ಸೋಮವಾರ, ನವೆಂಬರ್ 18, 2019
20 °C

ಜ್ಯೋತಿಪ್ರಕಾಶ್ ಮಿರ್ಜಿ ವರ್ಗ?

Published:
Updated:

ಬೆಂಗಳೂರು: ನಗರದ ಪೊಲೀಸ್ ಕಮಿಷನರ್ ಜ್ಯೋತಿಪ್ರಕಾಶ್ ಮಿರ್ಜಿ ಸೇರಿದಂತೆ ಐವರು ಐ.ಪಿ.ಎಸ್ ಅಧಿಕಾರಿಗಳ ವರ್ಗಾವಣೆಗೆ ಚುನಾವಣಾ ಆಯೋಗ ಸೂಚನೆ ನೀಡಿದೆ. ಮಿರ್ಜಿ ಜಾಗಕ್ಕೆ ಎಡಿಜಿಪಿ ರಾಘವೇಂದ್ರ ಔರಾದಕರ ಅವರನ್ನು ನೇಮಿಸುವ ಸಾಧ್ಯತೆ ಇದೆ.

ಈ ಸಂಬಂಧದ ಕಡತ ಚುನಾವಣಾ ಆಯೋಗದಿಂದ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಬಂದಿದೆ. ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರು ಕಡತಕ್ಕೆ ಸಹಿ ಮಾಡಬೇಕಾಗಿದೆ.  ಸಹಿ ಮಾಡುವ ಮುನ್ನ ಅವರು ವರ್ಗಾವಣೆಗೆ ಕಾರಣ ಕೇಳುವ ಸಾಧ್ಯತೆ ಇದೆ. ಗುರುವಾರ ವರ್ಗಾವಣೆ ಆದೇಶ ಹೊರಬೀಳಲಿದೆ ಎಂದು ಮೂಲಗಳು ತಿಳಿಸಿವೆ. ವರ್ಗಾವಣೆಯ ಪಟ್ಟಿಯಲ್ಲಿ ಐಪಿಎಸ್ ಅಧಿಕಾರಿ ಕೃಷ್ಣಭಟ್ ಮತ್ತಿತರರ ಹೆಸರೂ ಇದೆ ಎನ್ನಲಾಗಿದೆ.

ಪ್ರತಿಕ್ರಿಯಿಸಿ (+)