ಝೀ ಪತ್ರಕರ್ತರಿಂದ ಜಿಂದಾಲ್ ವಿರುದ್ಧ ಮಾನನಷ್ಟ ಮೊಕದ್ದಮೆ

7

ಝೀ ಪತ್ರಕರ್ತರಿಂದ ಜಿಂದಾಲ್ ವಿರುದ್ಧ ಮಾನನಷ್ಟ ಮೊಕದ್ದಮೆ

Published:
Updated:

ನವದೆಹಲಿ (ಪಿಟಿಐ): ಝೀ ಟಿವಿ ಸುದ್ದಿ ಸಂಪಾದಕ ಸುಧೀರ್ ಚೌಧರಿ ಅವರು ಕಾಂಗ್ರೆಸ್ ಸಂಸದ ನವೀನ್ ಜಿಂದಾಲ್ ಮತ್ತು ಜಿಂದಾಲ್ ಸ್ಟೀಲ್ ಮತ್ತು ಪವರ್ ಲಿಮಿಟೆಡ್‌ನ  (ಜೆಎಸ್‌ಪಿಎಲ್) 16 ಅಧಿಕಾರಿಗಳ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.ತಮ್ಮ ವರ್ಚಸ್ಸಿಗೆ ಮಸಿ ಬಳಿಯುವ ಉದ್ದೇಶದಿಂದ ಜಿಂದಾಲ್ ಮತ್ತು ಅವರ ಅಧಿಕಾರಿಗಳು ಉದ್ದೇಶಪೂರ್ವಕವಾಗಿ ಸುಳ್ಳು ಹೇಳಿಕೆ ನೀಡುತ್ತಿದ್ದಾರೆ ಎಂದು ಸುಧೀರ್ ಚೌಧರಿ ಹೇಳಿದ್ದಾರೆ.ತಮ್ಮ ವಿರುದ್ಧ 100 ಕೋಟಿ ರೂಪಾಯಿ ಸುಲಿಗೆ ಪ್ರಕರಣ ದಾಖಲಿಸುವಾಗ `ಜೆಎಸ್‌ಪಿಎಲ್' ನಿರ್ದೇಶಕರು ತಮ್ಮ ತೇಜೋವಧೆ ಮಾಡುವಂತಹ ಹೇಳಿಕೆ ನೀಡಿದ್ದಾರೆ ಎಂದು ಚೌಧರಿ ಆರೋಪಿಸಿದ್ದಾರೆ. ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ ಜಯ್ ತರೇಜ ಚೌಧರಿ ವಕೀಲರ ವಾದವನ್ನು ಆಲಿಸಿ, ಆದೇಶ ಕಾಯ್ದಿಟ್ಟು ಜನವರಿ 3ಕ್ಕೆ ವಿಚಾರಣೆ ಮುಂದೂಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry