ಜ್ಯೂಸ್ ಪೊಟ್ಟಣದಲ್ಲಿ ಸತ್ತ ಹಾವಿನ ಮರಿ: ತಾಯಿ, ಮಗಳು ಆಸ್ಪತ್ರೆಗೆ

7

ಜ್ಯೂಸ್ ಪೊಟ್ಟಣದಲ್ಲಿ ಸತ್ತ ಹಾವಿನ ಮರಿ: ತಾಯಿ, ಮಗಳು ಆಸ್ಪತ್ರೆಗೆ

Published:
Updated:
ಜ್ಯೂಸ್ ಪೊಟ್ಟಣದಲ್ಲಿ ಸತ್ತ ಹಾವಿನ ಮರಿ: ತಾಯಿ, ಮಗಳು ಆಸ್ಪತ್ರೆಗೆ

ಭಟ್ಕಳ (ಉ.ಕ. ಜಿಲ್ಲೆ): ಇಲ್ಲಿಯ ಬೇಕರಿಯೊಂದರಲ್ಲಿ ಖರೀದಿಸಿದ ಜ್ಯೂಸ್ ಪೊಟ್ಟಣದಲ್ಲಿ ಸತ್ತ ಹಾವಿನ ಮರಿಯೊಂದು ಬುಧವಾರ ಪತ್ತೆಯಾಗಿದೆ. ಜೂಸ್ ಕುಡಿದ ತಾಯಿ-ಮಗಳು ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಇಲ್ಲಿಯ ಗುಡ್‌ಲಕ್ ರಸ್ತೆಯ ನಿವಾಸಿ ಸೈಯದ್ ಮಹಮ್ಮದ್ ಸಫ್ವಾನ್ ಅವರು ಪಟ್ಟಣದ ಮುಖ್ಯ ರಸ್ತೆಯಲ್ಲಿರುವ ಬೇಕರಿಯೊಂದರಿಂದ  ಜ್ಯೂಸ್ ಪೊಟ್ಟಣ ಖರೀದಿಸಿದರು. ಅವರ ಮಗಳು ಸಹೀಫಾ (22) ಸ್ವಲ್ಪ ಕುಡಿದು, ಉಳಿದದ್ದನ್ನು ತಾಯಿ ಉಮ್ಮೆ ಸಲ್ಮಾ (45) ಅವರಿಗೆ ನೀಡಿದರು. ಸ್ಟ್ರಾ ಮೂಲಕ ಕುಡಿಯುವಾಗ  ಜ್ಯೂಸ್ ಬರಲಿಲ್ಲ. ಆಗ ಸ್ಟ್ರಾವನ್ನು ಮೇಲಕ್ಕೆಳೆದು ನೋಡಿದಾಗ, ಅದರಲ್ಲಿ ಸತ್ತಹಾವಿನ ಮರಿ ಸಿಕ್ಕಿಕೊಂಡಿತ್ತು. ಇದನ್ನು ಕಂಡು ಹೆದರಿದ ತಾಯಿ, ಮಗಳು ತಕ್ಷಣ ವಾಂತಿ ಮಾಡಿಕೊಂಡು ಅಸ್ವಸ್ಥರಾದರು.

ಇವರಿಬ್ಬರನ್ನೂ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಸೈಯದ್ ತಿಳಿಸಿದ್ದಾರೆ.

ಜ್ಯೂಸ್ ಪೊಟ್ಟಣದಲ್ಲಿ ಸುಮಾರು ಮೂರು ಅಂಗುಲ ಉದ್ದದ ಹಾವಿನ ಮರಿ ಸಿಕ್ಕಿದ್ದನ್ನು ಬೇಕರಿಯ ಮಾಲೀಕರಿಗೆ ತಿಳಿಸಿದಾಗ, ಅದನ್ನು ಮರಳಿ ಕಂಪೆನಿಗೆ ಕಳುಹಿಸುವುದಾಗಿ ತಿಳಿಸಿದ್ದಾರೆ. ಬೇಕರಿಯ ಮಾಲೀಕರು ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry