ಝೀ ಸುದ್ದಿ ವಾಹಿನಿ ಸಂಪಾದಕರಿಗೆ ಜಾಮೀನು

7

ಝೀ ಸುದ್ದಿ ವಾಹಿನಿ ಸಂಪಾದಕರಿಗೆ ಜಾಮೀನು

Published:
Updated:

ನವದೆಹಲಿ (ಪಿಟಿಐ): ಜಿಂದಾಲ್ ಕಂಪೆನಿಯಿಂದ ಹಣ ಬೇಡಿಕೆ ಇಟ್ಟ ಆರೋಪಕ್ಕೆ ಸಂಬಂಧ ಇಪ್ಪತ್ತು ದಿನಗಳ ಜೈಲು ವಾಸ ಅನುಭವಿಸಿದ್ದ ಝೀ ಸುದ್ದಿ ವಾಹಿನಿಯ ಇಬ್ಬರು ಸಂಪಾದಕರಿಗೆ ನ್ಯಾಯಾಲಯ ಸೋಮವಾರ ಜಾಮೀನು ನೀಡಿದೆ.ಅರ್ಜಿಯ ವಿಚಾರಣೆ ನಡೆಸಿದ ಹೆಚ್ಚುವರಿ ಸೆಷೆನ್ಸ್ ನ್ಯಾಯಾಲಯದ ನ್ಯಾಯಧೀಶ ರಾಜ್ ರಜನಿ ಮಿತ್ರಾ ಅವರು ಝೀ ನ್ಯೂಸ್ ಸಂಪಾದಕರಾದ ಸುಧೀರ್ ಚೌಧರಿ ಮತ್ತು ಝೀ ಬ್ಯುಸಿನೆಸ್ ಸಂಪಾದಕ ಸಮೀರ್ ಅಹ್ಲುವಾಲಿಯಾ ಅವರಿಗೆ ಜಾಮೀನು ನೀಡಿದ್ದಾರೆ. ಜಾಮೀನು ನೀಡುವ ವೇಳೆ 50 ಸಾವಿರ ರೂಪಾಯಿ ಬಾಂಡ್ ಕೊಟ್ಟು, ಪಾಸ್‌ಪೋರ್ಟ್‌ಗಳನ್ನು ಸಲ್ಲಿಸುವಂತೆ ಸೂಚಿಸಲಾಗಿದೆ. ನ್ಯಾಯಾಲಯದ ಅನುಮತಿ ಇಲ್ಲದೇ ದೇಶ ಬಿಡದಂತೆಯೂ ಸೂಚಿಸಲಾಗಿದೆ.ಹಣ ಸುಲಿಗೆ ಯತ್ನ ಆರೋಪದ ಹಿನ್ನೆಲೆಯಲ್ಲಿ ನವೆಂಬರ್ 27ರಂದು ಇವರಿಬ್ಬರನ್ನು ದೆಹಲಿ ಪೊಲೀಸರು ಬಂಧಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry