ಜ್ಯೋತಿಷಿಗಳ ಬಗ್ಗೆ ಎಚ್ಚರವಿರಲಿ

7

ಜ್ಯೋತಿಷಿಗಳ ಬಗ್ಗೆ ಎಚ್ಚರವಿರಲಿ

Published:
Updated:

ಒಬ್ಬ ಉಪನ್ಯಾಸಕಿಯನ್ನು ವಂಚಿಸಿ 16.5 ಲಕ್ಷ ನಗದು ಹಾಗೂ ಚಿನ್ನಾಭರಣಗಳನ್ನು ಜ್ಯೋತಿಷಿಯ ಸೋಗಿನಲ್ಲಿ ವಿದ್ಯಾರ್ಥಿಯೊಬ್ಬ ಲಪಟಾ­ಯಿಸಿದ ವಿಚಾರ ಪತ್ರಿಕೆಯಲ್ಲಿ ಓದಿ (ಸೆ. 13) ನಿಜಕ್ಕೂ ಆಶ್ಚರ್ಯ­ವಾಯಿತು.ಇತ್ತೀಚೆಗಂತೂ ಕಪಟ ಕಾವಿಧಾರಿ­ಗಳು, ಜ್ಯೋತಿಷಿಗಳು ಎಲ್ಲೆಂದರಲ್ಲಿ ಕಾಣ ಸಿಗುತ್ತಾರೆ. ‘ಕೈಚಳಕ’ವನ್ನೂ ತೋರುತ್ತಿ­ದ್ದಾರೆ. ಹಣ ಸಂಪಾ ದಿಸಲು ಇದೊಂದು ಸುಲಭ ಮಾರ್ಗ­ವಾಗಿದೆ.ಇಂಥವರ ಮಾತಿಗೆ ಮರುಳಾಗಿ ಮನೆ ಮಠ ಕಳೆದುಕೊಂಡವರು ಅದೆಷ್ಟೋ ಮಂದಿ! ಇವರ ಬಗ್ಗೆ ಜನ ಜಾಗೃತರಾಗಬೇಕಾಗಿದೆ. ಸರ್ಕಾರ ಕೂಡಾ ಇಂಥವರ ಬಗ್ಗೆ ಕಟ್ಟೆಚ್ಚರ ವಹಿಸಬೇಕಾಗಿದೆ. ದೃಶ್ಯ ಮಾಧ್ಯಮಗಳಲ್ಲಿ  ಜ್ಯೋತಿಷಿಗಳಿಗೆ ಅತಿಯಾದ ಮಹತ್ವ ನೀಡ­ಲಾ­ಗುತ್ತಿದೆ. ಅದಕ್ಕೆ ಕಡಿವಾಣ ಹಾಕುವುದು ಸಮಾಜದ ಒಳಿತಿನ ದೃಷ್ಟಿಯಿಂದ ಒಳ್ಳೆಯದು.   ಎಲ್ಲಕ್ಕೂ ಮಿಗಿಲಾಗಿ ನಾಳಿನ ಸತ್ಪ್ರಜೆಗಳನ್ನು ನಿರ್ಮಿಸಬೇಕಾದ ಬೋಧಕರೊಬ್ಬರು ವಂಚಕರ ಜಾಲಕ್ಕೆ ಸಿಲುಕಿದ್ದು ವಿಷಾದನೀಯ.  ಇಂಥವರೇ ಹೀಗಾದರೆ ಅನಕ್ಷರಸ್ಥರ ಪಾಡೇನು?

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry