ಗುರುವಾರ , ಮೇ 19, 2022
21 °C

ಜ್ಯೋತಿಷ ವಾಸ್ತು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |ಮಹೇಶ್ ಎಸ್. ಕೆಂಗೇರಿ: ಜನನ 23-4-1978, ಸಮಯ 10-00 ಬೆಳಿಗ್ಗೆ.

ಪ್ರಶ್ನೆ: ಬಿ.ಎ. ಪದವೀಧರ, ಸರಕಾರಿ ಕೆಲಸ, ಮದುವೆ ಬಗ್ಗೆ ಮತ್ತು ಪುಸ್ತಕ ವ್ಯಾಪಾರ ಸೂಕ್ತವೇ? ತಿಳಿಸಿ.


ಉತ್ತರ: ಇವರದು ಮಿಥುನ ಲಗ್ನ, ಸ್ವಾತಿ ನಕ್ಷತ್ರ ತುಲಾರಾಶಿ. ಇವರ ಲಗ್ನದಲ್ಲಿ ಸಪ್ತಮಾಧಿಪತಿ ಗುರು ರಾಹು ನಕ್ಷತ್ರ ಸ್ಥಿತರಿದ್ದಾರೆ. ಲಗ್ನಕ್ಕೆ ಬೇರಾವ ಶುಭ ಸಂಬಂಧವೂ ಇಲ್ಲ. ಲಗ್ನಾಧಿಪತಿ ಬುಧರು ಅವಯೋಗಿಯಾಗಿ, ನೀಚರಾಗಿ, ವಕ್ರೀ ಆಗಿ ಸ್ವನಕ್ಷತ್ರದಲ್ಲಿ ಲಾಭ ಸ್ಥಿತರಿದ್ದಾರೆ. ಬೇರಾವ ಶುಭ ಸಂಬಂಧವೂ ಇಲ್ಲ. ಇದರಿಂದ ಲಗ್ನ ಮತ್ತು ಲಗ್ನಾಧಿಪರು ಪೀಡಿತರಾಗಿದ್ದಾರೆ.ಇವರ ಉದ್ಯೋಗ ಸೂಚಕ ದಶಮವು ಮೀನ ರಾಶಿಯಾಗಿದ್ದು ಇಲ್ಲಿ ಕೇತು ಶನಿ ನಕ್ಷತ್ರ ಸ್ಥಿತರಿದ್ದಾರೆ. ಯಾವ ಶುಭ ಸಂಬಂಧವೂ ಇಲ್ಲ. ದಶಮಾಧಿಪತಿ ಗುರು ಲಗ್ನಕೇಂದ್ರದಲ್ಲಿದ್ದರೂ  ಪಾಪಿ ರಾಹು ನಕ್ಷತ್ರದಲ್ಲಿ ಸ್ವನವಾಂಶ ಸ್ಥಿತರಿದ್ದಾರೆ.ಇವರ ಭಾಗ್ಯ ಸ್ಥಾನ ಕುಂಭವಾಗಿದ್ದು, ಇಲ್ಲಿ ಯಾವ ಗ್ರಹರೂ ಇಲ್ಲ. ಈ ಸ್ಥಾನವನ್ನು ನೀಚ ಕುಜ ಮತ್ತು ವಕ್ರೀ ಅಷ್ಟಮ, ಭಾಗ್ಯಾಧಿಪತಿ ಶನಿ ಮತ್ತು ಗುರು ಕೂಡ ವೀಕ್ಷಿಸುತ್ತಾರೆ. ಇದರಿಂದ ಇವರ ಧನ, ಪೂರ್ವಪುಣ್ಯ, ಭಾಗ್ಯಸ್ಥಾನ ಪೀಡಿತವಾಗಿದ್ದು, ಇವರ ಸಂಕಷ್ಟಗಳಿಗೆ ಕಾರಣವಾಗಿದೆ.

ಇವರ ಉದ್ಯೋಗ ಸೂಚಕ ಅಂಶ ಕುಂಡಲಿಯ ಲಗ್ನವು ಸಿಂಹವಾಗಿದ್ದು, ಇಲ್ಲಿ ಶನಿ ಮತ್ತು ಗುರು ಸ್ಥಿತರಿದ್ದಾರೆ. ಲಗ್ನಾಧಿಪತಿ ರವಿ ಸರಕಾರಿ ಉದ್ಯೋಗಕಾರಕರೂ ಆಗಿದ್ದು ವ್ಯಯಸ್ಥಿತರಿದ್ದಾರೆ. ದಶಮಾಧಿಪತಿ ಶುಕ್ರರು ವ್ಯಯಾಧಿಪತಿ ಚಂದ್ರರೊಡನೆ ಷಷ್ಟ ಸ್ಥಿತರಿದ್ದಾರೆ. ಹೆಚ್ಚಿನ ಗ್ರಹರು ಶುಭ-ಅಶುಭ ಸ್ಥಿತರಿದ್ದಾರೆ. ಇದರಿಂದ ಇವರಿಗೆ ಸರಕಾರಿ ಉದ್ಯೋಗ ಕಷ್ಟಸಾಧ್ಯ. ಇವರು ಹೆಚ್ಚಿನ ಪ್ರಯತ್ನದಿಂದ ಖಾಸಗಿ ಉದ್ಯೋಗ ದೊರಕಿಸಿಕೊಂಡು  ಜೊತೆ ಬೇಕಾದರೆ ಪುಸ್ತಕ ವ್ಯಾಪಾರ ಮಾಡಬಹುದು.  ಪರಿಹಾರ: ಪಚ್ಛೆಹರಳು ಮತ್ತು ನೀಲಮಣಿ ಧರಿಸಿ. ಕಾಳಿಕಾ ಸ್ತೋತ್ರ ಪಠಿಸಿ. ರೇಣುಕಾ ದೇವಿಯನ್ನು ಪೂಜಿಸಿ. 

ಮಂಜುನಾಥ ಡಿ,ಜೆ ಬೆಂಗಳೂರು: ಜನನ 26-8-1988, ಸಮಯ 10.06 ಬೆಳಿಗ್ಗೆ.ಪ್ರಶ್ನೆ: ಎಂಜನಿಯರಿಂಗ್ ಓದಿದ್ದೇನೆ. ಉದ್ಯೋಗ ಸಿಗುತ್ತಿಲ್ಲ. ಪರಿಹಾರ ತಿಳಿಸಿ.

ಉತ್ತರ: ಇವರದು ತುಲಾ ಲಗ್ನ, ಶ್ರವಣ ನಕ್ಷತ್ರ ಮಕರ ರಾಶಿ. ಇವರ ಲಗ್ನದಲ್ಲಿ ಗುಳಿಕರು ಸ್ಥಿತರಿದ್ದಾರೆ. ಲಗ್ನವನ್ನು ಕುಜ ಮತ್ತು ರಾಹು ವೀಕ್ಷಿಸುತ್ತಾರೆ. ಲಗ್ನಾಧಿಪತಿ ಶುಕ್ರರು ದಗ್ಧರಾಶಿಯಲ್ಲಿ ದಶಮಸ್ಥಿತರಿದ್ದಾರೆ. ಯಾವ ಶುಭ ಸಂಬಂಧವೂ ಇಲ್ಲ. ಇದರಿಂದ ಲಗ್ನ ಮತ್ತು ಲಗ್ನಾಧಿಪರು ಪೀಡಿತರಾಗಿದ್ದಾರೆ.ಇವರ ಉದ್ಯೋಗ ಸೂಚಕ ದಶಮವು ಕರ್ಕಾಟಕ ರಾಶಿಯಾಗಿದ್ದು ಇಲ್ಲಿ ಲಗ್ನಾಧಿಪತಿ ಶುಕ್ರರು ಸ್ಥಿತರಿದ್ದಾರೆ. ದಶಮಾಧಿಪತಿ ಚಂದ್ರರು ಸ್ವನಕ್ಷತ್ರದಲ್ಲಿ, ವೈರಿ ಕ್ಷೇತ್ರದಲ್ಲಿ ಪಂಚಮ ಸ್ಥಿತರಿದ್ದಾರೆ. ಯಾವ ಶುಭ ಸಂಬಂಧವೂ ಇಲ್ಲ. ಇವರ ಧನಾಧಿಪತಿ ಕುಜರು ದಗ್ಧರಾಶಿಯಲ್ಲಿ ಷಷ್ಟಸ್ಥಿತರಿದ್ದಾರೆ. ಪೂರ್ವ ಪುಣ್ಯಸ್ಥಾನಾಧಿಪತಿ ಶನಿ ಅವಯೋಗಿಯಾಗಿ ವಕ್ರೀ ಆಗಿ ದಗ್ಧರಾಶಿಯಲ್ಲಿ ತೃತೀಯ ಸ್ಥಿತರಿದ್ದಾರೆ. ಭಾಗ್ಯಾಧಿಪತಿ ಬುಧರು ಪುಷ್ಕರ ನವಾಂಶದಲ್ಲಿದ್ದರೂ  ವ್ಯಯ ಸ್ಥಿತರಿದ್ದಾರೆ.  ಇವು ಉದ್ಯೋಗಕ್ಕೆ ಅಡೆತಡೆ ಸೂಚಕವಾಗಿದೆ.ಇವರಿಗೆ ಈಗ ರಾಹು ದಶಾ ಶುಕ್ರ ಭುಕ್ತಿ ನಡೆಯುತ್ತಿದೆ. ಗೋಚಾರದಲ್ಲಿ ಭಾಗ್ಯಶನಿ ಮತ್ತು ತೃತೀಯಗುರು  ಇದ್ದಾರೆ. ಇವು ಶುಭ-ಅಶುಭಕರ ವಾಗಿದೆ.  ಜುಲೈ 2011 ನಂತರ ಯೋಗಿ ರವಿ ಭುಕ್ತಿ ಬರುವಾಗ ಇವರಿಗೆ  ಉತ್ತಮ ಉದ್ಯೋಗ ಸಿಗುವ ಸಾಧ್ಯತೆ ಇದೆ.ಪರಿಹಾರ: ಪಚ್ಛೆಹರಳು ಧರಿಸಿ. ಜನ್ಮದೋಷ ಶಾಂತಿ ಮಾಡಿಸಿ. ವೀರಭದ್ರ ಸ್ತೋತ್ರ ಪಠಿಸಿ. ಈಶ್ವರನನ್ನು ಪೂಜಿಸಿ.

ಶ್ರೀದೇವಿ ಎಸ್. ಊರು ಬೇಡ: ಜನನ 31-8-1977, ಸಮಯ 01-05 ಮಧ್ಯಾಹ್ನಪ್ರಶ್ನೆ: ಮದುವೆಯಾಗಿ 5 ವರ್ಷವಾದರೂ ಸಂತಾನವಿಲ್ಲ. ಪರಿಹಾರ ತಿಳಿಸಿ.

ಉತ್ತರ: ಇವರದು ವೃಶ್ಚಿಕ ಲಗ್ನ, ಉತ್ತರಾಭಾದ್ರ ನಕ್ಷತ್ರ ಮೀನರಾಶಿ. ಇವರ ಲಗ್ನದಲ್ಲಿ ಗುಳಿಕರು ಸ್ಥಿತರಿದ್ದು ಕೇತು ವೀಕ್ಷಣೆಗೆ ಒಳಗಾಗಿದೆ.ಲಗ್ನಾಧಿಪತಿ ಕುಜರು ಸ್ವ ನಕ್ಷತ್ರದಲ್ಲಿ, ವೈರಿ ಕ್ಷೇತ್ರದಲ್ಲಿ ಸಪ್ತಮಸ್ಥಿತರಿದ್ದಾರೆ. ಯಾವ ಶುಭ ಸಂಬಂಧವೂ ಇಲ್ಲ. ಇದರಿಂದ ಲಗ್ನ ಮತ್ತು ಲಗ್ನಾಧಿಪರು ಪೀಡಿತರಾಗಿದ್ದಾರೆ.ಇವರ ಸಂತತಿ ಸೂಚಕ ಪಂಚಮವು ಮೀನವಾಗಿದ್ದು, ಫಲಭರಿತ ರಾಶಿಯಾಗಿದೆ. ಇವರನ್ನು ರಾಹು ವೀಕ್ಷಿಸುತ್ತಾರೆ. ಬೇರಾವ ಶುಭ ಸಂಬಂಧವೂ ಇಲ್ಲ. ಪಂಚಮಾಧಿಪತಿ ಮತ್ತು ಪುತ್ರಕಾರಗುರು ಯೋಗಿಯಾದರೂ ಅಷ್ಟಮದಲ್ಲಿ ವೈರಿ ಕ್ಷೇತ್ರದಲ್ಲಿ ರಾಹು ನಕ್ಷತ್ರ ಸ್ಥಿತರಿದ್ದಾರೆ. ಇವರಿಗೆ ಯಾವ ಶುಭ ಸಂಬಂಧವೂ ಇಲ್ಲ.ಇವರ ಸಂತಾನ ಸೂಚಕ ಅಂಶ ಕುಂಡಲಿಯ ಲಗ್ನವು ತುಲಾ ಆಗಿದ್ದು ವ್ಯಯಾಂಶದಲ್ಲಿದೆ. ಲಗ್ನಾಧಿಪತಿ ಶುಕ್ರರು ಉಚ್ಛರಾದರೂ ಷಷ್ಟಸ್ಥಿತರಿದ್ದಾರೆ.  ಪುತ್ರಕಾರ ಗುರು ಉಚ್ಛರಾದರೂ ನೀಚ ಕುಜ ಮತ್ತು ಶನಿ ಒಡನೆ ಸ್ಥಿತರಿದ್ದಾರೆ. ಹೆಚ್ಚಿನ ಗ್ರಹರು ಶುಭ ಸ್ಥಿತರಿದ್ದಾರೆ. ಇವು ಸಂತಾನಕ್ಕೆ ಅಡೆತಡೆ ಸೂಚಕವಾಗಿದೆ.ಇವರ ಪತಿಯವರ  ಜಾತಕದಲ್ಲಿ ಹೆಚ್ಚಿನ ಗ್ರಹರು ದುಃಸ್ಥಾನಸ್ಥಿತರಿರುವುದಲ್ಲದೇ ನೀಚರೂ ವಕ್ರೀಯೂ ಆಗಿದ್ದಾರೆ. ಪುತ್ರಕಾರಕ ಗುರು ವಕ್ರೀ ಆಗಿ ಪಂಚಮ ಸ್ಥಿತರಿರುವುದು ಅಶುಭಕರವಾಗಿದೆ. ಸಂತಾನ ಸೂಚಕ ಅಂಶ ಕುಂಡಲಿಯಲ್ಲಿಯೂ ಹೆಚ್ಚಿನ ಗ್ರಹರು ದುಃಸ್ಥಾನ ಸ್ಥಿತರಿರುವುದು ಇವರಿಗೆ ಸಂತಾನದ ವಿಷಯದಲ್ಲಿ ದೋಷಗಳ ಸೂಚಕವಾಗಿದೆ. ಇದರಿಂದ ಇಬ್ಬರಿಗೂ ಆಯುರ್ವೇದ ಚಿಕಿತ್ಸೆಯ ಅವಶ್ಯಕತೆ ಇದೆ. ಅಲ್ಲದೇ ದೈವಾನುಗ್ರಹಕ್ಕಾಗಿ ಸೂಕ್ತ ಪರಿಹಾರದ ಅವಶ್ಯಕತೆಯೂ ಇದೆ.ಇವರಿಗೆ ಈಗ ಶುಕ್ರದೆಶೆ ಕುಜ ಭುಕ್ತಿ ನಡೆಯುತ್ತಿದ್ದು ಗೋಚಾರದಲ್ಲಿ ಸಪ್ತಮ ಶನಿ ಜನ್ಮ ಗುರು ಇದ್ದಾರೆ. ಇವು ಶುಭಾಶುಭಕರವಾಗಿದೆ. ಜುಲೈ 2014ರಲ್ಲಿ ಗುರು ಭುಕ್ತಿ ಬರುವಾಗ ಸೂಕ್ತ ಪರಿಹಾರ ಮತ್ತು ಚಿಕಿತ್ಸೆಯ ನಂತರ ಸಂತಾನ ಭಾಗ್ಯ ಸಿಗುವ ಸಾಧ್ಯತೆ ಇದೆ.ಪರಿಹಾರ: ಹವಳ ಧರಿಸಿ. ಕುಲದೇವತಾ ಆರಾಧನೆ ಮಾಡಿ. ಪಿತೃ ಕಾರ್ಯ ಮಾಡಿಸಿ. ಲಲಿತಾ ತ್ರಿಶತಿ ಪಠಿಸಿ. ಪವಮಾನ ಹೋಮ ಮಾಡಿಸಿ.ಹೆಸರು ಬೇಡ, ಮಡಿಕೇರಿ: ನೆಮ್ಮದಿ ಇಲ್ಲ. ವಾಸ್ತು ದೋಷವಿದ್ದರೆ ತಿಳಿಸಿ.

ಉತ್ತರ: ಇವರು ಕಳಿಸಿದ ನಕ್ಷೆಯಂತೆ ಮನೆಯ ಸುತ್ತ ಕಂಪೌಂಡ ಇಲ್ಲ. ಆದ್ದರಿಂದ ಉತ್ತರ ಮತ್ತು ಪೂರ್ವಕ್ಕೆ ಹೆಚ್ಚು ಸ್ಥಳ ಇರುವಂತೆ ಬೇಲಿ ಹಾಕಿಕೊಳ್ಳಿ. ಮನೆಯ ಮುಖ್ಯದ್ವಾರ ಉತ್ತರ ಮಧ್ಯದಲ್ಲಿದೆ. ಇದು ಯಜಮಾನನಿಗೆ ಆರ್ಥಿಕ ಸಂಕಷ್ಟ ತರುತ್ತದೆ. ಇದನ್ನೂ ಉತ್ತರ ಈಶಾನ್ಯಕ್ಕೆ ಸರಿಸಿ ಉಚ್ಛ ಬುಧನ ಸ್ಥಾನಕ್ಕೆ ಬರುವಂತೆ ನೋಡಿಕೊಳ್ಳಿ. ಮನೆಗೆ 9 ಬಾಗಿಲು  ಗೃಹಪೀಡೆ ತರುತ್ತದೆ. ಇದನ್ನು 10 ಬಿಟ್ಟು ಸಮಸಂಖ್ಯೆಯಲ್ಲಿ ಆಗುವಂತೆ ನೋಡಿಕೊಳ್ಳಿ. ಅಡುಗೆಮನೆ ಪಶ್ಚಿಮಕ್ಕಿರುವುದು ಅನಾವಶ್ಯಕ ಖರ್ಚು ವೆಚ್ಚ ತರುತ್ತದೆ. ಇದನ್ನು  ಆಗ್ನೇಯ ಮೂಲೆಗೆ ಬದಲಾಯಿಸಿಕೊಳ್ಳಿ. ನಿಮ್ಮ ಕೈಬರಹದ ನಕ್ಷೆಯಲ್ಲಿ ಮುಖ್ಯಾದ್ವಾರದ ಎದುರು ಇನ್ನೆರಡು ಬಾಗಿಲು ಇರುವಂತಿದೆ. ಇದು ಅಶುಭಕರ. ಒಂದು ಬಾಗಿಲನ್ನು ಸ್ವಲ್ಪ ಪಕ್ಕಕ್ಕೆ ಸರಿಸಿ ಒಂದೇ ನೇರದಲ್ಲಿ ಬರದಂತೆ ನೋಡಿಕೊಳ್ಳಿ. ಬಾವಿ ಪಶ್ಚಿಮ ನೈರುತ್ಯದಲ್ಲಿದೆ. ಇದು ಅಶುಭಕರ. ಆದ್ದರಿಂದ ಇದನ್ನು ಬೇಲಿಯಿಂದ ಹೊರಗೆ ಹಾಕಿ ಕಾಣದಂತೆ ಮುಚ್ಚಿಗೆ ಮಾಡಿಸಿ ಉಪಯೋಗಿಸಿ. ನಿಮ್ಮ ಕೈಬರದ ನಕ್ಷೆಯಲ್ಲಿ ಕೊಟ್ಟಿರುವ ವಿವರಗಳ ಪ್ರಕಾರ ಬೇರೆ ದೋಷ ಇದ್ದಂತೆ  ಕಾಣುವುದಿಲ್ಲ.ಶ್ರೀನಿವಾಸ ನಾಯಕ ಬೇಲೂರು: ಮನೆಯ ನಕ್ಷೆ ಕಳಿಸಿದ್ದೇನೆ. ಮನೆಯಲ್ಲಿ ಪ್ರಗತಿ ನೆಮ್ಮದಿ ಇಲ್ಲ. ಪರಿಹಾರ ತಿಳಿಸಿ.

ಉತ್ತರ: ನಕ್ಷೆಯಂತೆ ದೊಡ್ಡ ಗೇಟ್ ನೀಚ ಕೇತು ಸ್ಥಾನದಲ್ಲಿದೆ. ಇದನ್ನು ಚಿಕ್ಕ ಗೇಟ್ ಇರುವಲ್ಲಿ ಬದಲಾಯಿಸಿ. ಪಶ್ಚಿಮ ಮತ್ತು ದಕ್ಷಿಣಕ್ಕೆ ಕಟ್ಟೆ ಕಟ್ಟಿ ಹೂ ಗಿಡ ಬೆಳೆಸಿ. ಸ್ನಾನಗೃಹ ಈಶಾನ್ಯದಲ್ಲಿದೆ. ಅದರೆ ಅದರ ಜೊತೆಯಲ್ಲಿ ಹಂಡೆ ಇರುವುದು ಅಶುಭಕರ. ಈಶಾನ್ಯವು ಜಲಸ್ಥಾನವಾಗಿರುವುದರಿಂದ ಪಂಚಮಹಾ ಭೂತಗಳ ಪ್ರಕಾರ ವೈರತ್ವ ಏರ್ಪಡುತ್ತದೆ. ಆದುದರಿಂದ ನಿಮ್ಮ ಮನೆಯಲ್ಲಿ ನೆಮ್ಮದಿ ಇಲ್ಲವಾಗಿದೆ.

ಸ್ನಾನ ಗೃಹವಾಗಿರುವುದರಿಂದ ಮೂತ್ರ ವಿಸರ್ಜನೆಯನ್ನೂ ಮಾಡುವ ಸಂಭವವಿರುವುದರಿಂದ ದೇವ ಮೂಲೆಯನ್ನು ಅಪವಿತ್ರ ಗೊಳಿಸಿದಂತಾಗುತ್ತದೆ. ಆದ್ದರಿಂದ ಸ್ನಾನ ಗೃಹವನ್ನು ವಾಯುವ್ಯದ ಸ್ಥಾನದಲ್ಲಿ ಶೌಚಾಲಯದ ಪಕ್ಕ ನಿರ್ಮಿಸಿಕೊಳ್ಳಿ.ಮನೆಯ ಪಾಯ ಆಯತಾಕಾರವಾಗಿಲ್ಲ. ಆಗ್ನೇಯ ಕಡಿತ ಗೊಂಡಿದೆ. ಇದು ಮನೆಯ ಹೆಣ್ಣುಮಕ್ಕಳಿಗೆ ತೊಂದರೆ ತರುತ್ತದೆ. ಪಾಯ ಆಯತಾಕಾರ ಗೊಳಿಸಿ ಮನೆಗೆ ಸೇರಿಸಿ. ಶೌಚಾಲಯದಿಂದಾಗಿ ಪಶ್ಚಿಮದ ಶನಿಯ ಸ್ಥಾನ ಬೆಳೆದಿದೆ. ಇದು ಅಶುಭಕರ. ಇದನ್ನೂ ಮನೆಯ ಪಾಯದ ಒಳಗೇ ಬರುವಂತೆ ನಿರ್ಮಿಸಿ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.