ಶುಕ್ರವಾರ, ಫೆಬ್ರವರಿ 26, 2021
30 °C

ಜ.18ಕೆħ ಚಿನĺದ ಬಾಂಡ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜ.18ಕೆħ ಚಿನĺದ ಬಾಂಡ್‌

ನವದೆಹಲಿ (ಪಿಟಿಐ): ಭೌತಿಕ ಚಿನ್ನದ ಬೇಡಿಕೆ ಕಡಿಮೆ ಮಾಡುವ ಉದ್ದೇಶದ ಎರಡನೆ ಹಂತದ ಚಿನ್ನದ ಬಾಂಡ್‌ ಯೋಜನೆಗೆ ಇದೇ 18ರಂದು ಚಾಲನೆ ನೀಡಲಾಗುತ್ತಿದೆ.ಚಿನ್ನದ ಬಾಂಡ್‌ಗಳ ಖರೀದಿಗೆ ಜ. 18ರಿಂದ ಜ. 22ರವರೆಗೆ ಐದು ದಿನಗಳ ಕಾಲ ಅವಕಾಶ  ಕಲ್ಪಿಸಿಕೊಡ ಲಾಗುವುದು. ಈ ಚಿನ್ನದ ಬಾಂಡ್‌ಗಳಲ್ಲಿ ಹಣ ತೊಡಗಿಸಲು ಅರ್ಹ ಗ್ರಾಹಕರ ಮನವೊಲಿಸಬೇಕು ಎಂದು  ಕೇಂದ್ರ ಹಣಕಾಸು ಸಚಿವ ಅರುಣ್‌ ಜೇಟ್ಲಿ ಅವರು ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ ಮುಖ್ಯಸ್ಥರಿಗೆ ಮನವಿ ಮಾಡಿಕೊಂಡಿದ್ದಾರೆ.ಜನರಲ್ಲಿ ಈ ಬಗ್ಗೆ ಹೆಚ್ಚಿನ ಅರಿವು ಮೂಡಿಸಲು ವ್ಯಾಪಕ ಪ್ರಚಾರ ಕಾರ್ಯಕ್ರಮ ಹಮ್ಮಿಕೊಳ್ಳಲೂ ಸರ್ಕಾರನಿರ್ಧರಿಸಿದೆ. ಚಿನ್ನ ನಗದೀಕರಣ: ಚಿನ್ನ ನಗದೀಕರಣ ಯೋಜನೆಯು ನಿಧಾನವಾಗಿ ಜನಪ್ರಿಯ ಗೊಳ್ಳುತ್ತಿದ್ದು, ಇದುವರೆಗೆ 500 ಕೆಜಿಗಳಿಗಿಂತ ಹೆಚ್ಚಿನ ಪ್ರಮಾಣದ ಚಿನ್ನ ಸಂಗ್ರಹಗೊಂಡಿದೆ ಎಂದು ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ಶಕ್ತಿಕಾಂತ ದಾಸ್‌ ತಿಳಿಸಿದ್ದಾರೆ.ಚಿನ್ನ ನಗದೀಕರಣ ಯೋಜನೆಯಡಿ ಗ್ರಾಹಕರು ತಮ್ಮ ಬಳಿ ಇರುವ ಚಿನ್ನವನ್ನು ಬ್ಯಾಂಕ್‌ನಲ್ಲಿ ಠೇವಣಿ ಇಡಲು ಅವಕಾಶ ಕಲ್ಪಿಸಿಕೊಡಲಾಗಿದೆ. ಠೇವಣಿ ಇರಿಸಿದ ಚಿನ್ನವನ್ನು ಬ್ಯಾಂಕ್‌ಗಳು ಹರಾಜು ಹಾಕಬಹುದು ಇಲ್ಲವೇ ಚಿನ್ನಾಭರಣ ತಯಾರಕರಿಗೆ ಸಾಲ ನೀಡಬಹುದು. ಠೇವಣಿದಾರರು ವಾರ್ಷಿಕ

ಶೇ 2.50ರಷ್ಟು ಬಡ್ಡಿ ಪಡೆಯಲುಅವಕಾಶ ಇದೆ.ಮನೆ, ದೇವಸ್ಥಾನ, ಟ್ರಸ್ಟ್‌ಗಳಲ್ಲಿ ಬಳಕೆಯಾಗದೆ ನಿಷ್ಕ್ರಿಯವಾಗಿರುವ ಚಿನ್ನದ ಸಂಗ್ರಹವನ್ನು ಚಲಾವಣೆಗೆ ತರಲು ಈ ಯೋಜನೆ ಅವಕಾಶ ಒದಗಿಸಿದೆ.

ದೇಶದಲ್ಲಿ ನಿರರ್ಥಕವಾಗಿರುವ₹ 52 ಲಕ್ಷ ಕೋಟಿ ಮೌಲ್ಯದ 20 ಸಾವಿರ ಟನ್‌ ಚಿನ್ನವನ್ನು ಮತ್ತೆ ಚಲಾವಣೆಗೆ ತರಲು ಚಿನ್ನದ ನಗದೀಕರಣ ಯೋಜನೆ ರೂಪಿಸಲಾಗಿದೆ. ಆರಂಭದಲ್ಲಿ ಇದಕ್ಕೆ ನಿರುತ್ತೇಜಕ ಪ್ರತಿಕ್ರಿಯೆ ದೊರೆತಿತ್ತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.