ಜ್ಞಾನ ಸಂಪಾದನೆ ಗುಣ ಬೆಳೆಸಿಕೊಳ್ಳಲು ಸಲಹೆ

5

ಜ್ಞಾನ ಸಂಪಾದನೆ ಗುಣ ಬೆಳೆಸಿಕೊಳ್ಳಲು ಸಲಹೆ

Published:
Updated:

ಬೆಂಗಳೂರು: `ಸಂಶೋಧನೆಯು ಶೈಕ್ಷಣಿಕ ಚಟುವಟಿಕೆಗಳ ಅವಿಭಾಜ್ಯ ಅಂಗವಾಗಿದ್ದು, ವಿದ್ಯಾರ್ಥಿಗಳು ವಿವಿಧ ಮೂಲಗಳಿಂದ ಜ್ಞಾನವನ್ನು ಸಂಪಾದಿಸುವ ಗುಣವನ್ನು ಬೆಳಸಿಕೊಳ್ಳಬೇಕು~ ಎಂದು ಐಐಟಿ (ಚೆನೈ) ನಿವೃತ್ತ ನಿರ್ದೇಶಕ  ಪ್ರೊ.ಎಚ್.ಎನ್.ಮಹಾಬಲ ಕರೆ ನೀಡಿದರು.ವಿಶ್ವೇಶ್ವರಯ್ಯ ತಾಂತ್ರಿಕ ಮಹಾವಿದ್ಯಾಲಯವು ನಗರದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ವಿದ್ಯಾರ್ಥಿ ಸಂಶೋಧನಾ ಪ್ರಬಂಧ ಮಂಡನಾ ಸ್ಪರ್ಧೆ `ಕಾಗದ-2011~ ಉದ್ಘಾಟಿಸಿ ಮಾತನಾಡಿದರು. `ವಿದ್ಯೆಯು ಕೇವಲ ಧನಾರ್ಜನೆಗಾಗಿ ಸೀಮಿತಗೊಳ್ಳದೇ ಆದರ್ಶ ಮತ್ತು ಮಾನವೀಯತೆ ಗುಣಗಳನ್ನು ಅಳವಡಿಸಿಕೊಳ್ಳುವ ನಿಟ್ಟಿನಲ್ಲಿ ಸಾಗಬೇಕು~ ಎಂದು ಅಭಿಪ್ರಾಯಪಟ್ಟರು.`ಮುಂದುವರೆದ ರಾಷ್ಟ್ರಗಳ ಮಾದರಿಯಲ್ಲಿ ಶಿಕ್ಷಣ ವ್ಯವಸ್ಥೆಯನ್ನು ಜಾರಿಗೆ ತರಬೇಕು, ಪ್ರಾಧ್ಯಾಪಕರು ಸಾಮಾನ್ಯ ಕಲಿಕೆಯ ಜೊತೆಗೆ ಸ್ಪರ್ಧಾ ಮನೋಭಾವವನ್ನು ರೂಢಿಸಿಕೊಳ್ಳಬೇಕು~ ಎಂದರು. ಪ್ರಾಧ್ಯಾಪಕ ಡಾ.ಕೆ.ಆರ್.ವೇಣುಗೋಪಾಲ್, `ಕೇವಲ ಅಂಕ ಗಳಿಕೆಯಿಂದ ಕಲಿಕೆಯು ಪೂರ್ಣಗೊಳ್ಳುವುದಿಲ್ಲ, ನಿರಂತರ ಸಾಧನೆ ಮತ್ತು ಪರಿಶ್ರಮದಿಂದ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವ ಮೂಲಕ ಯಶಸ್ಸು ಪಡೆಯಲು ಸಾಧ್ಯವಿದೆ~ ಎಂದರು.   ಡಾ.ಪಿ.ದೀಪಾ ಶಣೈ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry