ಜ. 6ರಂದು ಸರ್ವಧರ್ಮ ಉಚಿತ ವಿವಾಹ

7

ಜ. 6ರಂದು ಸರ್ವಧರ್ಮ ಉಚಿತ ವಿವಾಹ

Published:
Updated:

ಹರಿಹರ: ಪಟ್ಟಣದಲ್ಲಿ 2013ರ ಜನವರಿ 6ರಂದು ಸರ್ವಧರ್ಮ ಸಮ್ಮೇಳನ ಹಾಗೂ ಸರ್ವ ಧರ್ಮದವರ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮ ನಡೆಸಲಾಗುವುದು ಎಂದು ಜೆಡಿಎಸ್ ಹಿರಿಯ ಮುಖಂಡ ಎನ್.ಜಿ. ನಾಗನಗೌಡ ತಿಳಿಸಿದರು.ಇಲ್ಲಿನ ಎಚ್.ಕೆ. ವೀರಪ್ಪ ಸಮುದಾಯ ಭವನದಲ್ಲಿ `ಎಚ್. ಶಿವಪ್ಪ ಅಭಿಮಾನಿ ಬಳಗ~ದ ವತಿಯಿಂದ ಭಾನುವಾರ ನಡೆದ ಸಮಾಲೋಚನೆ ಸಭೆಯಲ್ಲಿ ಅವರು ಮಾತನಾಡಿದರು.ತಾಲ್ಲೂಕಿನ ಅಭಿವೃದ್ಧಿಯಲ್ಲಿ ಮಾಜಿ ಸಚಿವ ಎಚ್. ಶಿವಪ್ಪ ಅವರದ್ದೇ ಆದ ಕೊಡಗೆ ಇದೆ. ಅವರ ಸಾಧನೆ ಹಾಗೂ ರಾಜಕೀಯ ಮುತ್ಸದ್ದಿತನವನ್ನು ವಿರೋಧಿಗಳೂ ಪ್ರಶಂಸಿಸುತ್ತಾರೆ.ಅವರು ತಮ್ಮ ಅಧಿಕಾರಿ ಅವಧಿಯಲ್ಲಿ ಅನೇಕ ಜನಪರ ಕಾರ್ಯಗಳನ್ನು ಮಾಡಿದ್ದಾರೆ. ಅವರಿಂದ ಜೀವನದಲ್ಲಿ ಸ್ಫೂರ್ತಿ ಪಡೆದು ಸಾಧನೆ ಮಾಡುವ ಜತೆಗೆ ಉತ್ತಮ ಸ್ಥಾನಕ್ಕೇರಿದ ಅನೇಕ ಅಭಿಮಾನಿಗಳಿಗೆ ಅವರ ಹೆಸರಿನಲ್ಲಿ ಸಂಘ ನಿರ್ಮಿಸಿಕೊಂಡು ಜಾತ್ಯತೀತ ಹಾಗೂ ಪಕ್ಷಾತೀತವಾಗಿ ಕೆಲಸ ಮಾಡುವ ಆಸೆ ಇತ್ತು. ಎಲ್ಲಾ ಅಭಿಮಾನಿಗಳ ಆಸೆಗೆ ಇಂದು ವೇದಿಕೆ ಸೃಷ್ಟಿಯಾಗಿದೆ.ಎಚ್. ಶಿವಪ್ಪ ಅವರ ಹೆಸರಿನಲ್ಲಿ ಜನರಿಗೆ ಹಾಗೂ ಸಮುದಾಯಕ್ಕೆ ಉಪಯೋಗವಾಗುವ ಕಾರ್ಯಗಳನ್ನು ಪ್ರಾರಂಭಿಸಲಾಗುವುದು. ಸರ್ವಧರ್ಮ ಸಮ್ಮೇಳನ ಹಾಗೂ ಸಾಮೂಹಿಕ ವಿವಾಹದ ಮೂಲಕ ಬಳಗದ ಕಾರ್ಯಕ್ರಮಕ್ಕೆ ಚಾಲನೆ ದೊರೆಯಲಿದೆ ಎಂದರು.ಸಭೆಯಲ್ಲಿದ್ದ ಅಭಿಮಾನಿಗಳು ಬಳಗದ ಕಾರ್ಯಕ್ರಮಕ್ಕೆ ದೇಣಿಗೆ ನೀಡುತ್ತೇವೆ ಎಂದು ಘೋಷಣೆ ಮಾಡಿದ ಹಣದ ಮೊತ್ತವೇ ಲಕ್ಷಕ್ಕೂ ಮೀರಿತು.ಸಭೆಯಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯ ಎಚ್.ಎಸ್. ಶಿವಶಂಕರ್, ನಗರಸಭೆ ಅಧ್ಯಕ್ಷ ವಿಶ್ವನಾಥ ಭೂತೆ, ನಗರಸಭೆ ಸದಸ್ಯ ಡಿ. ಹೇಮಂತರಾಜ್, ಎಚ್. ವಿಶ್ವನಾಥಪ್ಪ,ನಂದಿಗೌಡ, ಡಿ.ಜಿ. ರಘುನಾಥ, ಸೋಮಶೇಖರಪ್ಪ, ಮಹಮದ್ ಹಯಾತ್‌ಸಾಬ್, ಪ್ರಸನ್ನಕುಮಾರ್, ನಾಗಪ್ಪ, ನಜೀರ್ ಅಹಮದ್, ಬಿಳಸನೂರು ರಾಜಣ್ಣ, ಎಚ್. ನಿಜಗುಣ, ತಿಮ್ಮಣ್ಣ ಬಂಡೆಪ್ಪ, ಬಣಕಾರ ಪಾಲಾಕ್ಷಪ್ಪ, ಪೂಜಾರ್ ಹನುಮಂತಪ್ಪ, ಲತೀಫ್‌ಸಾಬ್, ಶ್ರೀಕಾಂತ್ ಉಪಸ್ಥಿತರಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry