`ಝೀ' ಪತ್ರಕರ್ತರ ಜಾಮೀನು ಅರ್ಜಿ ವಜಾ

7

`ಝೀ' ಪತ್ರಕರ್ತರ ಜಾಮೀನು ಅರ್ಜಿ ವಜಾ

Published:
Updated:

ನವದೆಹಲಿ ( ಪಿಟಿಐ): ಸುಲಿಗೆ ಯತ್ನ ಆರೋಪದ ಮೇಲೆ ಬಂಧಿತರಾಗಿರುವ `ಝೀ' ಸಮೂಹದ ಇಬ್ಬರು ಹಿರಿಯ ಪತ್ರಕರ್ತರ ಜಾಮೀನು ಅರ್ಜಿಯನ್ನು ಇಲ್ಲಿನ ಮೆಟ್ರೋಪಾಲಿಟನ್ ನ್ಯಾಯಾಧೀಶ ರಾಜಿಂದರ್ ಸಿಂಗ್ ಅವರು ಸೋಮವಾರ ವಜಾಗೊಳಿಸಿದ್ದಾರೆ.`ಝೀ ನ್ಯೂಸ್' ಮುಖ್ಯಸ್ಥ ಸುಧೀರ್ ಚೌಧರಿ ಹಾಗೂ `ಝೀ ಬಿಸಿನೆಸ್' ಸಂಪಾದಕ ಸಮೀರ್ ಅಹ್ಲುವಾಲಿಯ ಅವರು ಜಾಮೀನು ಮೇಲೆ ಬಿಡುಗಡೆಯಾಗಲು ಹೊಸ ಕಾರಣಗಳನ್ನು ನೀಡಿಲ್ಲ ಎಂದು ರಾಜಿಂದರ್ ಸಿಂಗ್ ಹೇಳಿದ್ದಾರೆ.ಇವರಿಬ್ಬರು ಮೊದಲ ಬಾರಿ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ನವೆಂಬರ್ 28ರಂದು ನ್ಯಾಯಾಲಯ ವಜಾಗೊಳಿಸಿತ್ತು.ತನಿಖೆಗೆ ಸಿದ್ಧ: ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಎದುರಿಸಲು ಸಿದ್ಧ ಎಂದು  `ಝೀ' ಸಮೂಹದ ಅಧ್ಯಕ್ಷ ಸುಭಾಷ್ ಚಂದ್ರ ಅವರು ಸೋಮವಾರ ಪೊಲೀಸರಿಗೆ ತಿಳಿಸಿದ್ದಾರೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry