ಜ. 7ರಿಂದ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮ

7

ಜ. 7ರಿಂದ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮ

Published:
Updated:

ಅರಸೀಕೆರೆ: ತಾಲ್ಲೂಕಿನ ಮಾಡಾಳು ಶಿವಬಸವ ಕುಮಾರಾಶ್ರಮದಲ್ಲಿ ಹಾರನಹಳ್ಳಿ ಕೋಡಿಮಠದ ಲಿಂಗೈಕ್ಯ ನೀಲಲೋಚನ ಸ್ವಾಮೀಜಿ ಅವರ 18ನೇ ವರ್ಷ ದ ಪುಣ್ಯ ಸಂಸ್ಮರಣಾರಾಧನೆ ಅಂಗವಾಗಿ  ಜ.7 ಮತ್ತು 8ರಂದು ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿದೆ ಎಂದು ಆಶ್ರಮದ ತೋಂಟದಾರ್ಯ ಸ್ವಾಮೀಜಿ ಭಾನುವಾರ ತಿಳಿಸಿದರು. ಜ. 7ರಂದು ಸಂಜೆ 6ಗಂಟೆಗೆ ಮಠದ ಆವರಣದಲ್ಲಿ ಆಯೋಜಿಸಲಾಗಿರುವ ವೇದಿಕೆಯಲ್ಲಿ ಬೆಂಗಳೂರು ಕಾಳಿಕಾಶ್ರಮದ ಯೋಗೀಶ್ವರ ಋಷಿಕುಮಾರ ಗುರುಗಳ ಸಾನಿಧ್ಯದಲ್ಲಿ ಧಾರ್ಮಿಕ ಕಾರ್ಯಕ್ರಮದ ಉದ್ಘಾಟನೆಯನ್ನು ಬೆಂಗಳೂರು ಮುಕ್ತಿನಾಗ ಕ್ಷೇತ್ರದ ಸುಬ್ರಹ್ಮಣ್ಯಾನಂದ ಮಹರ್ಷಿಗಳು ನೆರವೇರಿಸುವರು.ಉಪ ಸಭಾಪತಿ ಪುಟ್ಟಣ್ಣ, ಶಾಸಕರಾದ ಕೆ.ಎಂ ಶಿವಲಿಂಗೇಗೌಡ, ನೆ.ಲ ನರೇಂದ್ರಬಾಬು, ಮಾಜಿ ಶಾಸಕ ಎ.ಎಸ್. ಬಸವರಾಜು, ಕಾಂಗ್ರೆಸ್ ಮುಖಂಡ ಜೆ.ಪಿ.ಎನ್ ಜಯಣ್ಣ, ಪುರಸಭಾ ಮಾಜಿ ಅಧ್ಯಕ್ಷ ಕೆ.ಸಿ ಯೋಗೀಶ್, ಡಿವೈಎಸ್‌ಪಿ. ಜೆ.ಕೆ.ರಶ್ಮಿ  ಭಾಗವಹಿಸಲಿದ್ದಾರೆ ಎಂದು ಅವರು ಹೇಳಿದರು.ಜ. 8ರಂದು ಮುಂಜಾನೆ ಮಠದ ಕತೃ ಗದ್ದುಗೆ ಶಿವಲಿಂಗ ಸ್ವಾಮೀಜಿ ಹಾಗೂ ನೀಲಲೋಚನ ಸ್ವಾಮೀಜಿ ಗದ್ದುಗೆಗೆ ರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ ಮತ್ತು ವಿಶೇಷ ಪೂಜಾ ಕೈಂಕರ್ಯಗಳು ಶಾಸ್ತ್ರೋಕ್ತವಾಗಿ ನಡೆಯಲಿದೆ. ಬೆಳಿಗ್ಗೆ 7ಗಂಟೆಗೆ ಸದಾಶಿವಪೇಟೆ ಗವಿಗೇಶ್ವರ ಸ್ವಾಮೀಜಿ ಅವರಿಂದ ಶ್ರೀಗಳ ಪುರಾಣ ಪ್ರವಚನ ನಡೆಯಲಿದೆ.\ನಂತರ ಲಿಂಗೈಕ್ಯ ಶಿವಲಿಂಗ ಸ್ವಾಮೀಜಿ, ನೀಲಲೋಚನ ಸ್ವಾಮೀಜಿ ಅವರ ಭಾವಚಿತ್ರ ಮತ್ತು ಗ್ರಾಮದ ದೇವರಾದ ತಿರುಮಲ ದೇವರ ಪಲ್ಲಕ್ಕಿ ಉತ್ಸವ ವಿಜೃಂಭಣೆಯಿಂದ ಜರುಗಲಿದೆ ಎಂದರು.

ಬೆಳಿಗ್ಗೆ 10 ಗಂಟೆಗೆ ನೊಣವಿನಕೆರೆ ಕಾಡಸಿದ್ದೇಶ್ವರ ಮಠದ ಕರಿವೃಷಭ ಶಿವಯೋಗೀಶ್ವರ ಶಿವಾಚಾರ್ಯ ಸ್ವಾಮೀಜಿ ಮತ್ತು ತಿಪಟೂರು ಷಡಕ್ಷರೀ ಮಠದ ರುದ್ರಮುನಿ ಸ್ವಾಮೀಜಿ  ಸಾನಿಧ್ಯದಲ್ಲಿ ಶಿವಾನುಭವ ಕಾರ್ಯಕ್ರಮದ ಉದ್ಘಾಟನೆಯನ್ನು ಇಂಧನ ಸಚಿವೆ ಶೋಭಾ ಕರಂದ್ಲಾಜೆ ನೆರವೇರಿಸುವರು.ಪಾಂಡೋಮಟ್ಟಿ ವಿರಕ್ತ ಮಠದ ಗುರುಬಸವಾನಂದ ಸ್ವಾಮೀಜಿ, ಮಾಡಾಳು ವಿರಕ್ತ ಮಠದ ರುದ್ರಮುನಿ ಸ್ವಾಮೀಜಿ, ಕುಪ್ಪೂರು ಗದ್ದಿಗೆ ಮಠದ ಯತೀಶ ಶಿವಾಚಾರ್ಯ ಸ್ವಾಮೀಜಿ, ಚಲನ ಚಿತ್ರ ನಿರ್ದೇಶಕ ಸಾಯಿಪ್ರಕಾಶ್, ಚಿತ್ರನಟರಾದ ದೊಡ್ಡಣ್ಣ, ರಾಂಕುಮಾರ್, ಚಂದ್ರಿಕಾ, ಕರಿಬಸವಯ್ಯ, ಮಾಜಿ ಶಾಸಕ ಬಿ.ಶಿವರಾಂ, ಜಿ.ವಿ. ಸಿದ್ದಪ್ಪ, ಕೆಪಿ. ಪ್ರಭುಕುಮಾರ್, ಜಿ.ಎಸ್. ಪರಮೇಶ್ವರಪ್ಪ ಜಿ.ಪಂ ಮಾಜಿ ಅಧ್ಯಕ್ಷ ಜಿ.ಎಸ್. ಗುರುಸಿದ್ದಪ್ಪ ಬಿಜೆಪಿ ಮುಖಂಡ ಹಾರನ ಹಳ್ಳಿ ಸಿದ್ದಪ್ಪ ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry