`ಝೀ' ಪತ್ರಕರ್ತರ ಜಾಮೀನು ಅರ್ಜಿ ವಿಚಾರಣೆ ನಾಳೆ

7

`ಝೀ' ಪತ್ರಕರ್ತರ ಜಾಮೀನು ಅರ್ಜಿ ವಿಚಾರಣೆ ನಾಳೆ

Published:
Updated:

ನವದೆಹಲಿ (ಪಿಟಿಐ): ಕಾಂಗ್ರೆಸ್ ಸಂಸದ, ಉದ್ಯಮಿ ನವೀನ್ ಜಿಂದಾಲ್ ಅವರಿಂದ ರೂ. 100 ಕೋಟಿ ಹಣ ಸುಲಿಗೆ ಮಾಡಲು ಯತ್ನಿಸಿದ ಆರೋಪದಡಿ ಬಂಧಿತರಾಗಿರುವ `ಝೀ' ನ್ಯೂಸ್‌ನ ಇಬ್ಬರು ಹಿರಿಯ ಪತ್ರಕರ್ತರ ಜಾಮೀನು ಅರ್ಜಿಯ ವಿಚಾರಣೆಯನ್ನು ದೆಹಲಿ ಕೋರ್ಟ್ ಸೋಮವಾರಕ್ಕೆ ಮುಂದೂಡಿದೆ.

ವಿಚಾರಣಾಧಿಕಾರಿಯ ಗೈರು ಹಾಜರಾತಿಯಿಂದಾಗಿ ವಿಚಾರಣೆ ಮುಂದೂಡಲಾಗಿದೆ ಎಂದು ತಿಳಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣಾಧಿಕಾರಿ ಹಾಗೂ ಸರ್ಕಾರಿ ವಕೀಲರು ಗೈರು ಹಾಜರಾಗಿರುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ ಗೌರವ್ ರಾವ್, ಈ ಸಂಬಂಧ ಲಿಖಿತ ವಿವರಣೆ ನೀಡುವಂತೆ ಸಂಬಂಧಿಸಿದ ಪೊಲೀಸ್ ಠಾಣೆ ವ್ಯಾಪ್ತಿಯ ಡಿಸಿಪಿ ಅವರಿಗೆ ಸೂಚನೆ ನೀಡಿದರು.

`ಈ ಕೋರ್ಟ್‌ನ ಅನುಮತಿ ಇಲ್ಲದೆ ಈ ಇಬ್ಬರೂ ಹೇಗೆ ಗೈರು ಹಾಜರಾದರು, ಇದಕ್ಕೆ ಸಂಬಂಧಿಸಿದ ಡಿಸಿಪಿ ಲಿಖಿತ ವಿವರಣೆ ನೀಡಬೇಕು' ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry