನೌಕೆ ಯಾವುದು?

ಅ) ನ್ಯೂ ಹೊರೈಜನ್ಸ್ ಬ) ಮೆಸೆಂಜರ್

ಕ) ಪಾತ್ ಫೈಂಡರ್ ಡ) ಕ್ಯಾಸಿನೀ2) ವಿಶ್ವವಿಖ್ಯಾತ ವಿಜ್ಞಾನಿ `ಸರ್ ಐಸಾಕ್ ನ್ಯೂಟಿನ್'ರ ಭಾವಚಿತ್ರ ಇಲ್ಲಿದೆ (ಚಿತ್ರ - 2) - ನ್ಯೂಟಿನ್ ಯಾವ ರಾಷ್ಟ್ರದ ವಿಜ್ಞಾನಿ ಗೊತ್ತೇ?

ಅ) ಯು.ಎಸ್.ಎ. ಬ) ಜರ್ಮನಿ

ಕ) ಫ್ರಾನ್ಸ್ ಡ) ಬ್ರಿಟನ್3) (ಚಿತ್ರ - 3) ಇದು ಸುಪ್ರಸಿದ್ಧ ವಿಜ್ಞಾನಿ `ಆಲ್ಬರ್ಟ್ ಐನ್‌ಸ್ಟೀನ್'ರ ಭಾವಚಿತ್ರ ಹೌದಲ್ಲ? ಈ ವಿಜ್ಞಾನಿ ರೂಪಿಸಿದ ವೈಜ್ಞಾನಿಕ ಸಿದ್ಧಾಂತ ಯಾವುದು?

ಅ) ಸಾಪೇಕ್ಷತಾ ಸಿದ್ಧಾಂತ  ಬ) ಗುರುತ್ವಾಕರ್ಷಣ ಸಿದ್ಧಾಂತ

ಕ) ಕ್ವಾಂಟರಿ ಸಿದ್ಧಾಂತ ಡ) ಜೀವ ವಿಕಾಸ ಸಿದ್ಧಾಂತ4) ಪ್ರಸ್ತುತ ಜಗದ ಅಸಾಧಾರಣ ಪ್ರತಿಭೆಯ ಜಗತ್ಪ್ರಸಿದ್ಧ ವಿಜ್ಞಾನಿ `ಸ್ಟೀಫನ್ ಹಾಕಿಂಗ್'ರ ಚಿತ್ರ ಇಲ್ಲಿದೆ (ಚಿತ್ರ - 4). ಈ ವಿಜ್ಞಾನಿಯ ಸಂಶೋಧನಾ ಕ್ಷೇತ್ರ ಇವುಗಳಲ್ಲಿ ಯಾವುದು?

ಅ) ಭೂ ವಿಜ್ಞಾನ ಬ) ಖಗೋಳ ವಿಜ್ಞಾನ

ಕ) ಜೀವ ವಿಜ್ಞಾನ ಡ) ರಸಾಯನ ವಿಜ್ಞಾನ5) (ಚಿತ್ರ - 5) ರಲ್ಲಿರುವ ಬೇಟೆಗಾರ ಪ್ರಾಣಿಯನ್ನು ಪ್ರಾಣಿಯನ್ನು ಗುರುತಿಸಬಲ್ಲಿರಾ?

ಅ) ಸಾಗರ ಸಿಂಹ ಬ) ತಿಮಿಂಗಲ

ಕ) ಮೊಸಳೆ ಡ) ಶಾರ್ಕ್6) ನಿರ್ದಿಷ್ಟ ಕಾಲದಲ್ಲಿ, ನಿರಭ್ರ ಇರುಳಿನಾಗಸದಲ್ಲಿ ಬರಿಗಣ್ಣಿಗೇ ಅತ್ಯಂತ ಸುಲಭವಾಗಿ ಸ್ಪಷ್ಟವಾಗಿ ಗೋಚರಿಸುವ ಒಂದು ನಕ್ಷತ್ರ ಪುಂಜ `ಮಹಾವ್ಯಾಥ' (ಚಿತ್ರ - 6) ರಲ್ಲಿದೆ. ಈ ಕೆಳಗಿನ ಪಟ್ಟಿಯಲ್ಲಿ ನಕ್ಷತ್ರ ಪುಂಜಗಳು ಯಾವುವು?

ಅ) ಸಪ್ತರ್ಷಿ ಮಂಡಲ ಬ) ಕ್ಷೀರ ಪಥ

ಕ) ಸಿರಿಯಸ್ ಡ) ವೃಶ್ಚಿಕ

ಇ) ಗ್ಯಾನಿಮೀಡ್ ಈ) ರೀಗಲ್7) ಜಗತ್ತಿನ ಅತ್ಯುನ್ನತ ದಾಖಲೆಯ ಜಲಪಾತದ ಒಂದು ದೃಶ್ಯ (ಚಿತ್ರ - 7) ರಲ್ಲಿದೆ.

ಅ) ಈ ಜಲಪಾತದ ಹೆಸರೇನು? ಬ) ಇದು ಯಾವ ರಾಷ್ಟ್ರದಲ್ಲಿದೆ?

ಕ) ಈ ಜಲಪತವನ್ನು ರೂಪಿಸಿರುವ ನದಿ ಯಾವುದು?

ಡ) ಈ ಜಲಪಾತದ `ಎತ್ತರ' ಎಷ್ಟು?8) ಧರೆಯಲ್ಲಿರುವ ಒಟ್ಟು 37 ಪ್ರಭೇದಗಳ ಬೆಕ್ಕುಗಳ ಪೈಕಿ ಎಂಟು ಪ್ರಭೇದಗಳನ್ನು `ಭಾರಿ ಬೆಕ್ಕುಗಳು' ಎಂದು ವಿಂಗಡಿಸಲಾಗಿದೆ - ಅವುಗಳಲ್ಲೊಂದು (ಚಿತ್ರ - 8) ರಲ್ಲಿದೆ. ಅವನ್ನು ಕೆಳಗಿನ ಪಟ್ಟಿಯಲ್ಲಿ ಗುರುತಿಸಿ. ಇದೇ ಪಟ್ಟಿಯಲ್ಲಿ ಯಾವುದು ಭಾರೀ ಬೆಕ್ಕು ಅಲ್ಲ ಎಂಬುದನ್ನೂ ಪತ್ತೆ ಹಚ್ಚಿ.

ಅ) ಜಾಗ್ವಾರ್ ಬ) ಪ್ಯೂಮಾ

ಕ) ಕ್ಲೌಡೆಡ್ ಲೆಪರ್ಡ್ ಡ) ಕ್ಯಾರಕಲ್9) ಈ ವರೆಗಿನ ಇಡೀ ಖಗ ಇತಿಹಾಸದ ಅತ್ಯಂತ ದೈತ್ಯ ಹಕ್ಕಿ (ಚಿತ್ರ - 9) ರಲ್ಲಿದೆ. ಈ ಹಕ್ಕಿಯನ್ನು ಗುರುತಿಸಬಲ್ಲಿರಾ?

ಅ) ಆಸ್ಟ್ರಿಚ್ ಬ) ಆರ್ಖಿಯಾಸ್ಟರಿಕ್ಸ್

ಕ) ಮೋವಾ ಡ) ಕ್ಯಾಸೋವರೀ10) ನಮ್ಮ ಭೂಗ್ರಹದ ಒಂದು ಉಪಗ್ರಹ ಚಿತ್ರ ಇಲ್ಲಿದೆ (ಚಿತ್ರ - 10) ಭೂಮಿಯ ಬಗೆಗಿನ ಈ ಸರಳ ಪ್ರಶ್ನೆಗಳನ್ನು ಉತ್ತರಿಸಬಲ್ಲಿರಾ?

ಅ) ಸರಾಸರಿ ವ್ಯಾಸ ಬ) ಸೂರ್ಯನಿಂದ ಸರಾಸರಿ ದೂರ

ಕ) ಈಗಿನ ವಯಸ್ಸು11) ಜ್ವಾಲಾಮುಖಿ ಸ್ಫೋಟಕ ಒಂದು ರುದ್ರ ರಮ್ಯ ದೃಶ್ಯ (ಚಿತ್ರ - 11) ರಲ್ಲಿದೆ. ಈ ಕೆಳಗೆ ಹೆಸರಿಸಿರುವ ಪ್ರಸಿದ್ಧ ಅಗ್ನಿಪರ್ವತಗಳನ್ನೂ ಅವು ನೆಲೆಗೊಂಡಿರುವ ದೇಶ/ ಪ್ರದೇಶಗಳನ್ನೂ ಸರಿ ಹೊಂದಿಸಿ:

1) ಎರಿಬಸ್             ಅ) ಫಿಲಿಪ್ಪೀನ್ಸ್

2) ಕ್ರಕಟೋವಾ         ಬ) ಸಿಸಿಲಿ

3) ಸೇಂಟ್ ಹೆಲೆನ್ಸ್    ಕ) ಜಪಾನ್

4) ಪಿನಾಟುಬೋ       ಡ) ಇಂಡೋನೇಶಿಯಾ

5) ಫ್ಯೂಜಿಯಾಮಾ      ಇ) ಯು.ಎಫ್.ಎ.

6) ವೆಸೂವಿಯಸ್       ಈ) ಅಂಟಾರ್ಕ್ಟಿಕಾ

7) ಎಟ್ನಾ                 ಉ) ಇಟಲಿ12) (ಚಿತ್ರ - 12) ರಲ್ಲಿರುವ ಹಕ್ಕಿ ಮರಿಗಳನ್ನು ಗಮನಿಸಿ. ಇವು ಯಾವ ಹಕ್ಕಿಯ ಮರಿಗಳು ಗುರುತಿಸಿ:

ಅ) ಪೆಂಗ್ವಿನ್ ಬ) ಗೂಬೆ

ಕ) ಹದ್ದು ಡ) ಗುಬ್ಬಚ್ಚಿ13) ಜೇನ್ನೊಣ (ಚಿತ್ರ - 13) ಕೀಟವರ್ಗಕ್ಕೆ ಸೇರಿದ ಜೀವಿ ಹೌದಲ್ಲ? ಹಾಗೆ ಇಲ್ಲಿ ಪಟ್ಟಿ ಮಾಡಿರುವ ಜೀವಿಗಳು ಯಾವ ಯಾವ ಜೀವಿವರ್ಗಕ್ಕೆ ಸೇರಿವೆ - ಹೊಂದಿರಬಲ್ಲಿರಾ?

1) ಅನಕೊಂಡ        ಅ) ಸಂಧಿಪದಿ

2) ಜೇಡ              ಬ) ಹಕ್ಕಿ

3) ತಿಮಿಂಗಿಲ           ಕ) ಉಭಯವಾಸಿ

4) ಬಸ್ಟರ್ಡ್         ಡ) ಮತ್ಸ್ಯ

5) ದುಂಬಿ            ಇ) ಸರೀಸೃಪ

6) ಸಲಮ್ಯಾಂಡರ್    ಈ) ಕೀಟ

7) ಪೈಕ್               ಉ) ಸ್ತನಿ

8) ನಾಟಿಲಸ್         ಟ) ಮೃದ್ವಂಗಿ

ಉತ್ತರಗಳು

1) ಬ - ಮೆಸೆಂಜರ್ 2) ಡ - ಬ್ರಿಟನ್

3) ಅ - ಸಾಪೇಕ್ಷತಾ ಸಿದ್ಧಾಂತ

4) ಬ - ಖಗೋಳ ವಿಜ್ಞಾನ

5) ಡ - ಶಾರ್ಕ್ 6) ಅ ಮತ್ತು ಡ

7) ಅ - ಏಂಜಲ್ ಜಲಪಾತ; ಬ - ವೆನಿಜೂಯೆಲ (ದಕ್ಷಿಣ ಅಮೆರಿಕ ಖಂಡ); ಕ - ಚೂಕುನ್; ಡ - 979 ಮೀ (3212 ಅಡಿ)

8) ಬ - ಪ್ಯೂಮಾ; ಕ್ಯಾರಿಕಲ್ ಭಾರೀ ಬೆಕ್ಕು ಅಲ್ಲ

9) ಕ - ಮೋವಾ

10) ಅ - 12735 ಕಿ. ಮೀ; ಬ - 150 ದಶಲಕ್ಷ ಕಿ.ಮೀ; ಕ - 4500 ದಶಲಕ್ಷ ವರ್ಷ

11) 1 - ಈ; 2 - ಡ; 3 - ಇ; 4 - ಅ: 5 - ಕ; 6 - ಉ; 7 - ಬ

12) ಬ - ಗೂಬೆ

13) 1 - ಇ; 2 - ಅ; 3 - ಉ; 4 - ಬ; 5 - ಈ, 6 - ಕ.; 7 - ಡ; 8 - ಟ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.