ಜ.15 ರಂದು 120 ಅಭ್ಯರ್ಥಿಗಳ ಪಟ್ಟಿ: ಡಿವಿಎಸ್

7

ಜ.15 ರಂದು 120 ಅಭ್ಯರ್ಥಿಗಳ ಪಟ್ಟಿ: ಡಿವಿಎಸ್

Published:
Updated:

ಮೈಸೂರು: `ಮುಂಬರುವ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ 2013ರ ಜನವರಿ 15 ರಂದು ಮೊದಲ ಹಂತದಲ್ಲಿ 120 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲಾಗುವುದು' ಎಂದು ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಹೇಳಿದರು.`ರಾಜ್ಯದಲ್ಲಿ ಐದು ತಂಡಗಳಲ್ಲಿ ಪಕ್ಷದ ಕಾರ್ಯಕರ್ತರ ಸಭೆ ನಡೆಸಲಾಗುತ್ತಿದೆ. ಈ ತಿಂಗಳ ಅಂತ್ಯಕ್ಕೆ ಪಕ್ಷದ ಅಧ್ಯಕ್ಷರಿಗೆ ಪ್ರವಾಸದ ವರದಿ ನೀಡಲಾಗುವುದು. ಬಿಜೆಪಿಯಲ್ಲಿ ಈ ಹಿಂದೆ ಗೊಂದಲ ಇದ್ದದ್ದು ನಿಜ. ಆದರೆ, ಡಿ. 9 ರಿಂದ ಅವೆಲ್ಲ ಪರಿಹಾರವಾಗಿವೆ. ನಾನಿಲ್ಲದೇ ಬಿಜೆಪಿ ಬೆಳೆಯಲು ಸಾಧ್ಯವಿಲ್ಲ, ನನ್ನಿಂದಲೇ ಎಲ್ಲ ಎನ್ನುವವರು ಪಕ್ಷದಿಂದ ಹೊರ ನಡೆದಿದ್ದಾರೆ. ಹೀಗಾಗಿ ಪಕ್ಷದಲ್ಲಿ ಈಗ ಯಾವುದೇ ಗೊಂದಲಕ್ಕೆ ಆಸ್ಪದವಿಲ್ಲ' ಎಂದು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.`ಪ್ರಾದೇಶಿಕ ಪಕ್ಷಗಳು ಈ ಹಿಂದೆಯೂ ಇದ್ದವು. ಉದಯದಲ್ಲೇ ಅಸ್ತಂಗತವೂ ಆಗಿದ್ದವು. ಈಗಲೂ ಹಾಗೆಯೇ ಆಗಲಿದೆ. ಕೇವಲ ಬೆರಣಿಕೆಯಷ್ಟು ಶಾಸಕರು ನೂತನ ಪಕ್ಷದಲ್ಲಿ ಗುರುತಿಸಿಕೊಳ್ಳಬಹುದು.ಆದರೆ, ಈ ಹಿಂದೆ ಹೇಳಿದಂತೆ 70 ಶಾಸಕರು, 25 ವಿಧಾನ ಪರಿಷತ್ ಸದಸ್ಯರು ಹಾಗೂ 12 ಜನ ಸಚಿವರು ಹೋಗುವುದಿಲ್ಲ.

ಹಾವೇರಿ ಸಮಾವೇಶದಲ್ಲಿ ಇದು ಬಹಿರಂಗವಾಗಿದೆ. ಅಲ್ಲದೆ, ಈಗಾಗಲೇ ಸಮಾವೇಶದಲ್ಲಿ ಭಾಗವಹಿಸಿರುವ 14 ಶಾಸಕರ ಪೈಕಿ 5 ಮಂದಿ ಕ್ಷಮೆ ಯಾಚಿಸಿದ್ದಾರೆ. ಇನ್ನುಳಿದ ಶಾಸಕರೂ ಬಿಜೆಪಿಯಲ್ಲೇ ಇರಲಿದ್ದಾರೆ' ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry