`ಜ್ಞಾನ ವೃದ್ಧಿಯಿಂದ ಮೋಕ್ಷ ಸಾಧ್ಯ'

7

`ಜ್ಞಾನ ವೃದ್ಧಿಯಿಂದ ಮೋಕ್ಷ ಸಾಧ್ಯ'

Published:
Updated:

ಚಿಕ್ಕಮಗಳೂರು: ಸ್ವರೂಪಜ್ಞಾನ ಪಡೆದರೆ ಮೋಕ್ಷಲಾಭವಾಗಿ ಮನುಷ್ಯಜೀವನದ ಸಾರ್ಥಕತೆ ಪಡೆಯುತ್ತದೆ ಎಂದು ರಾಣೆಬೆನ್ನೂರಿನ ಚಂದ್ರಶೇಖರ ಒಡೆಯರ್ ಶಿವಾಚಾರ್ಯ ಸ್ವಾಮೀಜಿ ನುಡಿದರು.ಆದಿಶಕ್ತಿನಗರದ ಗುರುಕರಿಬಸವೇಶ್ವರ ಸ್ವಾಮೀಜಿ, ನಾಗಪ್ಪಜ್ಜಯ್ಯ, ವೀರಭದ್ರೇಶ್ವರ ಸ್ವಾಮಿ ಹಾಗೂ ರಾಜರಾಜೇಶ್ವರಿ ದೇವಾಲಯದ 5ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಬುಧವಾರ ಆಯೋಜಿಸಿದ್ದ ಧರ್ಮಸಮಾರಂಭ ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು.ಜಪ, ತಪ, ಪೂಜೆ, ಭಜನೆ, ಇಷ್ಟಲಿಂಗಪೂಜೆ ಇವೆಲ್ಲವೂ ಸ್ವ ಸ್ವರೂಪಜ್ಞಾನವನ್ನು ಗಳಿಸಿಕೊಡುತ್ತದೆ. ಪಾಪಕರ್ಮ ದೂರವಾಗಿ ಪುಣ್ಯಪ್ರಾಪ್ತಿಯಾಗುತ್ತದೆ. ಸತ್ಕರ್ಮಗಳಿಂದ ದೇವರ ಸಾಮೀಪ್ಯ, ಸಾನ್ನಿಧ್ಯ ಲಭಿಸುತ್ತದೆ ಎಂದರು. ಹುಲೀಕೆರೆ ದೊಡ್ಡಮಠದ ವಿರೂಪಾಕ್ಷಲಿಂಗ ಶಿವಾಚಾರ್ಯ ಸ್ವಾಮೀಜಿ ಆಶೀರ್ವಚನ ನೀಡಿ, ಧರ್ಮ ಮಾರ್ಗದಲ್ಲಿ ಮುನ್ನಡೆದರೆ ಜನ್ಮ ಸಾರ್ಥಕವಾಗುತ್ತದೆ ಎಂದರು.ಶಂಕರದೇವರ ಮಠದ ಚಂದ್ರಶೇಖರ ಸ್ವಾಮೀಜಿ, ಬಸವಮಂದಿರದ ಜಯಬಸವಾನಂದ ಸ್ವಾಮೀಜಿ, ಗುಲ್ಬರ್ಗದ ಡಾ.ಶರಣಬಸವ ಸ್ವಾಮೀಜಿ, ಹಾವೇರಿ ಬಣ್ಣಮಠದ ಅಭಿನವ ಚನ್ನಮಲ್ಲಿಕಾರ್ಜುನ ಶಿವಾಚಾರ್ಯರು, ರಾಮೇನಹಳ್ಳಿ ಶಿವಪಂಚಾಕ್ಷರಿ ಸ್ವಾಮೀಜಿ, ಸೋಂಪುರದ ಸೋಮಶೇಖರ ಸ್ವಾಮೀಜಿ, ಬೇರುಗಂಡಿ ಮಠದ ರೇಣುಕಾ ಮಹಾಂತ ಶಿವಾಚಾರ್ಯರು, ಕೊರಟಗೆರೆ ನಾಗೇಂದ್ರ ಸ್ವಾಮೀಜಿ, ಅಂಕನಹಳ್ಳಿ ಗವಿಮಠದ ಶಿವರುದ್ರ ಶಿವಾಚಾರ್ಯರು, ಉಕ್ಕಡಗಾತ್ರಿ ಸ್ಥಿರಗುರುಹಾಲುಶಂಕರ ಶಿವಾಚಾರ್ಯರು, ಬೀರೂರಿನ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ ಆಶೀರ್ವಚನ ನೀಡಿದರು.ಹಿರಿಯದಾನಿ ಎಂ.ಆರ್. ಸಣ್ಣಸಿದ್ದೇಗೌಡ, ಮಾಜಿ ಶಾಸಕ ಎಸ್.ಎಲ್.ಧರ್ಮೇಗೌಡ, ಸಿಪಿಐ ಜಿಲ್ಲಾ ಕಾರ್ಯದರ್ಶಿ ರೇಣುಕಾರಾಧ್ಯ, ಟಿಪಿಎಸ್ ಮಾಜಿ ಸದಸ್ಯರಾದ ಬೈರೇಗೌಡ, ಹಿರಿಗಯ್ಯ, ಎಪಿಎಂಸಿ ಸದಸ್ಯ ಚಂದ್ರೇಗೌಡ, ಜಿಲ್ಲಾ ರೈತ ಸಂಘದ ಅಧ್ಯಕ್ಷ ಕೃಷ್ಣೇಗೌಡ, ಗುರು ಕರಿಬಸವೇಶ್ವರ ದೇವಸ್ಥಾನದ ಧರ್ಮಾಧಿಕಾರಿ ಎಂ.ಎಂ.ಪಂಚಾಕ್ಷರಯ್ಯ, ಮಹೇಶ್ವರಯ್ಯಶಾಸ್ತ್ರಿ, ಕೆ.ಓ.ನರೇಂದ್ರಕುಮಾರ್ ಇದ್ದರು. ಮೂಗ್ತಿಹಳ್ಳಿ ಕೆರೆಯಿಂದ ಗಂಗೆಯನ್ನು ನೂರಾರು ಮುತ್ತೈದೆಯರು ದೇವಸ್ಥಾನಕ್ಕೆ ತಂದರು. ಬೆಳಿಗ್ಗೆ ಕುಂಭಾಭಿಷೇಕ ನೆರವೇರಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry